“ಸ್ಕೂಲ್ ಡೇ” ಶೂಟಿಂಗ್‌ನಲ್ಲಿ ಪ್ರಿಯಾ ಸವದಿ ಫುಲ್ ಬ್ಯೂಸಿ

Must Read

ಕುಂದಾನಗರಿ ಹುಡ್ಗಿ ಪ್ರೀಯಾ ಸವದಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಹೊಸಚಿತ್ರ “ಸ್ಕೂಲ್ ಡೇ” ರಿಹರ್ಸಲ್ ಪೂರ್ಣಗೊಂಡಿದ್ದು ಚಿತ್ರತಂಡ ಚಿತ್ರೀಕರಣ ಶುರು ಮಾಡಿದೆ. ಚಿತ್ರೀಕರಣದಲ್ಲಿ ಉತ್ತರ ಕರ್ನಾಟಕದ ಡಿಂಪಲ್ ಕ್ವೀನ್ ಪ್ರೀಯಾ ಸವದಿ ಫುಲ್ ಬ್ಯೂಸಿಯಾಗಿದ್ದಾರೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ ಸ್ಕೂಲ್ ಡೇ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು ಸುಮಾರು 20 ದಿನಗಳ ಕಾಲ ಬೆಳಗಾವಿಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸುವ ಪ್ಲಾನ್ ಹಾಕಿಕೊಂಡಿದೆ ಚಿತ್ರತಂಡ.

ಸ್ಕೂಲ್ ಡೇ ಚಿತ್ರದಲ್ಲಿ ಪ್ರೀಯಾ ಅವರಿಗೆ ನಾಯಕನಟನಾಗಿ ಸಂದೀಪ್ ಹಾವೇರಿ ಅಭಿನಯಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾಗಿರುವ ಸಂದೀಪ್ ಈಗ “ಸ್ಕೂಲ್ ಡೇ” ಮೂಲಕ ಹಿರಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಉಳಿದಂತೆ ಪ್ರೀಯಾ, ಸಂದೀಪ್ ಅವರೊಂದಿಗೆ ಸ್ಕೂಲ್ ಡೇ ಚಿತ್ರದಲ್ಲಿ ಹೊಸ ಪ್ರತಿಭೆಗಳು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಎಲ್ಲ ಅಂದುಕೊಂಡತೆ ನಡೆದರೆ , ಈ ವರ್ಷದ ಕೊನೆಯೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ಸ್ಕೂಲ್ ಡೇ” ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ಅಕ್ಟೋಬರ್ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್‌ನಲ್ಲಿದೆ ಚಿತ್ರತಂಡ.

ಸಂಜಯ್ ಎಚ್ ಅವರ ನಿರ್ದೇಶನ, ಉಮೇಶ್ ಹಿರೇಮಠ ಚಿತ್ರದ ನಿರ್ಮಾಪಕರು, ಕೃಷ್ಣ ಛಾಯಾಗ್ರಹಣ, ಡಾ.ಪ್ರಭು ಗಂಜಿಹಾಳ ಹಾಗೂ ಡಾ.ವಿರೇಶ ಹಂಡಗಿ ಅವರ ಪ್ರಚಾರ ಕಲೆ, ತಂಡದಲ್ಲಿ ರಂಜಿತ್ ತಿಗಡಿ, ಚಿತ್ರದಲ್ಲಿ ನಾಯಕ ನಟರಾಗಿ ಸಂದೀಪ್ ಹಾವೇರಿ ನಾಯಕಿ ನಟಿಯಾಗಿ ಪ್ರೀಯಾ ಸವದಿ ಉಳಿದ ಪಾತ್ರಗಳಲ್ಲಿ ಅನೀಲ ಹುದಳಿ, ದರ್ಶನ ರಜನ್ನವರ, ವೀರೇಂದ್ರ, ಅನಿಕೇತ, ನಮೃತಾ, ಸಂಜು ಬಸಯ್ಯ, ಮಜಾಭಾರತ ಬಸವರಾಜ, ಮುಂತಾದವರು ಅಭಿನಯಿಸುತ್ತಿದ್ದಾರೆ. ಸ್ಕೂಲ್ ಡೇ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್…

ವಿಶ್ವಪ್ರಕಾಶ ಮಲಗೊಂಡ

Latest News

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ರಾಮಚಂದ್ರ ಕಾಕಡೆ

ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು...

More Articles Like This

error: Content is protected !!
Join WhatsApp Group