spot_img
spot_img

ಮುಖ್ಯಶಿಕ್ಷಕರ ಬಡ್ತಿ: ಮಹತ್ವದ ವಿಷಯಗಳ ಕುರಿತು ಡಿ ಡಿ ಪಿ ಐ ರವರಿಗೆ ಮನವಿ ಸಲ್ಲಿಕೆ

Must Read

- Advertisement -

ಬೆಳಗಾವಿ – ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗು ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲಾ ಘಟಕದ ಪದಾಧಿಕಾರಿಗಳು ಇಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ ಎಮ್ ನಲವತವಾಡ ರವರಿಗೆ ಸದ್ಯ ನಡೆಯಲಿರುವ ಮುಖ್ಯ ಶಿಕ್ಷಕರ ಹುದ್ದೆಗೆ ಹಾಗೂ ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗೆ ನಡೆಯುವ ಬಡ್ತಿ ಪ್ರಕ್ರಿಯೆ ಯ ಸಂಬಂಧ ಈಗಾಗಲೇ ಪ್ರಕಟವಾಗಿರುವ ತಾತ್ಕಾಲಿಕ ಪಟ್ಟಿ ಯಲ್ಲಿಯ ಲೋಪ ದೋಷ ಗಳನ್ನು ಸರಿಪಡಿಸಿಕೊಂಡು ಯಾರಿಗೂ ತೊಂದರೆ ಯಾಗದಂತೆ ಪಾರದರ್ಶಕ ವಾಗಿ ನಡೆಸುವಂತೆ ಸಂಘದ ಜಿಲ್ಲಾಧ್ಯಕ್ಷರಾದ ಬಿ ಎಸ್ ಹುಣಸೀಕಟ್ಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಬಸವರಾಜ ಸುಣಗಾರ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ಶಿಕ್ಷಕರ ಸೇವಾ ಹಿರಿತನದಲ್ಲಿ ಪದೋನ್ನತ್ತಿ ಪಡೆಯುವ ಅರ್ಹರ ಯಾದಿ ಸಿದ್ದಪಡಿಸುವುದು, ಪದೋನ್ನತ್ತಿಯಲ್ಲಿ ಸದ್ಯ ಸೇವೆಯಲ್ಲಿರುವ ಶಿಕ್ಷಕರ ಹೆಸರು ಮಾತ್ರ ಪರಿಗಣಿಸುವುದು, ಈಗಾಗಲೇ ನಿವೃತ್ತಿ ಯಾಗಿರುವ, ಮರಣ ಹೊಂದಿರುವ, ಹಾಗೂ ಸ್ವಯಂ ನಿವೃತ್ತಿ ಪಡೆದಿರುವ ಶಿಕ್ಷಕರ ಹೆಸರು ಪದೋನ್ನತ್ತಿ ಪಟ್ಟಿಯಿಂದ ತೆಗೆದುಹಾಕುವುದು,2022 ರ ಮೇ ತಿಂಗಳ 30 ರ ವರೆಗೆ ಖಾಲಿ ಯಾಗುವ ಸ್ಥಳಗಳನ್ನು ಪರಿಗಣಿಸಿ ಅವುಗಳ ಭರ್ತಿಮಾಡುವುದು, ಈ ಹಿಂದಿನoತೆ ನಿಯಮಾವಳಿಯ ಅನುಸಾರ ಎ ಬಿ ಸಿ ವಲಯವಾರು ಮುಖ್ಯ ಶಿಕ್ಷಕರ ವರ್ಗಾವಣೆ ನಡೆಸಬೇಕು, ಹೀಗಾದರೆ ಬಹಳಷ್ಟು ಶಿಕ್ಷಕರಿಗೆ ಅನುಕೂಲ ವಾಗುವುದು ಎಂದು ಮನವಿಯಲ್ಲಿ ವಿನಂತಿಸಲಾಯಿತು.

- Advertisement -

ಮನವಿ ಸ್ವೀಕರಿಸಿದ ಡಿ ಡಿ ಪಿ ಐ ರವರಾದ ಬಿ ಎಮ್ ನಲವತವಾಡ ರವರು ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶದನ್ವಯ ಬಡ್ತಿ ಕಾರ್ಯ ನಡೆಯಲಿದೆ ಜೊತೆಗೆ ಮನವಿಯ ಎಲ್ಲಾ ವಿಷಯ ಗಳಿಗೆ ಸ್ವಂದಿಸುವ ಭರವಸೆ ನೀಡಿದರು ಎ ಬಿ ಸಿ ವಲಯವಾರು ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವದಾಗಿ ಹೇಳಿದರು.

ಮನವಿ ಸಮಯದಲ್ಲಿ ಸಂಘಟನೆಯ ಬೆಳಗಾವಿ ತಾಲೂಕು ಪ್ರಧಾನ ಕಾರ್ಯದರ್ಶಿ ಮಹಾದೇವ ಅಥಣಿ, ಪದಾಧಿಕಾರಿಗಳಾದ ರಾಜೇಂದ್ರ ಕುಮಾರ ಚಲವಾದಿ, ಪಿ ಕೆ ಘೋಲಪೆ, ಶ್ರೀಮತಿ ಎಸ್ ಜಿ ರಜಪೂತ, ಶ್ರೀಮತಿ ವಿ ಆರ್ ನಾಯಿಕ, ಎಮ್ ವಾಯ್ ಕೊರ್ಡೇ, ಬೈಲಹೊಂಗಲದ ಕೆ ಜಿ ಭಜಂತ್ರಿ,ನಗರ ಘಟಕದ ಅಧ್ಯಕ್ಷ ಅರ್ಜುನ ಡಿ ಸಾಗರ, ಡಿ ಎಸ್ ಪೂಜಾರ,ಶ್ರೀಕಾಂತ ಶಿಂಗೇನ್ನವರ,ಶ್ರೀಮತಿ ಎನ್ ಬಿ ತಳವಾರ,ಖಾನಾಪುರ ತಾಲೂಕಿನ ಅಧ್ಯಕ್ಷ ಎಸ್ ಬಿ ಜಕಾತಿ,ಯರಗಟ್ಟಿ ತಾಲೂಕಾ ಅಧ್ಯಕ್ಷರಾದ ವಾಯ್ ಬಿ ಅಜ್ಜನಕಟ್ಟಿ, ಉಪಾಧ್ಯಕ್ಷರಾದ ಡಿ ಡಿ ಭೋವಿ, ಪ್ರಧಾನ ಕಾರ್ಯದರ್ಶಿಗಳಾದ ಮಾರುತಿ ಹಡಪದ, ಎ ಎ ಮುಕ್ತುನವರ, ಎಸ್ ಎ ಚೀಲಕಂಡಿ ಸೇರಿದಂತೆ ಹಲವಾರು ಜಿಲ್ಲೆಯ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group