ಭೂ ಮಾಪನಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸವದತ್ತಿ: ಭೂಮಾಪನಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸಹಕಾರದಿಂದ ವರ್ತಿಸಬೇಕು ಸಾರ್ವಜನಿಕರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಯಾರಿಗೂ ಅಗೌರವಯುತವಾಗಿ ಮಾತನಾಡಬಾರದು ನಂತರ ಸರ್ವೆ ಕಾರ್ಯ ಏಕೆ ತಡವಾಗುತ್ತಿದೆ ? ತಾಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಕೆರೆಗಳನ್ನು ಸಾರ್ವಜನಿಕರು ಅತಿಕ್ರಮಣ ಮಾಡಿದ್ದಾರೆ ಅದಕ್ಕೆ ನೀವು ಏನು ಕ್ರಮ ಕೈಗೊಂಡಿರುವಿರಿ.? ಸರ್ವೆಯರ್ ಗಳು ಎಷ್ಟು ಜನರಿದ್ದಾರೆ ಪ್ರಕರಣಗಳು ಏಕೆ ಬಾಕಿ ಉಳಿಯುತ್ತಿವೆ ? ಮುನವಳ್ಳಿ ಪುರಸಭೆಯಾಗಿದೆ ಅಲ್ಲಿನ ಸರ್ವೆಕಾರ್ಯ ಏಕೆ ನಿಂತಿದೆ.? ಶಿಂದೊಗಿ ಗ್ರಾಮ ರೈತ ಮಹಾಂತೇಶ ಯಕ್ಕೇರಿ ಒಂದು ಪ್ರಕರಣಕ್ಕೆ ಎರಡು ವರ್ಷಗಳಿಂದ ಭೂ ಮಾಪನಾ ಇಲಾಖೆಗೆ ಅಲೆದಾಡುತ್ತಿದ್ದಾರೆ ಈ ರೀತಿ ಮುಂದುವರೆದರೆ ಹೇಗೆ.? ಎಂದು ವಿಧಾನ ಸಭೆ ಉಪಸಭಾದ್ಯಕ್ಷ ಆನಂದ ಮಾಮನಿಯವರು ಭೂ ಮಾಪನಾ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರು.

ಅವರು ಪುರಸಭೆ ಸಭಾಭವನದಲ್ಲಿ ಭೂ ಮಾಪನಾ ಇಲಾಖೆಯ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡಿದರು.ಮುಂದುವರೆದು “ಸವದತ್ತಿ ಪಟ್ಟಣದಲ್ಲಿ ಮಾಸ್ಟರ ಪ್ಲಾನಿನ ಸರ್ವೆ ಕಾರ್ಯ ಕೊಡಲೇ ಪ್ರಾರಂಬಿಸಬೇಕು. ಮತ್ತು ಅಳತೆ ಮಾಡಿ ಗುರುತಿನ ಮಾರ್ಕಗಳನ್ನು ಮಾಡಬೇಕು” ಎಂದು ಅಧಿಕಾರಿಗಳಿಗೆ ಹೇಳಿದರು.

ನಂತರ ಶಿಂದೋಗಿ ಗ್ರಾಮದ ರೈತ ಮಹಾಂತೇಶ ಯಕ್ಕೇರಿ ಮಾತನಾಡಿ, ಹೊಲದ ನಕಾಶೆಯನ್ನು ತಾವೇ ಕಳೆದಿದ್ದಾರೆ ಅದನ್ನು ನಮಗೆ ತಂದು ಕೊಡಿ ಎಂದು ಹೇಳುತ್ತಿದ್ದಾರೆ ನಾವು ಎಲ್ಲಿಂದ ತಂದು ಕೊಡಬೇಕು.? ಎಂದು ಪ್ರಶ್ನಿಸಿದರು.

- Advertisement -

ನಂತರ ಮಾತನಾಡಿದ ಡಿಡಿಎಲ್‍ಆರ್ ಮೋಹನ ಶಿವಣ್ಣವರ “ಸವದತ್ತಿಯಲ್ಲಿರುವ ನಮ್ಮ ಭೂ ಮಾಪನಾ ಇಲಾಖೆ ಕಾರ್ಯಾಲಯವು ಅತಿ ಚಿಕ್ಕದಾಗಿದೆ ಸಿಬ್ಬಂದಿಗಳು ದಾಖಲೆ ಪತ್ರಗಳನ್ನು ತೆಗೆದು ನೋಡುವುದು ಬಹಳ ಕಷ್ಟವಾಗುತ್ತಿದೆ ಬಹು ಮುಖ್ಯವಾಗಿ ದಾಖಲೆ ಪತ್ರಗಳನ್ನು ಇಡುವುದೂ ಸಹ ಕಷ್ಟವಾಗುತ್ತಿದೆ. ಆದರೂ ಸಹ ನಮ್ಮ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದರು.

ನಂತರ ಎಡಿಎಲ್‍ಆರ್ ರಾಜಶೇಖರ ಹಳ್ಳೂರ ಮಾತನಾಡಿ “ತಾಲೂಕಿನಾದ್ಯಂತ 1850 ಪ್ರಕರಣ ಗಳಿದ್ದು ಪ್ರತಿ ತಿಂಗಳು ಒಬ್ಬ ಸರ್ವೆದಾರ 30 ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿದ್ದಾರೆ. ಎಂದು ತಿಳಿಸಿದರು.

ಭೂಮಾಪನಾ ಇಲಾಖೆಯ ಪರ್ಯಾಯ ವೀಕ್ಷಕರಾದ ಆಯ್ ವಿ ಪತ್ತಾರ. “ಸರಕಾರದ ಬಹಳಷ್ಟು ಹೊಸ ಹೊಸ ಯೋಜನೆಗಳು ಬರುತ್ತಿವೆ ಆದ್ದರಿಂದ ಆ ಕೆಲಸ ಮಾಡುವುದರ ಜೊತೆಗೆ ಇವುಗಳನ್ನೂ ಕೂಡ ಮಾಡುತ್ತಿದ್ದೇವೆ. ನಂತರ ಪ್ರಧಾನ ಮಂತ್ರಿಗಳ ಸ್ವಾಮಿತ್ವ ಯೋಜನೆಯಲ್ಲಿ 6 ಗ್ರಾಮಗಳಿಗೆ ಡಿ ಪಿ ಆರ್ ಕಾರ್ಡಗಳನ್ನು ವಿತರಿಸಿದ್ದೇವೆ ನಂತರ 15 ದಿನಗಳಲ್ಲಿ ಪಿ ಆರ್ ಕಾರ್ಡಗಳನ್ನು ವಿತರಿಸಲಾಗುವುದು” ಎಂದು ಹೇಳಿದರು.

ನಂತರ ಮಾತನಾಡಿದ ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು, ಇಷ್ಟೆಲ್ಲ ಸಮಸ್ಯೆಗಳಿದ್ದರೂ ಇದೂವರೆಗೂ ಈ ವಿಷಯದ ಬಗ್ಗೆ ನನ್ನ ಗಮನಕ್ಕೆ ಯಾರೂ ತಂದಿರುವುದಿಲ್ಲ ಕೂಡಲೇ ಭೂ ಮಾಪನಾ ಇಲಾಖೆಗೆ ನೂತನ ಕಟ್ಟಡವನ್ನು ಕಲ್ಪಿಸಲಾಗುವುದು ಸಿಬ್ಬಂದಿಗಳ ಕೊರತೆ ಇದ್ದರೆ ಮೇಲಾಧಿಕಾರಿಗಳೊಂದಿಗೆ ಮಾತನಾಡುವೆ” ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ. ಉಪಾಧ್ಯಕ್ಷ ದೀಪಕ ಜಾನ್ವೇಕರ. ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚನ್ನಪ್ಪನವರ.ಪುರಸಭೆ ಸದಸ್ಯರಾದ ಸಂಗಮೇಶ ಹಾದೀಮನಿ. ದರೆಪ್ಪ ಮಡ್ಲಿ ಲಕ್ಷ್ಮಣರಾವ ಕುಲಕರ್ಣಿ. ಬಾಬು ಕಾಳೆ. ಆಯ್ ಪಿ ಪಾಟೀಲ. ದ್ಯಾಮಣ್ಣ ಸುತಗಟ್ಟಿ. ಶಿವನಗೌಡಾ ಪಾಟೀಲ. ಸೇರಿದಂತೆ ಎಲ್ಲ ಸದಸ್ಯರು ಹಾಗೂ ಭೂ ಮಾಪನಾ ಇಲಾಖೆ ಶಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!