spot_img
spot_img

ಮಕ್ಕಳಲ್ಲಿ ಸಂಸ್ಕೃತಿ ಬೆಳೆಸಯವ ಕಾರ್ಯಕ್ರಮಗಳು ಹೆಚ್ಚಾಗಿ ಜರುಗಬೇಕು – ಎಚ್.ಆರ್.ಪೆಟ್ಲೂರ

Must Read

ಮುನವಳ್ಳಿ – ವೃತ್ತಿ ಜೀವನದಲ್ಲಿ ಬಡ್ತಿ, ನಿವೃತ್ತಿ, ಪ್ರಶಸ್ತಿ, ಹೀಗೆ ಒಂದಲ್ಲ ಒಂದು ಸಂತಸದ ಕ್ಷಣಗಳು ಜರಗುತ್ತವೆ. ಇಂತಹ ಕ್ಷಣಗಳನ್ನು ನಾವು ನಮ್ಮ ಮಕ್ಕಳೊಂದಿಗೆ ಕಾರ್ಯಕ್ರಮ ಸಂಘಟಿಸುವ ಮೂಲಕ ಅವರಲ್ಲಿ ಕೂಡ ಉತ್ತಮ ಸಂಸ್ಕೃತಿ ಸಂಸ್ಕಾರ ಬೆಳೆಸಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಇಂದು ತಮ್ಮ ಶಾಲೆ ಅಷ್ಟೇ ಅಲ್ಲ ಅಕ್ಕ ಪಕ್ಕದ ಪ್ರತಿಯೊಂದು ಶಾಲೆಯಿಂದಲೂ ವೃತ್ತಿ ಬಾಂಧವರನ್ನು ಆಮಂತ್ರಿಸುವ ಮೂಲಕ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿರುವಿರಿ. ಇದು ನಿಜಕ್ಕೂ ಸಂತಸದ ಸಂಗತಿ.

ಇಂತಹ ಪರಂಪರೆಯು ಎಲ್ಲ ಕಡೆಗೂ ಜರುಗುವಂತಾಗಲಿ ಎಂದು ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಅಭಿಪ್ರಾಯಪಟ್ಟರು.

ಅವರು ಸಮೀಪದ ಕಿಟದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪದೋನ್ನತಿ ಹೊಂದಿದ ಶಿಕ್ಷಕ ಎಫ್.ಎನ್.ಹೂಲಿ ಸಿ.ಆರ್.ಪಿಯಾಗಿ ಆಯ್ಕೆಯಾದ ಜಿ.ಎಸ್.ಚಿಪ್ಪಲಕಟ್ಟಿ, ಅಕ್ಷರದಾಸೋಹ ಯೋಜನೆಯಡಿ ಅಡುಗೆಯವರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಯಲ್ಲವ್ವ ಮಾದರ, ಜಿಲ್ಲಾ ಮಟ್ಟದ ಶಿಕ್ಷಣ ರತ್ನ ಪ್ರಶಸ್ತಿ ವಿಭೂಷಿತ ಗುರುಮಾತೆ ಎಂ.ಎಂ.ಪಡೆನ್ನವರ ಇವರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎ.ಎ.ಅಣ್ಣೀಗೇರಿ ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಫ್.ಜಿ.ನವಲಗುಂದ. ಉಪಾಧ್ಯಕ್ಷೆ ಅನಸೂಯ ಮದನಬಾವಿ. ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ.ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಎನ್.ಎ.ಹೊನ್ನಳ್ಳಿ.ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗಪ್ಪ ಬಂಡ್ರೊಳ್ಳಿ. ಗ್ರಾಮ ಪಂಚಾಯತಿ ಸದಸ್ಯರಾದ ದುರ್ಗಪ್ಪ ಮಾದರ.ಮಹಾದೇವಿ ಶೀಲವಂತ.ಜುಬೇದಾಬೇಗಂ ಜಿಡ್ಡಿಮನಿ.ಎಸ್.ಡಿ.ಎಂ.ಸಿ ಸದಸ್ಯರಾದ ಪಕ್ರುಸಾಬ ಮೊಕಾಶಿ, ಕಾಶೀನಾಥ ಮಾಲಸೂರ, ಸುರೇಶ ಬುರ್ಜಿ, ಅಶೋಕ ಕಲಕುಟ್ರಿ, ಮಂಜುನಾಥ ಚಿಗರಿ, ಶೋಭಾ ಸಾಲಿz ಪೂರ್ಣಿಮಾ ನಲವಡೆ, ಸಾಂವಕ್ಕ ಬಂಡ್ರೊಳ್ಳಿ, ಅಕ್ಕಮ್ಮ ಕಲಕುಟ್ರಿ, ಸರಸ್ವತಿ ಕಲಕುಟ್ರಿ, ಗಂಗವ್ವ ಬಡಿಗೇರ, ಸೇರಿದಂತೆ ತೆಗ್ಗಿಹಾಳ ಶಾಲೆಯಿಂದ ಎಸ್.ವೈ.ಬಜಂತ್ರಿ.ಜಕವಾಳ ಶಾಲೆಯ ಮಹಾದೇವಿ ಹುಡೇದ.ಲಕ್ಷೀನಗರ ಶಾಲೆಯ ಬಿ.ಬಿ.ಹುಲಿಗೊಪ್ಪ. ತೆಗ್ಗಿಹಾಳ ಮಡ್ಡಿ ಶಾಲೆಯ ಜೋತ್ಕನ್ನವರ. ಅರ್ಟಗಲ್ ಶಾಲೆಯ ಜೋಗೇರ ಬಸರಗಿ ಶಾಲೆಯ ಬಿ.ಎಸ್.ಪೂಜೇರ ತಲ್ಲೂರ ಕ್ರಾಸ್ ಶಾಲೆಯಿಂದ ಅನಿಲ ರಾವೂಳ .ಎಚ್.ಆರ್.ಪಾಟೀಲ.ಎಸ್.ಎನ್.ಮುಲ್ಲಾ.ಮುನವಳ್ಳಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕ ಎನ್.ಎಲ್.ಕಿತ್ತೂರ.ಸೇರಿದಂತೆ ಮುಖ್ಯೋಪಾಧ್ಯಾಯರುಗಳು ಸಹಶಿಕ್ಷಕರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಎ.ಅಣ್ಣೀಗೇರಿ ಮಾತನಾಡಿ “ಕಿಟದಾಳ ಗ್ರಾಮ ಉತ್ತಮಸಂಸ್ಕೃತಿಗೆ ನಿದರ್ಶನ ಶಾಲೆಯ ಎಲ್ಲ ಕಾರ್ಯಕ್ರಮಗಳಿಗೆ ಇಲ್ಲಿನ ಜನರ ಸಹಕಾರ ಮರೆಯಲಾಗದು. ಜೊತೆಗೆ ಸಂಘದ ಪದಾಧಿಕಾರಿಗಳು ಶಿಕ್ಷಕ ಸ್ನೇಹಿ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ” ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಜಿ.ಎಸ್.ಚಿಪ್ಪಲಕಟ್ಟಿ “ತಾವು ಕಿಟದಾಳ ಶಾಲೆಯಲ್ಲಿನ ಸೇವೆಯನ್ನು ಮರೆಯಲಾಗದು. ಇಲ್ಲಿನ ಜನರ ಸಹಕಾರ ಶಿಕ್ಷಕರ ಒಡನಾಟ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ತಾವು ಹಮ್ಮಿಕೊಂಡಾಗ ತೋರಿದ ಪ್ರೀತಿ ಎಂದೂ ಮರೆಯಲಾಗದು” ಎಂದು ಈ ಶಾಲೆಯಲ್ಲಿ ತಮ್ಮ ಕಾರ್ಯವನ್ನು ನೆನಪಿಸಿಕೊಂಡರು.

ಪಡೆನ್ನವರ ಗುರುಮಾತೆ ಮಾತನಾಡಿ “ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಇಂತಹ ಶಾಲೆಯಲ್ಲಿ ಮಕ್ಕಳೊಂದಿಗೆ ತಮ್ಮ ಒಡನಾಟ ಮತ್ತು ಸಹ ಶಿಕ್ಷಕರ ಮತ್ತು ಮುಖ್ಯೋಪಾಧ್ಯಾಯರ ಸಹಕಾರ ಮರೆಯಲಾಗದು.”ಎಂದರು.

ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ “ಶೈಕ್ಷಣಿಕ ಚಟುವಟಿಕೆಗಳಲ್ಲಿ ಈ ಶಾಲೆ ಸದಾ ಉತ್ತಮ ಪ್ರಗತಿ ಕಾಣುತ್ತಿದೆ. ಇಲ್ಲಿನ ಎಲ್ಲ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಉತ್ತಮ ಕಾರ್ಯ ನಿರ್ವಹಿಸುತ್ತಿರುವರು. ಇದು ಇನ್ನೂ ಉತ್ತಮ ರೀತಿಯಲ್ಲಿ ಸಾಗಲಿ”ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯಾರಾದ ಗುರುನಾಥ ಪತ್ತಾರ “ತಾವು ಪ್ರಧಾನಗುರುಗಳಾಗಿ ಬಡ್ತಿ ಪಡೆಯುವ ಮೊದಲು ಈ ಶಾಲೆಗೆ ಅಣ್ಣೀಗೇರಿಯವರೊಂದಿಗೆ ಬರುತ್ತಿದ್ದ ಸಂಗತಿಯನ್ನು ನೆನಪಿಸಿಕೊಂಡು ಇಂತಹ ಶಾಲೆಯಲ್ಲಿ ಸೇವೆ ಸಲ್ಲಿಸಲು ಹೆಮ್ಮೆ ಎನಿಸುತ್ತದೆ.” ಎಂದರು.

ಬಡ್ತಿ ಪಡೆದ ಮಖ್ಯೋಪಾಧ್ಯಾರಾದ ಎಫ್.ಎನ್.ಹೂಲಿ “ತಮ್ಮ ಸೇವೆಯ ದಿನಗಳಲ್ಲಿ ಈ ಶಾಲೆಯಲ್ಲಿ ಕೈಗೊಂಡ ಚಟುವಟಿಕೆಗಳನ್ನು ನೆನಪಿಸಿ ಈ ಕಾರ್ಯಗಳಿಗೆ ಸಹಕರಿಸಿದ ಎಸ್.ಡಿ.ಎಂ.ಸಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ ಜರುಗಿತು. ಗುರುಮಾತೆ ಸಿ.ಟಿ.ಕುಲಮೂರ ನಿರೂಪಿಸಿದರು. ಎ.ಡಿ.ಕಬ್ಬಿನ ಸನ್ಮಾನಿತರ ಪರಿಚಯಿಸಿದರು. ಎಸ್,ಎನ್.ಬೂದಗಟ್ಟಿ ಸ್ವಾಗತಿಸಿದರು. ಎಂ.ವ್ಹಿ.ಶಿರೂರ ವಂದಿಸಿದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!