ಮೂಡಲಗಿ: ಮಕ್ಕಳ ಹಕ್ಕುಗಳ ರಕ್ಷಣೆಯ ಜತೆಗೆ ಅವರ ಸುರಕ್ಷತೆ, ಭದ್ರತೆ ಹಾಗೂ ದೇಶದ ಉತ್ತಮ ಪ್ರಜೆಯಾಗಿ ರೂಪಿಸುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಐಕ್ಯೂಎಸಿ ಹಾಗೂ ಅಮ್ಮಾ ಫೌಂಡೇಶನ್, ಘಟಪ್ರಭಾ ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಆನ್ಲೈನ್ ದುರ್ಬಳಕೆ ಹಾಗೂ ಎಚ್.ಐ.ವ್ಹಿ ಅರಿವು ಕುರಿತು ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಮ್ಮಾ ಫೌಂಡೇಶನ್ ಅಂತರಜಾಲ ಮಾರ್ಗದರ್ಶಕರಾದ ಶ್ರೀಮತಿ ಮಂಜುಳಾ ಹರಿಜನ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಬಾಲ್ಯವಿವಾಹ ದುಷ್ಪರಿಣಾಮದ ಕುರಿತು ಮಾತನಾಡಿದರು. ಪ್ರತಿಯೊಂದು ಮಗುವಿಗೆ ಜೀವಿಸುವ, ರಕ್ಷಣೆ ಪಡೆಯುವ, ವಿಕಾಸ ಹೊಂದುವ, ಭಾಗವಹಿಸುವಿಕೆಯ ಹಕ್ಕುಗಳನ್ನು ಭಾರತ ಸಂವಿಧಾನ ನೀಡಿದೆ. ಯುವಜನತೆ ಅಂತರ್ಜಾಲದ ಮೋಸಗಳಿಗೆ ಒಳಗಾಗದೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಮ್ಮಾ ಫೌಂಡೇಶನ್ ಕಾರ್ಯಕ್ರಮ ಸಂಯೋಜಕರಾದ ಸಚಿನ್ ಅವರು ಎಚ್.ಆಯ್.ವ್ಹಿ ಏಡ್ಸ್ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಅಮ್ಮಾ ಫೌಂಡೇಶನ್ ಸಮುದಾಯ ಸಂಘಟಕಿ ಶ್ರೀಮತಿ ಸಾವಿತ್ರಿ ತೆಳಗೇರಿ, ಗುಡ್ ಯೋಜನೆ ಕಾರ್ಯಕ್ರಮ ಸಂಯೋಜಕ ಯಲ್ಲಪ್ಪ ಮಾದರ, ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ. ಎಂ.ಬಿ. ಕುಲಮೂರ, ಡಾ. ಕೆ.ಎಸ್. ಪರವ್ವಗೋಳ,ಡಾ. ರಾಜಶ್ರೀ ತೋಟಗಿ, ಎಂ.ಎನ್. ಮುರಗೋಡ, ವಿಲಾಸ ಕೆಳಗಡೆ, ಬಿ.ಸಿ. ಮಾಳಿ, ಸಂತೋಷ ಬಂಡಿ, ಆರ್.ಎಸ್. ಪಂಡಿತ, ಎಂ.ಆರ್. ಕರಗಣ್ಣಿ, ಬಿ.ಬಿ. ವಾಲಿ, ಬಿ.ಕೆ. ಸೊಂಟನವರ ಮುಂತಾದವರು ಉಪಸ್ಥಿತರಿದ್ದರು.
ಡಾ. ಕೆ.ಎಸ್. ಪರವಗೋಳ ಸ್ವಾಗತಿಸಿದರು. ಡಿ.ಎಸ್. ಹುಗ್ಗಿ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ ವಂದಿಸಿದರು.

