spot_img
spot_img

ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ ನನ್ನ ಬದುಕಿನಲ್ಲಿ ಸಂತ್ರಪ್ತಿ ಒದಗಿಸಿವೆ: ಡಾ.ಶಾಸ್ತ್ರೀಮಠ

Must Read

spot_img
- Advertisement -

ಮೂಡಲಗಿ: ನನ್ನ ಸುದೀರ್ಘ 37 ವರ್ಷಗಳ ಕಾಲದ ಪ್ರಾಧ್ಯಾಪಕ ಹಾಗೂ ಪ್ರಾಚಾರ್ಯ ವೃತ್ತಿ, ಬದುಕಿನಲ್ಲಿ ನನಗೆ ಸಂತ್ರಪ್ತಿ ಹಾಗೂ ನೆಮ್ಮದಿಯ ಜೀವನವನ್ನು ಒದಗಿಸಿವೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ ಅಭಿಪ್ರಾಯಪಟ್ಟರು.

ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುದೀರ್ಘ 37ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಹಾಗೂ ಅವರ ಅಭಿಮಾನಿ ಬಳಗದವರು ಏರ್ಪಡಿಸಿದ ಸತ್ಕಾರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ ಅವರು, ಮೂಡಲಗಿ ಶಿಕ್ಷಣ ಸಂಸ್ಥೆ ನನಗೆ ಪ್ರಾಧ್ಯಾಪಕ ವೃತ್ತಿ ಪ್ರಾಚಾರ್ಯ ಹುದ್ದೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುವ ಅವಕಾಶಕೊಟ್ಟು ಬೆಳೆಸಿತು. ಶಿಕ್ಷಣ ಸಂಸ್ಥೆಯ ಋಣ ನನ್ನ ಜೀವನ ಇರುವವರೆಗೆ ಮರೆಯುವುದಿಲ್ಲ ಹಾಗೂ ಅದಕ್ಕೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.

ಪ್ರೊ.ಸಂಜಯ ಖೋತ ಮಾತನಾಡಿ, ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ ಅವರು ಶಿಸ್ತು ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಿದರು ಎಂದರು.

- Advertisement -

ಗ್ರಂಥಪಾಲಕ ಬಸವಂತ ಬರಗಾಲಿ ಮಾತನಾಡಿ, ಡಾ. ಶಾಸ್ತ್ರೀಮಠ ಅವರು ಕಾಲೇಜಿನ ಸಿಬ್ಬಂದಿಯೊಂದಿಗೆ ಆತ್ಮೀಯ ಒಡನಾಟ ಹೊಂದಿ ಕೆಲಸ ಕಾರ್ಯಗಳನ್ನು ಮಾಡಿಸುವ ಕಲೆ ಮೈಗೂಡಿಸಿಕೊಂಡಿದ್ದರು ಎಂದರು.

ಹಳೇ ವಿದ್ಯಾರ್ಥಿ ಶ್ರೀಶೈಲ ನೇಮಗೌಡ್ರ ಮತ್ತು ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿದರು.

ಸಂಸ್ಥೆಯ ಚೇರಮನ್ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ ಮತ್ತು ನಿರ್ದೇಶಕರಾದ ವೀರಣ್ಣಾ ಹೊಸುರ, ಆರ.ಪಿ.ಸೊನವಾಲ್ಕರ, ಬಿ.ಎಚ್.ಸೋನವಾಲ್ಕರ, ಪ್ರದೀಪ ಲಂಕೆಪ್ಪನವರ, ಅನೀಲ ಸತರಡ್ಡಿ ಅವರು ಡಾ. ಶಾಸ್ರ್ತೀಮಠ ಅವರನ್ನು ಸತ್ಕರಿಸಿ ಗೌರವಿಸಿದರು.

- Advertisement -

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಡಾ.ಬಿ.ಸಿ.ಪಾಟೀಲ, ಮಲ್ಲಪ್ಪ ನೇಮಗೌಡ್ರ, ಎಸ್.ಬಿ.ಕದಂ, ಬಾಲಶೇಖರ ಬಂದಿ ಮತ್ತಿತರು ಇದ್ದರು. ಐಶ್ವರ್ಯ ತಳವಾರ ಪ್ರಾರ್ಥಿಸಿದಳು, ನಿಯೋಜಿತ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಸ್ವಾಗತಿಸಿದರು, ಪ್ರೊ.ಎಸ್.ಜಿ.ನಾಯಿಕ ನಿರೂಪಿಸಿದರು, ಪ್ರೊ.ಎಸ್.ಎಲ್.ಚಿತ್ರಗಾರ ವಂದಿಸಿದರು.

- Advertisement -
- Advertisement -

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group