- Advertisement -
ಬೀದರ: ಕಲ್ಯಾಣ ಕರ್ನಾಟಕ ಭಾಗದಲ್ಲಿ ದಲಿತ ಎಡಗೈ ಸಮುದಾಯಕ್ಕೆ ಅನ್ಯಾಯ ಮಾಡಿರುವ ಆರೋಪ ಮಾಡಿ ನಗರದಲ್ಲಿ ಮಾದಿಗ ಸಮಾಜದಿಂದ ಕೈ ನಾಯಕರ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಔರಾದ್ ಮೀಸಲು ಕ್ಷೇತ್ರಕ್ಕೆ ಡಾ.ಭೀಮಸೇನ ಸಿಂಧೆ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದಿಗ ಸಮುದಾಯದ ಆಕ್ರೋಶ ಭುಗಿಲೆದ್ದಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಈಶ್ವರ ಖಂಡ್ರೆ ಅವರ ಭಾವಚಿತ್ರ ಕ್ಕೆ ಪೊರಕೆಯಿಂದ ಝಾಡಿಸಿ ಪ್ರತಿಭಟನೆ ನಡೆಸಿದರು.
ಔರಾದ್ ಕ್ಷೇತ್ರಕ್ಕೆ ಬಲಗೈ ಸಮುದಾಯದ ಸಿಂಧೆ ಗೆ ಟಿಕೇಟ್ ನೀಡಿದ್ದಕ್ಕೆ ಹಾಗೂ ಮಾದಿಗ ಸಮುದಾಯಕ್ಕೆ ಒಂದೇ ಟಿಕೆಟ್ ನೀಡಿದ್ದಕ್ಕೆ ಔರಾದ್, ಬಸವಕಲ್ಯಾಣ, ಬೀದರ್ ನಗರದಲ್ಲಿ ಸಮಾಜದ ಮುಖಂಡರಿಂದ ಪ್ರತಿಭಟನೆ ಮಾಡಲಾಯಿತು.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ