spot_img
spot_img

ಮೂಡಲಗಿಯಲ್ಲಿ ವಿಶ್ವಕರ್ಮ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ

Must Read

- Advertisement -

ಮೂಡಲಗಿ: ಮೂಡಲಗಿ ತಾಲೂಕಾ ವಿಶ್ವಕರ್ಮ ಬೃಹತ್ ಸಮಾವೇಶವನ್ನು ಬರುವ ಫೆ.14  ರಂದು ಮೂಡಲಗಿ ಪಟ್ಟಣದ ಬಸವ ಮಂಟಪದಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಶಿಕ್ಷಕ ಗಜಾನನ ಪತ್ತಾರ ಹೇಳಿದರು.

ಬುಧವಾರದಂದು ಪಟ್ಟಣದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ, ನಡೆದ ವಿಶ್ವಕರ್ಮ ಬೃಹತ್ ಸಮಾವೇಶದ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮಾವೇಶ ಉದ್ಘಾಟನೆ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ದಿವ್ಯ ಸಾನ್ನಿಧ್ಯ ಮೂಡಲಗಿ ಸಿದ್ಧ ಸಂಸ್ಥಾನ ಮಠದ  ಶ್ರೀ ದತ್ತಾತ್ರಯಬೋಧ ಸ್ವಾಮೀಜಿ ಹಾಗೂ ಚಿಕ್ಕುಂಬಿಯ ಶ್ರೀ ಅಭಿನವ ನಾಗಲಿಂಗ ಸ್ವಾಮೀಜಿ, ಸಮಾವೇಶದ ಅಧ್ಯಕ್ಷತೆ  ಭಗವಂತ ಹ ಪತ್ತಾರ, ನೇತೃತ್ವ ಶ್ರೀಕಾಂತ ಪತ್ತಾರ,ಉಪಸ್ಥಿತಿ ಈಶ್ವರ ಬಸಪ್ಪ ಬಡಿಗೇರ ಹಾಗೂ ಇನ್ನೂ ಅನೇಕ ಜನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಕುರಿತು ವಿವರಿಸಿದರು.

ಉಪನ್ಯಾಸಕರಾದ ಸುಭಾಸ ಪತ್ತಾರ ಹಾಗೂ ಶಿಕ್ಷಕಿ ಶೈಲಾ ಬಡಿಗೇರ ಸಭೆಯನ್ನುದ್ದೇಶಿಸಿ ಮಾತನಾಡಿ, ಸ್ವಾಭಿಮಾನಿಗಳಾದ ವಿಶ್ವಕರ್ಮರಿಗೆ ಕಲೆ ಎಂಬುದು  ರಕ್ತಗತವಾಗಿ ಬಂದಿದೆ, ಸಮಾವೇಶವದಲ್ಲಿ ತಾಲೂಕಿನ ಎಲ್ಲ ಕುಲಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿಕೊಂಡ ಅಚ್ಚುಕಟ್ಟಾಗಿ ಮಾಡಿ ಯಶಸ್ವಿಗೊಳಿಸೋಣ ಎಂದು ವಿನಂತಿಸಿದರು. ಪೂರ್ವಭಾವಿ ಸಭೆಯಲ್ಲಿ ಸಮಾವೇಷದ ರೂಪು ರೇಷೆಗಳ ಕುರಿತು ಚರ್ಚಿಸಲಾಯಿತು.

- Advertisement -

ಸಮಾಜದ ಯುವಕರು ಮೌನೇಶ್ವರ ಎಂಬ ಯುವಕ ಸಂಘ ಮಾಡಿಕೊಂಡು ಸಮಾವೇಶದ ಕೆಲಸ ಕಾರ್ಯದ ಕುರಿತು ಮಾತನಾಡಿದರಲ್ಲದೇ, ಮಹಿಳೆಯರು ಗಾಯತ್ರಿ ಮಹಿಳಾ ಸಂಘ ಹೆಸರಿನಡಿ ಕುಂಭ ಮೇಳದ ತಯಾರಿ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮೂಡಲಗಿ ಪಟ್ಟಣದ  ವಿಶ್ವಕರ್ಮ ಸಮಾಜದ ಸಮಸ್ತ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ಕಮೀಟಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group