spot_img
spot_img

ವಿರಾಟಪುರದ ವಿರಾಗಿ ಚಲನಚಿತ್ರದ ಪ್ರಚಾರಾರ್ಥ ರಥ

Must Read

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ. ಅಂದು ಜನರು ಊಟಕ್ಕೂ ಪರಿತಪಿಸುವ ಸಂದರ್ಭದಲ್ಲಿ ಸುಮಾರು 8 ಗಂಟೆಗಳ ಕಾಲ ಕಂತಿ ಭಿಕ್ಷೆ ಮಾಡಿ ಸಮಾಜವನ್ನು ಬದುಕಿಸಿ ಶಿಕ್ಷಣದ ಕ್ರಾಂತಿಯನ್ನೆ ಎಬ್ಬಿಸದಿದ್ದರೆ ನಾವೆಲ್ಲ ಶಿಕ್ಷಣದಿಂದ ವಂಚಿತರಾಗುತ್ತಿದ್ದೆವು ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ ಕುಮಾರಮಹಾಸ್ವಾಮಿಗಳ ಕುರಿತಾದ ಚಲನಚಿತ್ರ ವಿರಾಟಪುರ ವಿರಾಗಿ ಚಿತ್ರದ ಪ್ರಚಾರಾರ್ಥವಾಗಿ ಬಂದ ರಥಕ್ಕೆ ಅದ್ದೂರಿಯಾಗಿ ಸ್ವಾಗತಿಸಿ ವಾಲ್ ಪೋಸ್ಟರ್ ( ಗೋಡೆ ಚಿತ್ರ) ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದ ಪಿಡುಗುಗಳನ್ನು ಹೊಡೆದೋಡಿಸುವ ಮತ್ತು ಸಮಾಜದ ಅಂಧಕಾರವನ್ನು ಅಳಿಸುವಂತ ದೃಶಾವಳಿಗಳೂ ಚಿತ್ರದಲ್ಲಿವೆ ಎಂದರು.

ಶಿವಾನಂದ ಬಿರಾಜದಾರ ಮಾತನಾಡಿ, ಸಾಮಾಜಿಕ ಭಕ್ತಿ ರಸವನ್ನು ಉಣಬಡಿಸಲು ರಾಜ್ಯದ 6 ಕಡೆಗಳಿಂದ ಹಾಲಗಲ್ ಗುರುಕುಮಾರ ಶಿವಯೋಗಿಗಳ ಭಾವಚಿತ್ರದೊಂದಿಗೆ ವಿರಾಟಪುರ ವಿರಾಗಿ ಚಿತ್ರದ ರಥಯಾತ್ರೆ ಪ್ರಾರಂಭವಾಗಿದೆ ಗುರುಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಹೊತ್ತ ಈ ಚಿತ್ರವು ಜ.13 ರಂದು ಬಿಡುಗಡೆಗೊಳ್ಳಲಿದ್ದು ಪ್ರತಿಯೊಬ್ಬರು ವೀಕ್ಷಿಸುವ ಮೂಲಕ ಸಮಾಜದಲ್ಲಿ ಪಿಡುಗುಗಳನ್ನು ಹೊಡೆದೋಡಿಸಬಹುದು ಎಂದು ಅಭಿಮತ ವ್ಯಕ್ತಪಡಿಸಿದರು.

ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿ, ಹಾನಗಲ್ ಕುಮಾರ ಮಹಾಸ್ವಾಮಿಗಳೆಂದರೆ ಸಿಂದಗಿ ಪಟ್ಟಾಧ್ಯಕ್ಷರಿಗೆ ಎಲ್ಲಿಲ್ಲದ ಸಂತಸ ಹಾನಗಲ್ ಶ್ರೀಗಳೆಂದರೆ ಕರ್ನಾಟಕದ ಪವರ್ ಇದ್ದಹಾಗೆ ಎನ್ನುವುದಕ್ಕೆ ಅವರು ಮಾಡಿದ ಪವಾಡಗಳೇ ನಿದರ್ಶನ.  ಕುಮಾರ ಶಿವಯೋಗಿಗಳ ಅವರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುತ್ತಿರುವ ಕಾರ್ಯ ಚಿತ್ರದ ಮೂಲಕ ತಿಳಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು. 

ಯಂಕಂಚಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶಿವಯೋಗಿ ಮಂದಿರವನ್ನು ಸ್ಥಾಪಿಸಿದ ಮಹಾನ್ ಪುರುಷ ಹಾನಗಲ್ ಗುರುಕುಮಾರ ಮಹಾಸ್ವಾಮಿಗಳು  ಅವರ ಚರಿತ್ರೆಯನ್ನು ಚಲನಚಿತ್ರದ ಮೂಲಕ ಬಿತ್ತರಿಸುತ್ತಿರುವುದು ಅವರ ದೃಷ್ಟಾಂತ ಗಳನ್ನು ನಾವೆಲ್ಲ ಮೈಗೂಡಿಸಿಕೊಂಡು ನಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮೇರವಣಿಗೆಯಲ್ಲಿ ಬೊರಗಿ ಪುರದಾಳ ಶ್ರೀ ಮಠದ ತಪೋರತ್ನ ಮಹಾಲಂಗೇಶ್ವರ ಸ್ವಾಮಿಜಿ, ಕನ್ನೋಳ್ಳಿ ಮರುಳಾರಾಧ್ಯಮಠದ ಸಿದ್ದಲಿಂಗ ಶಿವಾಚರ್ಯರು, ವಿರಕ್ತಮಠದ ಚನ್ನಬಸವ ದೇವರು, ಕೊಕಟನೂರದ ಮಡಿವಾಳೇಶ್ವರ ಶಿವಯೋಗಿಗಳು, ಮಲಗಾಣ ಶ್ರೀಗಳು, ಸಿದ್ದರಾಮ ಶಿವಾಚಾರ್ಯರು, ಯಂಕಂಚಿ ಮಲ್ಲಿಕಾರ್ಜುನ ಮಹಾರಾಜರು,  ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ,  ಅಶೋಕ ವಾರದ, ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಸತೀಶ ಕವಲಗಿ, ಕಿರಣ ಕೋರಿ, ಮಹಾಂತೇಶ ಪಟ್ಟಣಶೆಟ್ಟಿ, ರಮೇಶ ಜೋಗುರ, ಮಾದೇವಿ ಹಿರೇಮಠ, ಸದಾಶಿವ ಕುಂಬಾರ, ಮಾದೇವಿ ಬಮ್ಮಣ್ಣಿ ಸೇರಿದಂತೆ ಅನೇಕರಿದ್ದರು.

ಶಕುಂತಲಾ ಹಿರೇಮಠ ಪ್ರಾರ್ಥಿಸಿದರು. ಡಾ. ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರಾಧ್ಯಾಪಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು. 

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸಾತವಿರೇಶ್ವರ ಕಲ್ಯಾಣ ಮಂಟಪದಿಂದ ಟಿಪ್ಪು ಸುಲ್ತಾನ ವೃತ್ತದ ಮಾರ್ಗವಾಗಿ ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮೂಲಕ ವಿವಿಧ ವಾದ್ಯ ಮೇಳಗಳೊಂದಿಗೆ ಜೈಕಾರದೊಂದಿಗೆ ಸಾರಂಗಮಠದ ಆವರಣಕ್ಕೆ ರಥ ಆಗಮಿಸಿತು. ಅಲ್ಲಲ್ಲಿ ಮಹಿಳೆಯರು ನೀರು ಹಾಕಿ, ಆರತಿ ಮಾಡಿ ಟೆಂಗು ಒಡೆದು ಭಕ್ತಿ ಸಮರ್ಪಿಸಿದರು.

ಈ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಚಲನಚಿತ್ರದ 15 ನಿಮಿಷಗಳ ತುಣುಕುಗಳನ್ನು ಜನರು ವೀಕ್ಷಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!