spot_img
spot_img

ವಕ್ಫ್ ಬೋರ್ಡ್ ನಿಂದ ಆಸ್ತಿ ಕಬಳಿಕೆ ತನಿಖೆಯಾಗಬೇಕು – ದಸ್ತಗೀರ ಮುಲ್ಲಾ

Must Read

spot_img
- Advertisement -

ಸಿಂದಗಿ: ವಕ್ಫ್ ಬಗ್ಗೆ ಜ್ಞಾನವೇ ಇಲ್ಲದ ವಕ್ಫ್ ಸಚಿವರು ಚುನಾವಣಾ ಪ್ರಚಾರಕ್ಕಾಗಿ ಬಂದು ,ವಕ್ಫ್ ಅದಾಲತ ಮಾಡುವದರ ಮುಖಾಂತರ ಗೊಂದಲ ಸೃಷ್ಟಿಸಿ ಸುಮ್ಮನಿರುವದು ನೋಡಿದರೆ ಸರ್ಕಾರವೇ ಸಾರ್ವಜನಿಕರ ಆಸ್ತಿ ಅತೀಕ್ರಮಣ ಮಾಡಿದ ಹಾಗಾಗಿದೆ. ರಾಜ್ಯದಲ್ಲಿ ವಕ್ಫ್ ಆಸ್ತಿಯ ಅತೀಕ್ರಮಣ ಮತ್ತು ಕಬಳಿಕೆ ಆಗಿದ್ದು ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕೆಂದು ಟಿಪ್ಪು ಕ್ರಾಂತಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ೧೯೧೩ ರ ಟ್ರಷ್ಟಿ ಆಕ್ಟ್ ಮತ್ತು೧೯೧೩ ರ ಮುಸಲ್ಮಾನ ವಕ್ಫ್ ವ್ಯಾಲಿಡೀಟಿ ಆಕ್ಟ್ ರಚಿಸಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಧಾರ್ಮಿಕ ಸ್ಥಳಗಳಿಗೆ ಆಸ್ತಿಯನ್ನು ದತ್ತಿ, ದಾನ ಅಂದರೆ ವಕ್ಫ್ ಮಾಡಬಹುದು ಎಂದು ಕಾನೂನು ರಚಿಸಲಾಯಿತು. ತದನಂತರ ೧೯೫೪ ರಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆ ಮಾಡಲಿಕ್ಕೆ ವಕ್ಫ್ ಕಾನೂನನ್ನು ತರಲಾಯಿತು. ಕಾನೂನು ಮಾಡಿದ ನಂತರ ೧೯೬೫ ರಿಂದ ೧೯೭೦ ರವರೆಗೆ ವಕ್ಫ್ ಆಸ್ತಿಯನ್ನು ಸರ್ವೇ ಮಾಡಲಾಯಿತು ಇದಾದ ನಂತರ ೧೯೭೪ ರಲ್ಲಿ ಮುಂಬೈ ಕರ್ನಾಟಕ ವಕ್ಫ್ ಆಸ್ತಿಗಳನ್ನು ಗೆಜೆಟ್ಟನಲ್ಲಿ ನೋಂದಾಯಿಸಲಾಯಿತು. ಮತ್ತೆ ೨೦೨೦-೨೧ ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೆ ವಕ್ಫ್ ಆಸ್ತಿಗಳನ್ನು ಗೆಜೆಟ್ಟನಲ್ಲಿ ನೋಂದಾಯಿಸಲಾಯಿತು. ಆದರೆ ಇಂದು ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು ಹಾಗೂ ಅತಿಕ್ರಮಣಕಾರರು ಕಬಳಿಸಿಕೊಂಡರೊ ? ಅಥವಾ ವಕ್ಫ್ ಬೋರ್ಡ್ ನೇ ಸಾರ್ವಜನಿಕರ ಆಸ್ತಿ ಕಬಳಿಸಿಕೊಂಡಿತೋ ಎಂಬುವದು ಬಹಿರಂಗವಾಗಬೇಕಾಗಿದೆ ಎಂದಿದ್ದಾರೆ.

ಅನಧಿಕೃತವಾಗಿ ವಕ್ಫ್ ಬೋರ್ಡ್ ಸಾರ್ವಜನಿಕರ ಮತ್ತು ರೈತರ ಆಸ್ತಿಯನ್ನು ಕಬಳಿಸಿಕೊಂಡಿದ್ದೆ ಆಗಿದ್ದರೆ, ಅನ್ಯಾಯಕ್ಕೆ ಒಳಗಾದವರು ವಕ್ಫ್ ಟ್ರಿಬುನಲ್ ಕೋರ್ಟಲ್ಲಿ ಮೂಲ ದಾಖಲೆಗೊಳೊಂದಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆದು ಕೊಳ್ಳಲು ಅವಕಾಶ ಇದೆ. ಆದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು ,ಅತೀಕ್ರಮಣಕಾರರು ಕಬಳಿಸಿ ಕೊಂಡರೆ ಸರ್ಕಾರ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು .ಸರ್ಕಾರ ಶೀಘ್ರ ವಕ್ಫ್ ಆಸ್ತಿಯನ್ನು ಸರ್ವೇ ಮಾಡಿಸಿ ಹದ್ದುಬಸ್ತಿ ಮಾಡುವದರ ಮುಖಾಂತರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಸಾರ್ವಜನಿಕರಿಗೆ ನಿಜವಾಗಲು ವಕ್ಫ್ ಇಲಾಖೆ ಇಂದ ತೊಂದರೆ ಆಗಿದ್ದರೆ ರಾಜ್ಯದಲ್ಲಿ ಸರ್ಕಾರ ಒಂದು ನಿವೃತ್ತ ನ್ಯಾಯಮೂರ್ತಿ ಗಳ ಸಮಿತಿ ರಚಿಸಿ ರಾಜ್ಯದಲ್ಲಿ ಯಾರ ಆಸ್ತಿಯನ್ನು ಯಾರು ಕಬಳಿಸಿಕೊಂಡಿದ್ದಾರೆ ಎಂದು ವರದಿ ತಯಾರಿಸಿ ಸರ್ಕಾರಕ್ಕೆ ಒಪ್ಪಿಸಲಿ. ಅದನ್ನು ಬಿಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡುವದು ಸರಿ ಅಲ್ಲ. ತಮ್ಮ ತಮ್ಮ ಪಕ್ಷದ ಭೂಗಳ್ಳರನ್ನು ಉಳಿಸುವ ಸಲುವಾಗಿ ಈ ರೀತಿಯ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಮೂಡಿಸಿವದು ಸರಿಯಲ್ಲ. ಈ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೇನಾದ್ರು ನೈತಕತೆ ಅನ್ನೋದು ಇದ್ದರೆ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನಪಾಡಿಯವರ ವರದಿಯನ್ನು ಜಾರಿ ಮಾಡಲಿ ಮತ್ತು ಜಾರಿ ಮಾಡಿಸುವಸಲುವಾಗಿ ಹೋರಾಟ ಮಾಡಲಿ.ವಿಶೇಷವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ಜನರನ್ನು ದಾರಿತಪ್ಪಿಸುವ ಕೆಲಸ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಆಗ್ರಹ ಪಡಿಸಿದ್ದಾರೆ.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group