spot_img
spot_img

ಪ್ರಾಧ್ಯಾಪಕ -ಲೇಖಕ -ಸಂಘಟಕ ಡಾ. ಆರ್. ವಾದಿರಾಜು ಅವರಿಗೆ ‘ಭಕ್ತಿ ಸಾಹಿತ್ಯ ಪ್ರಶಸ್ತಿ’ ಪ್ರದಾನ

Must Read

spot_img
- Advertisement -

ಯೋಗ ಯುನಿವರ್ಸಿಟಿ ಆಫ್ ದಿ ಅಮೆರಿಕಾಸ್ ಮತ್ತು ಬೆಂಗಳೂರಿನ ಅರಳುಮಲ್ಲಿಗೆ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಾಧ್ಯಾಪಕ- ಲೇಖಕ- ಸಂಘಟಕ ಡಾ. ಆರ್. ವಾದಿರಾಜರವರ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಮತ್ತು ಅವರ 50ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಕ್ತಿ ಸಾಹಿತ್ಯ ಪ್ರಶಸ್ತಿ 2023 ಪ್ರದಾನವನ್ನು ನಗರದ ಜೆಸಿ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಶ್ರೀಯುತರು ರಚಿಸಿರುವ ಹಯವದನ ಕೃತಿಯನ್ನು ಖ್ಯಾತ ಹರಿದಾಸ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಡಾ. ಆರ್. ವಾದಿರಾಜು ಅವರು ಅಧ್ಯಯನ ಅಧ್ಯಾಪನದಿಂದ ಜನಪ್ರಿಯರಾದವರು.ಸಹೃದಯತೆ ಅವರ ಒಂದು ಗುಣ ವಿಶೇಷ. ದಾಸ ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರ .ವಾದಿರಾಜರ ಕುರಿತು ಕುಪ್ಪಂನ ದ್ರಾವಿಡ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಹಲವಾರು ಕೃತಿ ರಚನೆ ನಡೆಸಿರುವ ಶ್ರೀಯುತರು ಟಿಟಿಡಿ ಸಪ್ತಗಿರಿ ಪತ್ರಿಕೆಯ ಸಂಪಾದಕ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .ಪ್ರತಿಷ್ಠಿತ ಪ್ರಶಸ್ತಿಗಳು ಅರಸಿ ಬಂದಿದೆ .ಸಂಘಟಕರಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಸಾಂಸ್ಕೃತಿಕ ವಲಯದಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿರುವ ವಾದಿರಾಜರಿಗೆ ಇದೀಗ 50ರ ಹುಟ್ಟು ಹಬ್ಬದ ಸಂಭ್ರಮ. ಅರಳುಮಲ್ಲಿಗೆ ಪ್ರತಿಷ್ಠಾನದಿಂದ ಭಕ್ತಿ ಸಾಹಿತ್ಯ ಪ್ರಶಸ್ತಿ ಅವರ ಮುಕುಟಕ್ಕೆ ಮತ್ತೊಂದು ಗರಿ ಎಂದು ಅಭಿಪ್ರಾಯಪಟ್ಟರು.

ಯೋಗ ಯುನಿವರ್ಸಿಟಿ ಆಫ್ ಅಮೆರಿಕಸ್ ಉಪಕುಲಪತಿ ಡಾ. ರಾಜಶೇಖರ ರೆಡ್ಡಿ ಪ್ರಶಸ್ತಿ ಪ್ರಧಾನ ಮಾಡಿದರು. ಖ್ಯಾತ ಕಾದಂಬರಿಕಾರ ಡಾ. ಸುರೇಶ ಪಾಟೀಲ, ಹರಿದಾಸ ಸಂಶೋಧಕ ಸೇಡಂನ ಡಾ. ವಾಸುದೇವ ಅಗ್ನಿಹೋತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

- Advertisement -

ಯೋಗ ಯುನಿವರ್ಸಿಟಿ ಆಫ್ ಅಮೆರಿಕಾಸ್ ನ ಉಪಾಧ್ಯಕ್ಷ ಡಾ ಯೋಗಿ ದೇವರಾಜು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ವಿಶೇಷ ನಾಟಕ ಪ್ರದರ್ಶನ ನೊಣವಿನಕೆರೆ  ರಾಮಕೃಷ್ಣಯ್ಯ ನಿರ್ದೇಶನದ ಡಾ.ರತ್ನ ನಾಗರಾಜ್ ರಚನೆಯ ಸಿರಿ ಸಾಂಸ್ಕೃತಿಕ ಪ್ರತಿಷ್ಠಾನದ ಕಲಾವಿದರಿಂದ ಗಾಂಧಿ -ಮೌನ -ಯಾನ ನಡೆಯಿತು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group