ಸಿಂದಗಿ: ಅ.21 ರಂದು ರಾಯಚೂರಿನಲ್ಲಿ ನಡೆಯುವ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆನ್ನುವ ಆದೇಶವಿದ್ದು ಅದರ ಪ್ರಯಕ್ತ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದ ಮುಖಂಡರ ಪೂರ್ವಭಾವಿ ಸಭೆ ನಡೆಯಿತು.
ಸಿಂದಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷ ವಿಠ್ಠಲ ಕೊಳ್ಳೂರ ಮಾತನಾಡಿ, “ಭಾರತ ಜೋಡೋ” ಪಾದಯಾತ್ರೆಯು ಭಾರತ ದೇಶಾದ್ಯಾಂತ ಸಂಚರಿಸಲಿದ್ದು ಇದರ ನೇತೃತ್ವವನ್ನು ವಹಿಸಿಕೂಂಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು “3750” ಕಿ.ಮೀ. ನಡೆಯುವ ಮೂಲಕ ಭಾರತ ಐಕ್ಯತಾ ಪಾದಯಾತ್ರೆಯು ಸೆ. 07 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು, ಪಾದಯಾತ್ರೆ ಮಾರ್ಗ ಮಧ್ಯದಲ್ಲಿ ಸೆ.30 ವರೆಗೆ ಕರ್ನಾಟಕದಲ್ಲಿ ಪಾದಯಾತ್ರೆ ನಡೆದಿದೆ. ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ 21ನೇ ತಾರೀಖಿನ ದಿನ ರಾಯಚೂರಿನಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಸುಮಾರು 5000 ಕಾರ್ಯಕರ್ತರನ್ನು ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗವಹಿಸಲು ರಾಯಚೂರಿಗೆ ಕರೆದುಕೂಂಡು ಹೋಗಲು ಎಲ್ಲಾ ಮುಖಂಡರು ತಿರ್ಮಾನಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಮನಗೂಳಿ,ಮಾಜಿ ಶಾಸಕ ಶರಣಪ್ಪ ಸುಣಗಾರ,ಅಯುಬ್ ದೇವರಮನಿ, ಮುಸ್ತಾಕ ಮುಲ್ಲಾ, ಶಿವನಗೌಡ ಬಿರಾದಾರ, ಯೋಗೆಪ್ಪಗೌಡ ಪಾಟೀಲ, ರಾಜು ಕೂಚಬಾಳ, ರವಿ ದೇವರಮನಿ, ಸಿದ್ದಣ ಹಿರೇಕುರಬರ, ಸುರೇಶ ಪೂಜಾರಿ, ಶಿವು ಕೋಟಾರಗಸ್ತಿ, ಇರ್ಫಾನ ಆಳಂದ, ರಾಘವೇಂದ್ರ, ಯಲ್ಲು ಕೆರಕಿ, ದೇವಿಂದ್ರ ಪೂಜಾರಿ, ಮಾಂತು ಅಮ್ಮಾಗೋಳ, ಶರಣಗೌಡ ಪಾಟೀಲ, ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.