spot_img
spot_img

ಮುಸ್ಲಿಂ ಉಲೇಮಾಗಳನ್ನು ಗುರಿಯಾಗಿಸದಂತೆ ಆಗ್ರಹಿಸಿ ಪ್ರತಿಭಟನೆ

Must Read

spot_img
- Advertisement -

ಸಿಂದಗಿ: ಮುಸ್ಲಿಂ ಉಲೆಮಾಗಳನ್ನು ಗುರಿಯಾಗಿಸುವುದು ನಿಲ್ಲಿಸುವಂತೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಯು.ಪಿ.ಯ ಮುಜಫ್ಫರ ನಗರದಲ್ಲಿ ಸೆ. 21-22ರ ರಾತ್ರಿ ಬಂಧಿಸಲ್ಪಟ್ಟ ಮುಸ್ಲೀಂ ಧರ್ಮಗುರು ಮೌಲಾನಾ ಕಲೀಂ ಸಿದ್ದಿಕಿ ಇವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪಟ್ಟಣದ ಡಾ. ಬಾಬಾಸಾಹೇಬ ಅಂಬೇಡ್ಕರ್ ವೃತ್ತದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು.

ಈ ಸಂದರ್ಭದಲ್ಲಿ ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ಕೂಲಿಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷರಾದ ಶಿವಾಜಿ ಮೆಟ್ಗಾರ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ವಾಯ್.ಸಿ. ಮಯೂರ್, ಸಾಮಾಜಿಕ ಕಾರ್ಯಕರ್ತರಾದ ಸಲೀಂ ಅಲ್ದಿ ಮಾತನಾಡಿ, ಮೌಲಾನಾ ಕಲೀಂ ಸಿದ್ದಿಕಿ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಎಲ್ಲ ಧರ್ಮಗಳ ಅನುಯಾಯಿಗಳಲ್ಲಿ ಸಮಾನವಾಗಿ ಜನಪ್ರಿಯವಾಗಿರುವ ವ್ಯಕ್ತಿ. ದೇಶದ ಸದ್ಬಾವನೆ ಅವರ ಧ್ಯೇಯವಾಗಿದೆ. ಅವರು ಶಾಂತಿ ಮತ್ತು ಸಾಮರಸ್ಯದ ಇಸ್ಲಾಂ ಸಂದೇಶವನ್ನು ಬಹಳ ಅಚ್ಚುಕಟ್ಟಾಗಿ ಪ್ರಸ್ತುತಪಡಿಸುತ್ತಾರೆ. ಅವರನ್ನು ಮತ್ತು ಅವರ ಸಹಚರರನ್ನು ಸೆಪ್ಟೆಂಬರ್ 21-22ರ ರಾತ್ರಿ 9:30 ಗಂಟೆಗೆ, ಮೀರತ್ ನಿಂದ ಮುಜಫ್ಫರ ನಗರಕ್ಕೆ ಹೋಗುವ ದಾರಿಯಲ್ಲಿ ಬಂಧಿಸಲಾಗಿದೆ. ಆಶ್ಚರ್ಯಕರವಾಗಿ ಅವರನ್ನು ಪೂಲೀಸ್ ಠಾಣೆಗೆ ಕರೆದೊಯ್ಯುವ ಬದಲು ಅವರನ್ನು ವಿಚಾರಣೆಯ ಹೆಸರಿನಲ್ಲಿ ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು, ಇದು ಕಾನೂನಿನ ಸಂರ್ಪೂಣ ಉಲ್ಲಂಘನೆಯಾಗಿದೆ ಮತ್ತು ದೇಶದ ಶಾಂತಿ ಮತ್ತು ಭದ್ರತೆಗೆ ಅತ್ಯಂತ ಅಪಾಯಕಾರಿಯಾಗಿದೆ. ಆದ್ದರಿಂದ ದೇಶವ್ಯಾಪಿಯಾಗಿ ಇದನ್ನು ಖಂಡಿಸಿ ಪ್ರತಿಭಟನೆಗಳು ಮಾಡಲಾಗುತ್ತಿದೆ ಆದ ಕಾರಣ ಕೂಡಲೆ ಮೌಲಾನಾ ಕಲೀಂ ಸಿದ್ದಿಕಿ, ಮೌಲಾನಾ ಉಮರ ಗೌತಂ, ಮುಫ್ತಿ ಜಹಾಂಗೀರ ಅವರನ್ನು ಕೂಡಲೇ ಬಿಡುಗಡೆಗೊಳೀಸಬೇಕು, ಅವರ ವಿರುದ್ಧದ ಸುಳ್ಳು ಆರೋಪಗಳನ್ನು ಕೈಬಿಡಬೇಕು. ಸಮಾಜದಲ್ಲಿ ಮುಸ್ಲಿಂ ವಿದ್ವಾಂಸರು ಮತ್ತು ಸಮುದಾಯದ ನಾಯಕರನ್ನು ಕೇವಲ ಅನುಮಾನದ ಆಧಾರದ ಮೇಲೆ ಮಾನಹಾನಿ ಮಾಡುವ ಮತ್ತು ನಕಾರಾತ್ಮಕ ಚಿಂತನೆಯನ್ನು ಸೃಷ್ಟಸುವ ಸಂಚನ್ನು ನಿಲ್ಲಿಸಬೇಕು. ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ತನಿಖೆಗೊಳಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ತಾಲೂಕಾಧ್ಯಕ್ಷ ತಾಜುದ್ದೀನ್ ನಾಯಿಕ್, ಕಾರ್ಯದರ್ಶಿ ಹಾಫೀಜ್ ಶಫೀಕ್, ಸದಸ್ಯ ಹಾಫೀಜ್ ಅಯ್ಯುಬ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಮುಂಖಡ ಫಕ್ರುದ್ದೀನ್ ಕಲಾದಗಿ, ಜಮಿಯತ್ ಉಲೆಮಾಯೆ ಹಿಂದ ತಾಲೂಕಾ ಉಪಾಧ್ಯಕ್ಷ ಮುಫ್ತಿ ಶುಹೆಬ್ ಬ್ಯಾಕೋಡ, ಹಾಪೀಜ್ ಅಶ್ಫಾಕ ಕರ್ಜಗಿ, ಮದರ್ಸಾ ಬೈತುಲ್-ಉಲೂಮ ಸಿಂದಗಿಯ ಮುಖ್ಯಗುರು ಮುಫ್ತಿ ಅಬ್ದುಲಹಕ್ ಗಿರಗಾಂವ, ಮೌಲಾನಾ ಅಯ್ಯುಬ್ ನದ್ವಿ, ಹಾಪೀಜ್ ನಯಿಮ್, ಮುಖಂಡರಾದ ಜಾಫರ ಇನಾಮದಾರ್, ನಾಸಿರುದ್ದೀನ ಶೇಖ್, ಹಾಪೀಜ್ ಖಾಲೀದ್, ಮೌಲಾನಾ ದಾವುದ್, ಹಾಪೀಜ್ ನಯಿಮ್, ಹಾಫೀಜ ಇರಪಾನ್, ಹಾಫೀಜ್ ನ್ಯಾಮತ್, ಖಾಜಾಮೀನ್, ಅನ್ವರ್ ಇನಾಮದಾರ್, ಅಲ್ತಾಫ ಮರ್ತುರ, ನಜೀರ ಪಡೆಕನೂರ, ಅಲ್ತಾಫ ಮುಗಳಿ, ಹಾಫೀಜ್ ಸೈಫುದ್ದೀನ್, ಮೊಹಮ್ಮದ ಶೇಖ್, ಎಜಾಜ್ ಹುಂಡೇಕರ್, ಜಕರಿಯಾ ಮುಗಳಿ, ಮುನ್ನಾ ಶಾಹಾಪುರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group