ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ

Must Read

ಸಿಂದಗಿ: ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮಕ್ಕೆ ಹರಿದು ಬಂದ ಹಳ್ಳದ ನೀರಿನಿಂದ ಜಲಾವೃತಗೊಂಡಿದ್ದ ತೋಟದ ವಸತಿಯಲ್ಲಿನ ಎರಡು ಕುಟುಂಬಗಳ ಆರು ಜನರನ್ನು ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸಂರಕ್ಷಿಸಿದ್ದಾರೆ.

ತಾಲೂಕಿನ ಬಮ್ಮನಜೋಗಿ ಹಳ್ಳದಿಂದ ಹರಿದು ಬಂದ ನೀರಿನಿಂದ ಜಲಾವೃತಗೊಂಡಿದ್ದ ತೋಟದ ಮನೆಯಲ್ಲಿದ್ದ ಪರೂತಪ್ಪ ಶಿವಶಂಕರ ಮುರಾಳ(50), ಪತ್ನಿ ಜಯಶ್ರೀ ಮುರಾಳ(40), ಮಗಳಾದ ನೀಲಮ್ಮ ಮುರಾಳ(7) ಹಾಗೂ ಗುರಪ್ಪ ಹಣಮಂತ ಪೂಜಾರಿ(45), ಪತ್ನಿ ಸರೂಬಾಯಿ ಪೂಜಾರಿ(40), ಮಕ್ಕಳಾದ ಹಣಮಂತ ಪೂಜಾರಿ(12) ಮತ್ತು ಅರ್ಪಿತಾ ಪೂಜಾರಿ(10) ಎಂಬುವವರನ್ನು ಸಂರಕ್ಷಣೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಪಿಎಸ್‍ಐ ನಿಂಗಣ್ಣ ಪೂಜಾರಿ, ಅಗ್ನಿಶಾಮಕ ದಳದ ಅಧಿಕಾರಿ ಶಿವಕುಮಾರ ಬಿರಾದಾರ, ಕಂದಾಯ ವೃತ್ತ ನಿರೀಕ್ಷಕ ಐ.ಎ.ಮಕಾಂದಾರ, ಗ್ರಾಮ ಲೆಕ್ಕಾಧಿಕಾರಿ ಸರಸ್ವತಿ ಮೊರೆ ಹಾಗೂ ಪೊಲೀಸ್ ಸಿಬ್ಬಂದಿ ಆರ್.ಎಲ್. ಕಟ್ಟಿಮನಿ, ಎಚ್.ಎಸ್.ಬಗಲಿ, ಬಿ.ಎನ್.ಕೋಳೂರ, ಮಹಿಬೂಬ ನದಾಫ, ಸೇರಿದಂತೆ ಗ್ರಾಮಸ್ಥರು ಸಂರಕ್ಷಣೆಯಲ್ಲಿ ಇದ್ದರು.

Latest News

ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ

ಸಿಂದಗಿ; ಪ್ರತಿಯೊಂದು ಸಮುದಾಯವನ್ನು ಗೌರವಿಸಿ ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆ ಗೊತ್ತುಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜಯಂತಿಗಳನ್ನು ಆಚರಿಸುವ ಸತ್ಕಾರ್ಯಗಳನ್ನು ನಡೆಸಿದೆ. ಮಹಾನ್ ವ್ಯಕ್ತಿಗಳ...

More Articles Like This

error: Content is protected !!
Join WhatsApp Group