spot_img
spot_img

ಜು.30 ರಂದು ಪತ್ರಿಕಾ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭ

Must Read

ಸಿಂದಗಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಜು.30 ರಂದು ಬೆಳಿಗ್ಗೆ 10:30 ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಪತ್ರ ವಿತರಣೆ, ಜಿಲ್ಲಾ ನೂತನ ಪದಾಧಿಕಾರಿಗಳಿಗೆ ಸನ್ಮಾನ, ಸಾಧಕರಿಗೆ ಸನ್ಮಾನ ಮಾಡಲಾಗುವುದು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ, ಬ್ರಹ್ಮಕುಮಾರಿ ಪವಿತ್ರಾ ಅಕ್ಕಾಜಿ ಸಾನ್ನಿಧ್ಯ ವಹಿಸುವರು.

ಶಾಸಕ ರಮೇಶ ಭೂಸನೂರ ಕಾರ್ಯಕ್ರಮ ಉದ್ಘಾಟಿಸಿವರು. ತಾಲೂಕಾಧ್ಯಕ್ಷ ಆನಂದ ಶಾಬಾದಿ ಅಧ್ಯಕ್ಷತೆ ವಹಿಸುವರು. ಯಡ್ರಾಮಿ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ನವಲಗುಂದ ಉಪನ್ಯಾಸ ನೀಡುವರು. ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪಿ.ಇ.ಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ.ಪಿ.ಕರ್ಜಗಿ, ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಜಿಲ್ಲಾ ಕಾನಿಪ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಭಾವಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೆ.ಎಚ್.ಸೋಮಾಪೂರ, ಟಿ.ಕೆ.ಮಲಗೊಂಡ, ವೀರೇಶ ಮಠಪತಿ, ಪ್ರಶಸ್ತಿ ಪುರಸ್ಕೃತರಾದ ರಮೇಶ ಪೂಜಾರ, ಪಂಡಿತ ಯಂಪುರೆ, ಇಸ್ಮಾಯಲ್ ಶೇಖ್, ಪತ್ರಿಕಾ ವಿತರಕರಾದ ನಿಂಗಣ್ಣ ಜಕ್ಕನಗೌಡರ, ನಿಂಗಣ್ಣ ಯಾಳಗಿ, ಗಂಗಾಧರ ಮಡಿಕೇಶ್ವರ, ಅವರಿಗೆ ಸನ್ಮಾನಿಸಲಾಗುವುದು. ತಾಲೂಕು ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಅಲ್ಲಾಪೂರ, ಭೀಮು ಕೆಂಭಾವಿ, ಚಂದ್ರಶೇಖರ ಮಾವೂರ, ವಿಜಯಕುಮಾರ ಪತ್ತಾರ, ಮಾಹಾಂತೇಶ ನೂಲಾನವರ, ರವಿ ಮಲ್ಲೇದ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ತಾಲೂಕಾಧ್ಯಕ್ಷ ಆನಂದ ಶಾಬಾದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಮೃತ ಮಹೋತ್ಸವ ನಿಮಿತ್ತ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಬೆಳಗಾವಿ - ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಗಣಪತಿ ಗಲ್ಲಿ ಪ್ರದೇಶದಲ್ಲಿ ಶಾಲಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವು ಸರ್ಕಾರಿ ಮರಾಠಿ ಶಾಲೆ...
- Advertisement -

More Articles Like This

- Advertisement -
close
error: Content is protected !!