ಗೋಕಾಕ – ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ “ನಂದಿಭೂಷಿತ ಕಪ್ಪತ ಜ್ಯೋತಿ ಯಾತ್ರೆಯ” ಪೂರ್ವಭಾವಿ ಸಿದ್ಧತಾ ಸಭೆಯು ಸುರೇಶ ಕುಂಬಾರರವರ ಫ್ಯಾಕ್ಟರಿಯಲ್ಲಿ ಜರುಗಿತು.
ಬಾಲಚಂದ್ರ ಜಾಬಶೆಟ್ಟಿ, ಗಂಗಾಧರ ಗಿರಿಜನ್ನವರ, ಜಗದೀಶ ತೇಲಿ, ತೇಜಪ್ಪ ತೇಲಿ, ಸುರೇಶ ಕುಂಬಾರ, ಮೇಲ್ಮಟ್ಟಿಯ ಹಲಕರ್ಣಿ ಸರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಕೈಗೊಳ್ಳಲಾದ ಕೆಲವು ತೀರ್ಮಾನಗಳು;
* ಕಪ್ಪತಜ್ಯೋತಿ ಯಾತ್ರೆಗೆ 3 ಫೂಟು ಎತ್ತರದ ಜೋಡು ನಂದಿಗಳನ್ನು ಪುಣೆಯಿಂದ ತರಿಸಿಕೊಳ್ಳುವ ಜವಾಬ್ದಾರಿಯನ್ನು ಸುರೇಶ ಕುಂಬಾರ ವಹಿಸಿಕೊಂಡಿದ್ದು ಅದರ ವೆಚ್ಚ ಅಂದಾಜು ರೂ. 30000/- ಗಳ ಭಕ್ತಿ ಸೇವೆಯನ್ನು ಸುರೇಶ ಕುಂಬಾರ ಮಾಡಿದ್ದಾರೆ.
* ಜ್ಯೋತಿ ಯ ಮಾದರಿಯನ್ನು ಫೋಟೋದಲ್ಲಿ ತೋರಿಸಲಾಗಿದ್ದು ಅದರ ಭಕ್ತಿ ಸೇವೆಯನ್ನು ಜಗದೀಶ ತೇಲಿಯವರು ಮಾಡಿರುತ್ತಾರೆ.
* ಕೊಣ್ಣೂರಿನಿಂದಲೇ ಜ್ಯೋತಿ ಯಾತ್ರೆಗಾಗಿ ತೇಜಪ್ಪ ತೇಲಿಯವರ ಟಾಟಾ ಏಸ್ ವಾಹನವನ್ನು ನಿಗದಿಗೊಳಿಸಲಾಗಿದೆ.
* ನಂದಿಭೂಷಿತ ಕಪ್ಪತ ಜ್ಯೋತಿಯನ್ನು ವಾಹನದ ಮೇಲೆ ಭದ್ರವಾಗಿ ಅಳವಡಿಸಲು, ಹಾಗೂ ಪುಷ್ಪಾಲಂಕಾರ ಮಾಡಲು ಮತ್ತು ಜ್ಯೋತಿ ಯಾತ್ರೆಯ ಸಂದೇಶ ಸಾರುವ ಭಿತ್ತಿ ಪತ್ರಗಳನ್ನು ಅಂಟಿಸಿ ವಾಹನವನ್ನು ಸಿಂಗರಿಸುವ ಕಾರ್ಯವನ್ನು ಜಗದೀಶ ತೇಲಿಯವರು ಶ್ರದ್ಧಾ ಭಕ್ತಿಯಿಂದ ಮಾಡುವ ಹೊಣೆ ಹೊತ್ತಿರುತ್ತಾರೆ.
* ಯಾತ್ರೆಯ ಪ್ರಮುಖ ಭಾಗದ ಸಿದ್ಧತೆಯನ್ನು ನಿರ್ವಿಘ್ನವಾಗಿ ನೆರವೇರಿಸಿಕೊಡುವ ಭರವಸೆಯನ್ನು ಕೊಣ್ಣೂರ ಗ್ರಾಮದ ಸದ್ಭಕ್ತರು ನೀಡಿದರು
ಬಾಲಚಂದ್ರ ಜಾಬಶೆಟ್ಟಿ