ಯರಗಟ್ಟಿ :ಯರಗಟ್ಟಿ ತಾಲೂಕಿನ ಮುರಗೋಡ ಹಾಗೂ ಯರಗಟ್ಟಿ ವಲಯಗಳ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ಜರುಗಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನದಂಡಿನ ಎಸ್, ಎಸ್ ಎಲ್ ಸಿ ಫಲಿತಾಂಶ ಕುರಿತು ಮಾತನಾಡುತ್ತಾ ಪ್ರಾಥಮಿಕ ಶಾಲಾ ಶಿಕ್ಷಣ ಹೆಚ್ಚು ಪರಿಣಾಮಕಾರಿ ಆಗಿರಬೇಕು. ನಲಿಕಲಿ ತರಗತಿ ಗಳು ಹೆಚ್ಚು ಪರಿಣಾಮಕಾರಿ ಆದರೆ ಮುಂದಿನ ತರಗತಿ ಗಳ ಶಿಕ್ಷಣ ಗುಣಮಟ್ಟದ ರೀತಿಯಲ್ಲಿ ಸಾಗಲು ಸಾಧ್ಯ. ಶಾಲಾ ಪ್ರಾರಂಭೋತ್ಸವ ನಿಯಮಾನುಸಾರ ಯಾರನ್ನು ಕರೆಯಬೇಕೆಂದು ಸರಕಾರ ನಿರ್ದೇಶನ ನೀಡಿದ್ದು ಆ ನಿಯಮಾವಳಿಗಳನ್ನು ಪಾಲಿಸಿಕೊಂಡು ಮಾಡಿರಿ. ಕೋವಿಡ್ ಅಲೆಯ ಕುರಿತು ಎಚ್ಚರಿಕೆ ವಹಿಸಿರಿ. ಮುನ್ನೆಚ್ಚರಿಕೆ ಕ್ರಮ ಅವಶ್ಯಕ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮೈತ್ರಾದೇವಿ ವಸ್ತ್ರದ ಮಾತನಾಡಿ, ಮಕ್ಕಳ ಬಿಸಿಯೂಟ ಯೋಜನೆ ಕುರಿತು ಸಮಗ್ರವಾಗಿ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ವಸಂತ ಬಡಿಗೇರ, ಮಲ್ಲಿಕಾರ್ಜುನ ಮಲಕನ್ನವರ, ಎನ್, ಬಿ, ಪೆಂಟೇದ, ರಫೀಕ್. ಮುರಗೋಡ, ಬಾಳೇಶ ಸಿದ್ದಬಸನ್ನವರ, ಯರಗಟ್ಟಿ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಎ. ಎ. ಮಕ್ತುಂನವರ, ಶಿಕ್ಷಣ ಸಂಯೋಜಕರಾದ ಎಂ ಬಿ ಕಡಕೋಳ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ ಎಲ್ ಭಜಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೈ ಬಿ ಕಡಕೋಳ ಸಮನ್ವಯ ಶಿಕ್ಷಣ ಕುರಿತು ಮಾಹಿತಿಯನ್ನು ನೀಡಿದರು. ಮನೋಹರ ಚೀಲದ ನಲಿಕಲಿ ತರಗತಿ ಪ್ರಕ್ರಿಯೆ ಯಲ್ಲಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳನ್ನು ಕುರಿತು ಬಿಆರ್ ಪಿ ಎಂ ಬಿ ಕರಡಿಗುಡ್ಡ ತಂತ್ರಜ್ಞಾನ ಆಧಾರಿತ ಎಸ್ ಎ ಟಿ ಎಸ್ ಮಾಹಿತಿಯನ್ನು ನೀಡಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ ಎಸ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಹಾಗೂ ಕಾರ್ಯಕ್ರಮ ನಿರೂಪಿಸಿದರು. ವಸಂತ ಬಡಿಗೇರ ವಂದಿಸಿದರು