spot_img
spot_img

ಪ್ರಧಾನ ಗುರುಗಳ ಹುದ್ದೆಗೆ ಶ್ರೀಘ್ರ ಬಡ್ತಿಗೆ ಕ್ರಮ: ಡಿ ಡಿ ಪಿ ಐ ನಾಲತವಾಡ ಭರವಸೆ

Must Read

- Advertisement -

ಬೆಳಗಾವಿ ದಿ 2: ಶನಿವಾರ ಸಂಜೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ನಾಲತವಾಡ ರವರಿಗೆ ಸ್ವಾಗತ ಕೋರಿ, ಬೆಳಗಾವಿ ದಕ್ಷಿಣ ಶೈಕ್ಷಣಿಕ ಸಂಘ ಸಂಸ್ಥೆ ಗಳ ಪರವಾಗಿ ಸತ್ಕರಿಸಿ ಅಭಿನಂಧಿಸಲಾಯಿತು.

ಪ್ರಾಥಮಿಕ ಶಾಲೆಗಳ ಸರ್ವ ರೀತಿಯಲ್ಲಿ ಪ್ರಗತಿಗೆ ಮಾರ್ಗದರ್ಶನ ನೀಡಲು ಮನವಿ ಮಾಡಲಾಯಿತು, ಎಲ್ಲಾ ಸಂಘಟನೆ ಪದಾಧಿಕಾರಿಗಳು ಶೈಕ್ಷಣಿಕ ಆಡಳಿತದಲ್ಲಿ ಸಹಕಾರ ನೀಡುವ ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಪ್ರಧಾನ ಗುರುಗಳ ಸಂಘದ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುರುಸ್ಪಂದನ ವೇದಿಕೆ, ಬೆಳಗಾವಿ ತಾಲೂಕ ಪ್ರಾಥಮಿಕ ಶಿಕ್ಷಕರ ಸಹಕಾರ ಸಂಘ, ಶಿವಾಜಿನಗರ,ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಸಂಘಟನೆ ಹಾಗೂ ಭೀಮ್ ನೌಕರರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಪ್ರಧಾನ ಗುರುಗಳ ಸಂಘದ ಪ್ರಧಾನಕಾರ್ಯದರ್ಶಿ ಬಸವರಾಜ ಸುಣಗಾರ ರವರು ಹಾಗೂ ಇತರ ಸಂಘದ ಪದಾಧಿಕಾರಿಗಳು ಶಾಲು ಹೊದಿಸಿ ಪುಸ್ತಕ ನೀಡಿ ಸನ್ಮಾನಿಸಿ ಸ್ವಾಗತಿಸಿದರು.

- Advertisement -

ಪದಾಧಿಕಾರಿಗಳೆಲ್ಲ ಒಟ್ಟಾಗಿ ಬಹುದಿನದಿಂದ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರಧಾನ ಗುರುಗಳ ಹುದ್ದೆಗೆ ಭಡ್ತಿನೀಡುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು, ಭಡ್ತಿ ನೀಡುವ ಪೂರ್ವದಲ್ಲಿ ನಿಯಮಾವಳಿಯನುಸಾರವಾಗಿ ಎ, ಬಿ, ವಲಯಗಳಲ್ಲಿರುವ ಖಾಲಿ ಹುದ್ದೆಗೆ ಸಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಗುರುಗಳನ್ನು ಸ್ಥಳಾoತರಿಸಬೇಕೆಂದು ಎಲ್ಲಾ ಸಂಘಟನೆ ಪರವಾಗಿ ಮನವಿ ಸಲ್ಲಿಸ ಲಾಯಿತು. ಸದ್ಯದ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಭಡ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದರು.

ಈ ಸಮಯದಲ್ಲಿ ಬೈಲಹೊಂಗಲದ ಬಿ ಎಸ್ ಹುಣಸಿಕಟ್ಟಿ, ಎಸ್ ಜಿ ಬೆಳಗಾವಿ, ಎಮ್ ಎಸ್, ಬೋಳಣ್ಣನವರ, ಕೆ ಜಿ ಭಜಂತ್ರಿ,ಬೆಳಗಾವಿಯ ಶಶಿಧರ್ ರೊಟ್ಟಿ,ಘೋಳಪೆ, ಪ್ರಕಾಶ ಕಾಂಬಳೆ, ಶ್ರೀಮತಿ ಎಸ್ ಜಿ ರಜಪೂತ, ಬಸವರಾಜ ಹಟ್ಟಿಹೋಳಿ, ಶಿವಾನಂದ ಹಿತ್ತಲಮನಿ, ಖಾನಾಪುರದ ಎಸ್ ಬಿ ಜಕಾತಿ, ಯರಗಟ್ಟಿಯ ವಾಯ್ ಬಿ ಅಜ್ಜನಕಟ್ಟಿ, ಡಿ ಡಿ ಭೋವಿ, ಎಮ್ ಸಿ ಹಡಪದ, ಎಸ್ ವಾಯ್ ಉಪ್ಪಾರ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಕೋಶಾಧ್ಯಕ್ಷರಾದ ಎಸ್ ಡಿ ಗಂಗಣ್ಣವರ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ದನಗೌಡರ. ಬೆಳಗಾವಿ ತಾಲೂಕಿನ ಶಿಕ್ಷಕರ ಸೊಸೈಟಿ ಅಧ್ಯಕ್ಷ ರಾದ ಅಡಿವೆಪ್ಪ .ಬಿ. ಮಡಿವಾಳರ, ಮಾಜಿ ಅಧ್ಯಕ್ಷ ರಾದ ಶೇಖರ್. ಕರಂಬಳಕರ. ಅನ್ವರ ಲಂಗೋಟಿ. ಆಡಳಿತ ಸದಸ್ಯರಾದ ಆನಂದಗೌಡ ಕಾದ್ರೊಳ್ಳಿ. ಶಿವಾ ಪಾಟೀಲ. ಬೈಲಹೊಂಗಲ ತಾಲೂಕಿನ ಅಧ್ಯಕ್ಷರಾದ ಬಿ ವಿ,ಬಾನಿ ಸೇರಿದಂತೆ ಪದಾಧಿಕಾರಿಗಳಾದ ನಿಜಾಮುದ್ದಿನ್ ಹಕ್ಕಿ . ಸಂಜೀವ. ಬಡಿಗೇರ.ಎ ಎಮ್ ಪಟೇಲ.ಸತೀಶಪಾಟೀಲ.ಭರತ. ಬಳ್ಳಾರಿ,ಎನ್ ಡಿ ಮಾದರ. ಸುನಿಲ ದೇಸೂರಕ ರ.ಎನ್ ಆಯ್. ತಾವರೆ. ಆಸೀಫ್ ಅತ್ತಾರ. ವಿರುಪಾಕ್ಷಿ ಬರಗಾಲಿ, K.G.ಗಡಾದ, ಕುಬೇರ.ಜಾಯಕನವರ, ರಾಜು. ಮೇಳೆದ,ಮುಸ್ಲಿಂ ನೌಕರರ ಸಂಘಟನೆಯ ಬೆಳಗಾವಿ ಅಧ್ಯಕ್ಷರಾದ ಸಲೀಂ ನದಾಫ. ಯಾಸೀನ್ ಬೆಪಾರಿ. ಎ ಜಿ ಮುಲ್ಲಾ. ನದಾಫ ಸರ್ ರವರನ್ನೊಳಗೊಡಂತೆ ಬೆಳಗಾವಿ ಜಿಲ್ಲೆಯಲ್ಲಿಯ ವಿವಿಧ ತಾಲೂಕು ಪಧಾಧಿಕಾರಿಗಳು ಹಾಗೂ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣಾಧಿ ಕಾರಿ ಗಳಾದ ಡಾ ಗುರುನಾಥ ಹೂಗಾರ ಸೇರಿದಂತೆ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

ಏ ಸಬ್ ಪಾಪೀ ಪೇಟ್ ಕಾ ಸವಾಲ್ ಹೈ ಜನಾಬ್ ಔರ್ ಕುಚ್ ಭೀ ನಹೀ…

ಎಲ್ಲಾರೂ ಮಾಡುವದು ಹೊಟ್ಟೆಗಾಗಿ... ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅನ್ನುವ ಮಾತನ್ನು ನಾವು ನೀವೆಲ್ಲ ಆಗಾಗ ಕೇಳುತ್ತಲೇ ಇರುತ್ತೇವೆ.ಆದರೆ ಹಣ ಗಳಿಸುವ ಆಸೆಗೆ ಬಿದ್ದ ಮನುಷ್ಯ ಮಾತ್ರ...
- Advertisement -

More Articles Like This

- Advertisement -
close
error: Content is protected !!
Join WhatsApp Group