ಶಾಲಾರಂಭಕ್ಕೆ ವಿಘ್ನ; ರಜೆ ಘೋಷಿಸಿದ ಶಿಕ್ಷಕರು

Must Read

ಬೀದರ – ಇಡೀ ರಾಜ್ಯವೇ ಶಾಲೆಗಳನ್ನು ಆರಂಭಿಸಿ ಸಂಭ್ರಮ ಪಡುತ್ತಿದ್ದರೆ ಸರ್ಕಾರದ ಆದೇಶಕ್ಕೆ ಡೊಂಟ್ ಕೇರ್ ಎಂದಿರುವ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸರಕಾರಿ ಪ್ರೌಢಶಾಲೆಯೊಂದು ನಿನ್ನೆ ಶ್ರಾವಣ ಸೋಮವಾರದ ನಿಮಿತ್ತ ಮೇಲಧಿಕಾರಿಗಳಿಗೂ ತಿಳಿಸದೆ ರಜೆ ಘೋಷಣೆ ಮಾಡಿ ಒಂದು ದಿನ ವೇಸ್ಟ್ ಮಾಡಿದೆ.

ಇದರಿಂದಾಗಿ ಸೋಮವಾರ ಮೊದಲ ದಿನವೇ ಹುಮ್ಮಸ್ಸಿನಿಂದ ಶಾಲೆಗೆ ಹೋದ ವಿದ್ಯಾರ್ಥಿಗಳು ಮನೆಗೆ ವಾಪಸಾಗಿದ್ದಾರೆ. ಕರೊನಾ ಸಂಕಷ್ಟದ ನಡುವೆ ರಾಜ್ಯದಲ್ಲಿ ಶಾಲೆ ಕಾಲೇಜು ಆರಂಭವಾದರೂ ಹುಲಸೂರು ನಗರದ ಸರ್ಕಾರಿ ಪ್ರೌಢಶಾಲೆ ಆರಂಭವಾಗಿಲ್ಲ.

ಮಕ್ಕಳಿಲ್ಲದೆ ಭಣಗುಟ್ಟುತ್ತಿರುವ ಶಾಲೆ

ಶಿಕ್ಷಕರು ಸಾರ್ವತ್ರಿಕ ರಜೆ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ ಗೆ ಲಿಖಿತ ರೂಪದಲ್ಲಿ ಅರ್ಜಿ ಕೊಡಬೇಕಾಗುತ್ತದೆ ಅಥವಾ ಎಸ್ ಡಿ ಎಂ ಸಿ ತಂಡದ ಗಮನಕ್ಕೆ ತರಬೇಕಾಗುತ್ತದೆ. ಆದರೆ ಈ ಯಾವ ನಿಯಮಗಳನ್ನು ಪಾಲಿಸದೆ, ಯಾವುದೇ ಅಧಿಕಾರಿಗಳಿಗೂ ತಿಳಿಸದೆ ಇಲ್ಲಿನ ಶಿಕ್ಷಕರು ಶಾಲೆಗೆ ರಜೆ ಘೋಷಣೆ ಮಾಡಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಆದರೂ ಇಬ್ಬರು ಶಿಕ್ಷಕರು ಶಾಲೆಗೆ ಹಾಜರಾಗಿದ್ಧು ಕೆಲವು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರೂ ಶಾಲೆಗೆ ರಜೆ ಎಂದು ಮನೆಗೆ ತೆರಳಿದ್ದಾರೆ.ಒಟ್ಟಿನಲ್ಲಿ ಶ್ರಾವಣ ಸೋಮವಾರ ನೆಪದಲ್ಲಿ ಶಾಲೆಗೆ ರಜೆ ಘೋಷಿಸಿ ವಿದ್ಯಾರ್ಥಿಗಳ ಪ್ರಥಮ ದಿನದ ಶಾಲೆ ಪ್ರವೇಶದ ಸಂಭ್ರಮಕ್ಕೆ ಶಿಕ್ಷಕರು ತಣ್ಣೀರೆರಚಿದ್ಧಾರೆ ಎನ್ನಬಹುದು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group