ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಕಲಾ, ವಾಣಿಜ್ಯ ಮತು ವ್ಹಿ.ವ್ಹಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಇಂಗ್ಲೀಷ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿ. ಲಮಾಣಿ ಇವರು ಡಾ. ಶಿವಪುತ್ರ ಕಾನಡೆ ಸಹ ಪ್ರಾಧ್ಯಾಪಕರು ಇವರ ಮಾರ್ಗದರ್ಶನದಲ್ಲಿ “ಸ್ಪೆಕ್ಟ್ರಮ್ ಆಫ್ ಹ್ಯೂಮನ್ ರಿಲೇಷನಶಿಪ್ ಇನ್ ದಿ ಫಿಕ್ಸನಲ್ ವಲ್ಡ್ಸ್ ಆಫ್ ಕಮಲಾ ಮಾರ್ಕಂಡೆಯಾ ಆಂಡ್ ಅನಿತಾ ದೇಸಾಯಿ : ಎ ಕಂಪ್ಯಾರಿಟಿವ್ ಸ್ಟಡಿ” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ ಮರಾಠವಾಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದ್ದಾರೆ.
ಪ್ತೊ.ರವಿ ಲಮಾಣಿಯವರಿಗೆ ಸಂಸ್ಥೆಯ ಚೇರಮನ್ನರು ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಪ್ರಾಚಾರ್ಯ ಪ್ರೊ. ಡಿ. ಎಂ. ಪಾಟೀಲ ಹಾಗೂ ಕಾಲೇಜಿನ ಬೋಧಕ / ಬೋಧಕೇತರ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.