spot_img
spot_img

ನೋಟರಿಗಳ ಸಮಸ್ಯೆ ಕುರಿತು ಕಾನೂನು ಸಚಿವರಿಗೆ ಮನವಿ

Must Read

spot_img
- Advertisement -

ಬೆಳಗಾವಿ: ನೋಟರಿ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ವಕೀಲರಿಗೆ ಒಂದು ಗೌರವದ ವೃತ್ತಿ ಬದುಕು ನೀಡುವಂತೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಪದಾಧಿಕಾರಿಗಳು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ನೋಟರಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಪೂರ್ಣ ಪ್ರಮಾಣದಲ್ಲಿ ನೋಟರಿ ವೃತ್ತಿಯಲ್ಲಿ ತೊಡಗಿರುವ ನೋಟರಿಗಳಿಗೆ ಕೋರ್ಟ ಆವರಣದಲ್ಲಿಯೇ ಕಾರ್ಯನಿರ್ವಹಿಸಲು ಸ್ಥಳ ನೀಡಬೇಕು, ಒಂದು ಬಾರಿ ನೋಟರಿಯಾಗಿ ಆಯ್ಕೆಯಾದವರಿಗೆ 5 ವರ್ಷಕ್ಕೊಮ್ಮೆ ನೋಟರಿ ನೊಂದಣಿಯನ್ನು ನವೀಕರಿಸುವುದನ್ನು ರದ್ದುಪಡಿಸಿ, ಜೀವನ ಪೂರ್ತಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಹೊಸ ನೋಟರಿಗಳ ನೇಮಕವಾಗುವಾಗ ಬೇಕಾಬಿಟ್ಟಿಯಾಗಿ ಮಾಡುವುದಕ್ಕಿಂತ ಒಂದು ನಿಯಮಾವಳಿ ರೂಪಿಸುವುದು ಅಗತ್ಯವಾಗಿದೆ. ರಾಜ್ಯ ನೋಟರಿ ಅಸೋಶಿಯೇಶನ್ ವತಿಯಿಂದ ಯಾವುದೇ ನೋಟರಿ ಮೃತಪಟ್ಟಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಹಣಕಾಸಿನ ತೊಂದರೆಯಿದ್ದು ಅದಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ಇಲಾಖೆಯಿಂದ ಸಹಾಯಧನ ನೀಡಬೇಕು ಹೀಗೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಕೇಂದ್ರ ಕಾನೂನು ಸಚಿವರ ಗಮನಕ್ಕೆ ತರಲಾಯಿತು ಮತ್ತು ಈ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯ ಮಾಡಲಾಯಿತು.

ನೋಟರಿ ರಾಜ್ಯ ಸಂಘದ ಪದಾಧಿಕಾರಿಗಳ ಎಲ್ಲ ಸಮಸ್ಯೆಗಳನ್ನು ಸಹಾನೂಭೂತಿಯಿಂದ ಆಲಿಸಿ ಇಲ್ಲಿಯವರೆಗೆ ಯಾವುದೇ ನೋಟರಿ ಸಂಘಟನೆಗಳು ನನ್ನ ಬಳಿ ಬಂದಿಲ್ಲ. ಸಂಸದ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೀರಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

- Advertisement -

ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿ.ಎಸ್ ಚಿಕ್ಕನಗೌಡರ, ಸಹ ಕಾರ್ಯದರ್ಶಿ ವಿಜಯ ಮಹೇಂದ್ರಕರ, ಸಂಘಟನಾ ಕಾರ್ಯದರ್ಶಿ ಪ್ರಕಾಶಕುಮಾರ ಪರುತಗೌಡ್ರು, ಎಸ್.ಎನ್ ಜಾಲಿಹಾಳ, ಕೆ.ಆರ್ ಕೋಠೆವಾಲೆ, ಎಸ್. ವಾಯ್. ಪಾಟೀಲ ಇದ್ದರು.

 

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group