ಸಿಂದಗಿ: ರೈತ ಈ ದೇಶದ ಸೇವಕನಲ್ಲ ಮಾಲೀಕ ಅವನ ರಕ್ಷಣೆ ಮಾಡಬೇಕಾಗಿರುವುದು ಆಡಳಿತಾರೂಢ ಸರಕಾರಗಳ ಆದ್ಯ ಕರ್ತವ್ಯ ಅದನ್ನು ಮರೆತು ರೈತರ ಮೇಲೆ ಗದಾಪ್ರಹಾರಗಳಂಥ ಘಟನೆಗಳು ನಡೆಯುತ್ತಿವೆ ಅದನ್ನು ನಾವೆಲ್ಲ ರೈತರು ಮೆಟ್ಟಿ ನಿಲ್ಲಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ ಅದಕ್ಕೆ ಎಲ್ಲರೂ ಸಂಘಟಿತರಾಗುವುದು ಅತ್ಯವಶ್ಯಕವಿದೆ ಎಂದು ಯಾದಗಿರಿ ಜಿಲ್ಲಾಧ್ಯಕ್ಷ ಮಹೇಶಗೌಡ ಸುಬೇದಾರ ಕರೆ ನೀಡಿದರು.
ತಾಲೂಕಿನ ಕರವಿನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ವಿಜಯಪುರ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಸಗರ ಅವರ ನೇತೃತ್ವದಲ್ಲಿ ಘಟಕ ಉದ್ಘಾಟಿಸಿ ಮಾತನಾಡಿ, ರೈತ ಸಂಘದ ನಿಯಮ ಹಾಗೂ ಷರತ್ತುಗಳನ್ನು ತಿಳಿಸಿ, ರೈತರ ಬೆನ್ನೆಲುಬಾಗಿ ನಿಂತು ನಿಯಮಾನುಸಾರವಾಗಿ, ಕಾನೂನುಬದ್ದವಾಗಿ ಪರಿಹಾರ ದೊರಕಿಸುವ ಪ್ರಯತ್ನವನ್ನು ಮಾಡಬೇಕು ಎಂದರು.
ವಿಜಯಪುರ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ಗೋವಿಂದ ಚವ್ಹಾಣ ಹಾಗೂ ಜಿಲ್ಲಾ ಸಂಚಾಲಕರಾಗಿ ರಾಜು ಚವ್ಹಾಣ ಅವರನ್ನು ಆಯ್ಕೆ ಮಾಡಿ ಶಾಲು ದೀಕ್ಷೆ ಮಾಡಲಾಯಿತು.
ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ ರಾಜು ಚವ್ಹಾಣ ಅವರು ಯುವಕರು , ಮೂಲತಃ ರೈತಪರ ಹೋರಾಟಗಾರರು, ಅನ್ಯಾಯಗಳ ವಿರುದ್ದ ಹೋರಾಡುವ ವ್ಯಕ್ತಿತ್ವವನ್ನು ಹೊಂದಿರುವವರಾಗಿದ್ದು, ರೈತರಿಗೆ ಬೆನ್ನುಲುಬಾಗಿ ನಿಂತು, ರೈತರಿಗೆ ಬಂತಂಥ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.
ಈ ವೇಳೆ ತಾಳಿಕೋಟಿ ಗೌರವಾಧ್ಯಕ್ಷ ಶ್ರೀಶೈಲ ವಾಲಿಕಾರ, ಕಲಕೇರಿ ಹೋಬಳಿ ಅಧ್ಯಕ್ಷ ಮೆಹೆಬೂಬಬಾಷಾ ಮನಗೂಳಿ ಮಾತನಾಡಿದರು, ತಾಳಿಕೋಟಿ ಅಧ್ಯಕ್ಷ ಶಿವಶಂಕರ ಸಜ್ಜನ, ದೇವರ ಹಿಪ್ಪರಗಿ ಅಧ್ಯಕ್ಷ ಗೋಲ್ಲಾಳಪ್ಪ ಅಂಗಡಿ, ರೈತ ಮುಖಂಡರಾದ ಸಂಜು ರಾಠೋಡ, ಮೋತಿರಾಮ ರಾಠೋಡ, ಲಕ್ಷ್ಮಣ ನಾಯ್ಕೋಡಿ, ಕೃಷ್ಣಾ ರಾಠೋಡ, ಗೆನ್ನು ಬದ್ದು ಚವ್ಹಾಣ, ಗೋವಿಂದ ಜಾಧವ, ಉಮಾಜಿ ಚವ್ಹಾಣ, ಚಂದು ಚವ್ಹಾಣ, ಹಿರೇಮಾನ ಪವಾರ ಸೇರಿದಂತೆ ಸುಮಾರು 50 ಜನ ಉಪಸ್ಥಿತರಿದ್ದರು.