spot_img
spot_img

ಜೀವಪರ ಕಾಳಜಿ ಮತ್ತು ಲಿಂಗ ಸಮಾನತೆಯೇ ವಚನ ಸಾಹಿತ್ಯದ ಆಶಯವಾಗಿದೆ – ಉಮೇಶ ಬಾಳಿ

Must Read

spot_img

ಮುನವಳ್ಳಿ: “ಜೀವಪರ ಕಾಳಜಿ ಮತ್ತು ಲಿಂಗ ಸಮಾನತೆಯೇ ವಚನ ಸಾಹಿತ್ಯದ ಆಶಯವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಘನತೆಯಿಂದ ಬದುಕಬೇಕು ಎನ್ನುವುದು ಬಸವಾದಿ ಶರಣರ ಬಯಸಿದ್ದರು. ಅದರಂತೆ ೧೨ನೇ ಶತಮಾನದಲ್ಲಿ ಹೊಸ ಸಮಾಜ ಕಟ್ಟಿದ್ದರು’ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉಮೇಶ ಬಾಳಿಯವರು ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.

ಅವರು ಪಟ್ಟಣದ ಎಂ. ಎಲ್. ಇ ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಸವದತ್ತಿ ವತಿಯಿಂದ ‘ವಚನ ದಿನ’ ಕಾರ‍್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಎಸ್. ಎಸ್. ಉಪ್ಪಾರ. ಶಿಕ್ಷಕಿಯರಾದ ನಿರ್ಮಲಾ ಗದ್ವಾಲ್ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ” ವಚನ ದಿನದ ಮಹತ್ವವನ್ನು ತಿಳಿಸುತ್ತಾ ನಡೆ–ನುಡಿಯಲ್ಲಿ ಒಂದಾಗಿರಬೇಕು ಎನ್ನುವುದು ಶರಣರ ಸಿದ್ಧಾಂತವಾಗಿತ್ತು. ಎಲ್ಲ ಜೀವರಾಶಿಗಳಲ್ಲಿ ದೇವರನ್ನು ಕಾಣುತ್ತಿದ್ದರು’ ಎಂದರು.

ಇದೇ ಸಂದರ್ಭದಲ್ಲಿ ಸಹನಾ ಬಟಕುರ್ಕಿ. ಶ್ರೀ ನಿಧಿ ಬಡೆಮ್ಮಿ. ಲಾವಣ್ಯ ಮುರಗೋಡ. ಈಶ್ವರಿ ಸಿದ್ನಾಳ. ಶ್ರೀಯಾ ಹಿರೇಮಠ. ಕರೆಪ್ಪ ನರಿ. ಮೊದಲಾದ ವಿದ್ಯಾರ್ಥಿಗಳಿಂದ ವಚನ ಗೀತ ಗಾಯನ ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ನಿರ್ಮಲಾ ಗದ್ವಾಲ್ ಸ್ವಾಗತಿಸಿದರು. ಆರ್. ಜಿ. ಮಲ್ಲಾಪುರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಎಂ. ಭಜಂತ್ರಿ ಕಾರ್ಯ ಕ್ರಮ ನಿರೂಪಿಸಿದರು. ಕೆ. ಬಿ. ನಾಯ್ಕರ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!