ಸಿಂದಗಿ ಪುರಸಭೆಯಲ್ಲಿ ಹಗರಣ ; ಇದು ಅವರಿಗೆ ರೂಢಿಯಾಗಿದೆಯಂತೆ !
ಸಿಂದಗಿ; ಪಟ್ಟಣದ ಪುರಸಭೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಹಾಗೂ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಯಾರದೋ ಆಸ್ತಿ ಯಾರದೋ ಹೆಸರಿನಿಂದ ವರ್ಗಾವಣೆಗೊಳ್ಳುತ್ತಿರುವ ಘಟನೆಗಳನ್ನು ತಡೆಗಟ್ಟುವಂತೆ ಮಹಿಳೆಯೋರ್ವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಸಚಿವರು, ಶಾಸಕರು, ಪೊಲೀಸ್ ವರಿಷ್ಠಾಧಿಕಾರಿಗಳು, ಶಾಸಕರು, ತಹಶೀಲ್ದಾರರು,ನಗರ ಯೋಜನಾ ಅಧಿಕಾರಿಗಳು ಅಷ್ಟೇ ಅಲ್ಲದೆ ಪತ್ರಿಕಾ ಮಾಧ್ಯಮದವರಿಗೂ ಪತ್ರ ಬರೆದಿರುವ ಅವರು, ಸಿಂದಗಿ ನಗರದ ವಾರ್ಡ ನಂ. 17 ರಲ್ಲಿ, ಯಾವುದೇ ಖರೀದಿ ಪತ್ರ ಇಲ್ಲದೇ ಸಬ್‍ರಜಿಸ್ಟರ ಕಛೇರಿಯಲ್ಲಿ ನೊಂದಣಿಯಾಗದೇ, ಪುರಸಭೆ ಖಾತೆಯಲ್ಲಿ ಸಿಂದಗಿ ಪುರಸಭೆಯಲ್ಲಿನ ದಿವಂಗತ ಅಬ್ದುಲಗಪೂರ ನಬಿಲಾಲ ಮಸಳಿ ಎಂಬುವವರ ಹೆಸರಿನಲ್ಲಿದ್ದ ಆಸ್ತಿ ನಂ. 947/7/ಕ/17 ಇದನ್ನು ಶ್ರೀಮತಿ ಶ್ರೀದೇವಿ ಗಂ. ಯಲ್ಲಪ್ಪ ಭಂಡಾರಿ ಎಂಬ ಹೆಸರಿಗೆ ನೊಂದಣಿ ಇಲಾಖೆಯಲ್ಲಿ ನೊಂದಣಿಯಾಗದೇ ನೆರವಾಗಿ ಪುರಸಭೆಯಲ್ಲಿ ಮಾತ್ರ ಇವರ ಖಾತೆ ಬದಲಾವಣೆಯಾಗಿದೆ. ಇದು ಕಾನೂನು ಬಾಹಿರವಾಗಿರುವ ಕಾರ್ಯವಾಗಿದ್ದು, ಸಂಬಂಧಿಸಿದ ಅಧಿಕಾರಿಗಳ ಮೇಲೆ ಮತ್ತು ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದಿದ್ದಾರೆ
ಈಗಾಗಲೇ ಇದೇ ರೀತಿಯಲ್ಲಿ, ಕೇವಲ ಆಸ್ತಿ ಉತಾರ ಆಧಾರವಾಗಿ ಇಟ್ಟುಕೊಂಡು ಸಬ್‍ರಿಜಿಸ್ಟ್ರಾರ್ ಆಪೀಸಿನಲ್ಲಿ 19 ಪ್ಲಾಟಗಳು, ಡಾ| ಅಮಿತ ಆರ್ ವಾರದ ಅವರಿಗೆ ಸೇರಿದ 18 ಪ್ಲಾಟಗಳು ಬೇರೆಯವರ ಹೆಸರಿಗೆ ವರ್ಗವಾಗಿದ್ದ ಪ್ರಕರಣ ಕೋರ್ಟ ಅಂಗಳದಲ್ಲಿದ್ದರೂ ಕೂಡಾ ಇಂತಹ ಕಾನೂನು ಬಾಹಿರವಾಗಿರುವ ಕೆಲಸಕ್ಕೆ ಈಗಲೂ ಕಡಿವಾಣ ಬಿದ್ದಿಲ್ಲ, ಹಣದ ಆಸೆಗಾಗಿ ಮತ್ತೊಬ್ಬರ ಆಸ್ತಿಯನ್ನು ಬೇರೊಬ್ಬರ ಹೆಸರನಲ್ಲಿ ಪರಬಾರೆ ಮಾಡುತ್ತಿದ್ದು, ಇದು ಸಿಂಧಗಿ ಪುರಸಭೆಯ ರೂಢಿಯಾಗಿ ಬಿಟ್ಟಿದೆ. ನನ್ನ ತಂದೆಯ ಹೆಸರಿಗಿದ್ದ 22 ಪ್ಲಾಟಗಳಲ್ಲಿ 1 ಪ್ಲಾಟ ಹೀಗಾಗಿದೆ. ಸದರ ರಜಿಸ್ಟರದಲ್ಲಿ ಪುರಸಭೆ ಸಿಬ್ಬಂದಿ ದಾಖಲು ಮಾಡಿದ ವಿವರಗಳ ಝರಾಕ್ಷ ಪ್ರತಿಯನ್ನು ಈ ಪತ್ರಕ್ಕೆ ಲಗತ್ತಿಸಿದೆ. ಸಿಂದಗಿ ಪುರಸಭೆಯಲ್ಲಿ ದುಡ್ಡಿನ ಅವ್ಯವಹಾರ ಮಿತಿ ಮೀರಿದೆ ಪ್ರತಿಯೊಂದು ಕೆಲಸಕ್ಕೆ ಹಣದ ಬೇಡಿಕೆ ಅದಕ್ಕಾಗಿ ಕಾನೂನು ಕ್ರಮ ಜರುಗಿಸಿ, ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಶ್ರೀಮತಿ ದಹಿದಾ ಮುಸ್ತಾಕ ತಾಂಬೋಳಿ ಮನವಿ ಮಾಡಿಕೊಂಡಿದ್ದಾರೆ.
ಖರೀದಿ ನೋಂದಣಿಯಾಗದೆ ಆಸ್ತಿ ಪರಭಾರೆಯಾಗುತ್ತಿರುವ ಪ್ರಕರಣ ಕಾನೂನು ಬಾಹಿರವಾಗಿದ್ದು ಇಂಥ ಪ್ರಕರಣಗಳು ಸಿಂದಗಿ ಪುರಸಭೆಯಲ್ಲಿ ಸಾಮಾನ್ಯವಾಗಿದೆ ಎಂಬುದೇ ಅತ್ಯಂತ ವಿಸ್ಮಯಕಾರಿಯಾಗಿದೆ. ಭ್ರಷ್ಟಾಚಾರ ಮಿತಿ ಮೀರಿದೆಯೆಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗಿದ್ದು ಶಾಸಕರ ಗಮನಕ್ಕೆ ಹೇಗೆ ಬರಲಿಲ್ಲವೆಂಬುದೇ ವಿಚಿತ್ರವಾಗಿದೆ. ಅಥವಾ ಶಾಸಕರು ಗೊತ್ತಿದ್ದೂ ಜಾಣಕುರುಡು ತೋರಿಸಿದರೋ ಎಂಬುದೂ ಒಂದು ಗುಮಾನಿಯಾಗಿದೆ.
ಸದರಿ ಮಹಿಳೆ ಸಚಿವರಾದಿಯಾಗಿ ಎಲ್ಲರಿಗೂ ದೂರು ನೀಡಿದ್ದು ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ತಾವ ರೀತಿಯಾಗಿ ಸ್ಪಂದಿಸುತ್ತಾರೆಂಬುದನ್ನು ಕಾದು ನೋಡಬೇಕು.