ಬೀದರ – ಈ ನಮ್ಮ ಹಿಂದೂ ಸಮಾಜ ಎಚ್ಚತ್ತು ಕೊಳ್ಳಲ್ಲಾರೀ. ನಾವು ಅದನ್ನ ಎಬ್ಬಿಸಬೇಕಂತ ಪ್ರಯತ್ನ ಮಾಡ್ತೀವಿ ನೀವು ತಡೀತೀರಿ….ಏನ್ ಮಾಡೋದು ಎಂದು ಹಿಂದೂ ಮುಖಂಡ ಪ್ರಮೋದ ಮುತಾಲಿಕ ವಿಷಾದ ವ್ಯಕ್ತಪಡಿಸಿದರು.
ಪ್ರಮೋದ ಮುತಾಲಿಕ್ ಮತ್ತು ಆಂದೋಲಾ ಸಿದ್ದಲಿಂಗ ಸ್ವಾಮಿಯ ರವನ್ನು ಬೀದರ ಜಿಲ್ಲೆಯ ಬಾರ್ಡರ ಹತ್ತಿರ ಮಧ್ಯಾನ್ಹ 3.20 ನಿಮಿಷಕ್ಕೆ ಕೋಹಿನೂರು ಗಡಿ ಬಳಿ ತಡೆದ ಪೊಲೀಸರನ್ನುದ್ದೇಶಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಭಾಗದ ಶಾಸಕರು ಕೇವಲ ಮುಸ್ಲಿಮರ ಮತ ಪಡೆದು ಆಯ್ಕೆಯಾಗಿದ್ದಾರಾ ಎಂದು ಪ್ರಶ್ನಿಸಿ, ಪರಿಸ್ಥಿತಿಯ ಗಂಭೀರತೆ ಅವರಿಗೆ ಅರ್ಥವಾಗುತ್ತಿಲ್ಲ ಅವರ ಮನೆಯ ಹೆಣ್ಮಕ್ಕಳನ್ನು ಹೊತ್ತುಕೊಂಡು ಹೋದರೆ ಆಗ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಮತ್ತು ಬಸವಕಲ್ಯಾಣ ತಹಶಿಲ್ದಾರ ರವರು ಬೀದರ್ ಜಿಲ್ಲೆಯಲ್ಲಿ ಬರಲು ಪ್ರಮೋದ ಮುತಾಲಿಕ ಅವರು ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಇರುವ ಹಿನ್ನೆಲೆಯಲ್ಲಿ ತಡೆಹಾಕಿದರು.
ಜಿಲ್ಲಾ ಅಧಿಕಾರಿ ಅನುಮತಿ ಕೊಡದೆ ಇರುವುದರಿಂದ ನಿಷೇಧ ಹೇರಲಾಗಿದೆ ಅಂತ ನಿಷೇಧ ಪತ್ರವನ್ನು ತಹಸೀಲ್ದಾರ ಸಾವಿತ್ರಿ ಸಲಗರ ನೀಡಿದರು.
ನಾವು ನೀವು ಎಲ್ಲರೂ ಈ ದೇಶದಲ್ಲಿ ಬದುಕಬೇಕಾದರೆ ಈ ಹೋರಾಟ ಅನಿವಾರ್ಯ ಎಂದು ಪೊಲೀಸರಿಗೂ ಹೇಳಿದ ಅವರು ಕೆಜಿ ಹಳ್ಳಿ, ಡಿಜಿ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಮುಸಲ್ಮಾನರು ಪೊಲೀಸರ ಮೇಲೂ ದಾಳಿ ಮಾಡಿದ ಬಗ್ಗೆ ನೆನಪಿಸಿಕೊಳ್ಳಿ ಎಂದರು.
ಬಸವಕಲ್ಯಾಣ ಶಾಸಕರು ಮುಸ್ಲಿಮರ ಜೊತೆಯಲ್ಲಿ ಡಿಜೆ ಹಚ್ಚಿ ಡ್ಯಾನ್ಸ್ ನಾನು ಮಾಡುತ್ತೇನೆ ಅಂತ ಅಂದಿರುತ್ತಾರೆ ಅವರ ಮೇಲೆ ಏನು ಕ್ರಮ ಕೈಗೊಳ್ಳದ ಪೊಲೀಸರು ನಮ್ಮ ಮೇಲೆ ನಿಷೇಧನಾ ಅಂತ ಪೊಲೀಸ ಅಧಿಕಾರಿಗಳಿಗೆ ಆಂದೋಲಾ ಶ್ರೀಗಳು ಪ್ರಶ್ನೆ ಮಾಡಿದರು.
ಯಾವುದೇ ಪ್ರಯತ್ನಕ್ಕೂ ಪೊಲೀಸರು ಜಗ್ಗದ ಕಾರಣ ಬೀದರ ಜಿಲ್ಲಾಡಳಿತಕ್ಕೆ ಮತ್ತು ಬಸವಕಲ್ಯಾಣ ಶಾಸಕರಿಗೆ ಧಿಕ್ಕಾರ ಕೂಗಿದ ಶ್ರೀರಾಮ್ ಸೇನೆಯ ಪ್ರಮೋದ್ ಮುತಾಲಿಕ್ ತೀವ್ರ ವಿಷಾದ ವ್ಯಕ್ತಪಡಿಸಿದರು.
ಕೋರ್ಟ್ ಆದೇಶ ಇದ್ದರೂ ಮುಸ್ಲಿಮರು ಈಗ ಸಹ ಹಿಜಾಬ್ ತೆಗೆಯುತ್ತಿಲ್ಲ, ಹಿಜಾಬ ತೆಗೆಯದೆ ಕೋರ್ಟ್ ಆದೇಶ ಉಲಂಘಿಸಿದ್ದಾರೆ, ಅವರಿಗೆ ಎಷ್ಟು ಸೊಕ್ಕಿದೆ ನೋಡಿ ಅವರ ವಿರುದ್ದ ಏನು ಕ್ರಮ ಕೈಗೊಂಡಿಲ್ಲ ಅಂತ ಪ್ರಮೋದ ಮುತಾಲಿಕ ಸರ್ಕಾರದ ವಿರುದ್ಧ ಹಾಗೂ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು.
ಉದ್ದೇಶ ಪೂರ್ವಕವಾಗಿ ನಮ್ಮನ್ನು ತಡೆಯುತ್ತಿದ್ದಿರಿ,ನಾವೇನಾ ಗೂಂಡಾಗಳಾ ಎಂಬಿತ್ಯಾದಿ ಮಾತುಗಳನ್ನು ಆಡಿ ವಾಪಸ್ಸಾದ ಪ್ರಮೋದ್ ಮುತಾಲಿಕ್.
ವರದಿ: ನಂದಕುಮಾರ ಕರಂಜೆ, ಬೀದರ