ಸವದತ್ತಿ: ಸವದತ್ತಿ ತಾಲೂಕು ಸಮೂಹ ಸಂಪನ್ಮೂಲ ವ್ಯಕ್ತಿಗಳಿಗಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ವಿಶೇಷ ಸಭೆ ಜರುಗಿತು.
ಈ ಸಭೆಯಲ್ಲಿ ಡಯಟ್ ಹಿರಿಯ ಉಪನ್ಯಾಸಕ ರಾದ ರಾಜೇಂದ್ರ ತೇರದಾಳ ಹಾಗೂ ಪ್ರಕಾಶ ಪಾಟೀಲ ಸೇತುಬಂಧ ಕುರಿತು ಪರ್ಯಾಯ ಶಿಕ್ಷಣ ವ್ಯವಸ್ಥೆ ಮಾಡಿಕೊಳ್ಳಲು ಕ್ರಿಯಾ ಯೋಜನೆಯನ್ನು ತಯಾರಿಸುವ ಕುರಿತು ಹಾಗೂ ಡಯಟ್ ಬೆಳಗಾವಿಯಿಂದ ಪ್ರಕಟವಾದ ಸಮನ್ವಯ ಶಿಕ್ಷಣ ಕೈಪಿಡಿ ಹಾಗೂ 4 ರಿಂದ 8 ತರಗತಿ ವಿಷಯ ಬೋಧನೆ ಕೈಪಿಡಿಮಾಹಿತಿ ಮುಂದಿನ ದಿನಗಳಲ್ಲಿ ಡೈಟ್ ವತಿಯಿಂದ ಲಭ್ಯವಾಗುವ ಕೈಪಿಡಿಗಳು ಕುರಿತು ಮಾಹಿತಿ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಪರ್ಯಾಯ ಬೋಧನಾ ಕಲಿಕಾ ತಂತ್ರಗಳು. ಸಿವಿಲ್ ಕಾಮಗಾರಿಗಳ ಕುರಿತು ವಿವರಗಳನ್ನು ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ ಬಿ ಬಳಿಗಾರ್ ಮೌಲ್ಯಮಾಪನ ತಂತ್ರಗಳನ್ನು ಕುರಿತು ಹಾಗೂ ದಾಖಲಾತಿ ಹಾಗೂ ಸಮನ್ವಯ ಶಿಕ್ಷಣ ಕುರಿತು ಚರ್ಚಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಎಸ್.ಹಿರೇಮಠ ದಾಖಲಾತಿ ಮಾಹಿತಿಯನ್ನು ಕುರಿತು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣಾಧಿಕಾರಿ ವೈ. ಎಂ. ಶಿಂಧೆ ಶಿಕ್ಷಣ ಸಂಯೋಜಕರಾದ ಜಿ. ಎಂ. ಕರಾಳೆ.ಎಂ.ಡಿ.ಹುದ್ದಾರ
ಬಿ. ಐ. ಇ. ಆರ್. ಟಿ ಗಳಾದ ಎಸ್. ಬಿ. ಬೆಟ್ಟದ. ಸಿ. ವ್ಹಿ. ಬಾರ್ಕಿ.ವೈ.ಬಿ.ಕಡಕೋಳ.ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ಡಾ. ಬಿ. ಐ. ಚಿನಗುಡಿ.ವ್ಹಿ.ಸಿ.ಹಿರೇಮಠ.ರತ್ನಾ ಸೇತಸನದಿ ತಾಲೂಕಿನ ಎಲ್ಲಾ ಸಮೂಹ ಸಂಪನ್ಮೂಲ ಕೇಂದ್ರಗಳ ಸಂಪನ್ಮೂಲ ವ್ಯಕ್ತಿ ಗಳು ಉಪಸ್ಥಿತರಿದ್ದರು.
ಸಭೆಯ ಪ್ರಾರಂಭದಲ್ಲಿ ವ್ಹಿ. ಸಿ. ಹಿರೇಮಠ ಸ್ವಾಗತಿಸಿದರು. ಸಭೆಯಲ್ಲಿ ಚರ್ಚಿಸಬೇಕಾದ ನಮೂನೆಗಳನ್ನು ಕಂಪ್ಯೂಟರ್ ಪ್ರೋಗ್ರಾಮ್ಮರ್ ವಿನೋದ ಹೊಂಗಲ ಮುದ್ರಣ ಮಾಡಿ ಪೂರೈಸಿದರು. ಡಾ. ಬಿ. ಐ ಚಿನಗುಡಿ ವಂದಿಸಿದರು.