ಸಿಂದಗಿ: ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಅ.12 ರಂದು ಶಿಕ್ಷಕನೋರ್ವ ಕುರುಬ ಸಮುದಾಯದ ದಿವ್ಯಾ ಎನ್ನುವ ಅಪ್ರಾಪ್ತ ಬಾಲಕಿಯ ಅತ್ಯಾಚಾರವೆಸಗಿದ್ದು ಆ ಶಿಕ್ಷಕನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಪ್ರಧಾನಿ ಮೂಲಿಮನಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಕ್ಕಳಲ್ಲಿರುವ ಅಜ್ಞಾನ ತೊಲಗಿಸಿ ಸುಜ್ಞಾನದ ಬೆಳಕು ನೀಡಿ ಮಗುವಿನ ಬದುಕಿಗೆ ದಾರಿ ದೀಪವಾಗಬೇಕಿದ್ದ ಶಿಕ್ಷಕ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದು ಇಡೀ ರಾಜ್ಯದ ಶಿಕ್ಷಣ ಸಮೂಹ ತಲೆ ತಗ್ಗಿಸುವಂತೆ ಮಾಡಿದೆ ತಾನು ಮಾಡಿದ ಹೇಯ ಕೃತ್ಯ ಮುಚ್ಚಿಹಾಕುವ ಹುನ್ನಾರ ಹಾಕಿಕೊಂಡು ಅತ್ಯಾಚಾರ ವೆಸಗಿ ತಾನಾಗಿಯೇ ಪೊಲೀಸರಿಗೆ ಫೋನ ಕರೆ ಮಾಡಿ ಕರೆಸಿದ್ದಾನೆ ತದನಂತರ ಪೊಲೀಸ್ ಇಲಾಖೆ ಕೂಲಂಕುಶವಾಗಿ ವಿಚಾರಿದಾಗ ಶಿಕ್ಷಕನೇ ಅಪರಾಧಿ ಎಂದು ದೃಢಪಟ್ಟಿದೆ ನೀಚ ಶಿಕ್ಷಕನನ್ನು ಪೋಸ್ಕೋ ಕಾಯ್ದೆ ಅನ್ವಯ ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ಗುರಿಪಡಿಸಬೇಕು ಇಲ್ಲದಿದ್ದರೆ ಕುರುಬ ಸಮಾಜದ ಸಂಘಟನೆ ಜೊತೆಗೆ ಮಾದಿಗ ದಂಡೋರ ಸಮೀತಿ ಸೇರಿದಂತೆ ಅನೇಕ ಜನಪರ ಸಂಘಟನೆಗಳೊಂದಿಗೆ ರಸ್ತೆಗಿಳಿದು ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.