spot_img
spot_img

ಉದಯ್ ಪುರದಲ್ಲಿ ಕನ್ಹಯ್ಯ ಹತ್ಯೆ ಖಂಡಿಸಿ ಬೀದರ್ ನಲ್ಲಿ ಪ್ರತಿಭಟನೆ

Must Read

spot_img
- Advertisement -

ಬೀದರ – ರಾಜಸ್ಥಾನದಲ್ಲಿ ಧರ್ಮಾಂಧ ಮುಸ್ಲಿಮರಿಂದ ನಡೆದಿರುವ ಟೇಲರ್ ಕನ್ಹಯ್ಯ ಲಾಲ್ ಅವರ ಅಮಾನವೀಯ ಹತ್ಯೆಗೆ ಕಾರಣರಾದವರನ್ನು ಗಲ್ಲಿಗೇರಿಸಿ ಎಂದು ಭಜರಂಗದಳ, ಶ್ರೀರಾಮ ಸೇನಾ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ನಗರದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪ್ರತಿಭಟಿಸಿದ ಹಿಂದುಪರ ಸಂಘಟನೆಗಳು ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿದವು.

- Advertisement -

ಜಿಹಾದಿ ಮನಸ್ಸಿನ ಮುಸಲ್ಮಾನರು ಇಂಥ ಕೃತ್ಯಗಳನ್ನು ಎಸಗಿದ್ದಾರೆ ಇಂಥವರನ್ನು ವಿಚಾರಣೆಯ ನೆಪದಲ್ಲಿ ತಡ ಮಾಡದೆ ತಕ್ಷಣವೇ ಗಲ್ಲಿಗೇರಿಸಬೇಕು ಮುಖಂಡ ಈಶ್ವರ್ ಸಿಂಗ್ ಠಾಕೂರ್ ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳನ್ನು ಈ ದೇಶದಲ್ಲಿ ಇರಗೊಡುವುದಿಲ್ಲ ಎಂಬ ಉದ್ದೇಶ ಇಟ್ಟಕೊಂಡು ಜಿಹಾದಿ ಮನಸ್ಥಿತಿಯ ಮುಸ್ಲಿಮರು ಈ ಕೃತ್ಯ ಮಾಡಿದ್ದಾರೆ ಇದರ ಹಿಂದೆ ಒಂದು ದೊಡ್ಡ ಜಾಲವೇ ಇದೆ. ಸಿರಿಯಾ, ಅಫ್ಘಾನಿಸ್ತಾನ ಗಳನ್ನು ನೋಡಿ ಎಂಥ ಭಯಾನಕ ಸ್ಥಿತಿ ಇದೆ ಅಂಥದೇ ಸ್ಥಿತಿಯನ್ನು ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿಯೂ ತರಲು ಇವರು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳು ಯೋಚನೆ ಮಾಡಬೇಕು ಎಂದರು.

ಶ್ರೀರಾಮ ಸೇನೆ ಅಧ್ಯಕ್ಷ ವೀರಶೆಟ್ಟಿ ಖಾಮಾ,ಬಜರಂಗ ದಳದ ಅಧ್ಯಕ್ಷ ಸುನಿಲ್ ದವಳೆ ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group