ಮೂಡಲಗಿ: ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ಅಡುಗೆ ಎಣ್ಣೆ, ವಾಣಿಜ್ಯ ಬಳಕೆಯ ಸಿಲಿಂಡರ್, ದಿನಸಿ ಸಾಮಗ್ರಿಗಳು..ಮುಂತಾದ ಅತ್ಯಗತ್ಯ ವಸ್ತುಗಳ ಬೆಲೆ ದಿನ ನಿತ್ಯ ಗಗನಕ್ಕೇರುತ್ತಿವೆ.ಇತ್ತೀಚೆಗೆ ಜರುಗಿದ ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೆ ತೆಪ್ಪಗಿದ್ದ ಕೇಂದ್ರ ಸರಕಾರ ಈಗ ಸದರಿ ಬೆಲೆಗಳನ್ನು ಲಂಗು,ಲಂಗಾಮಿಲ್ಲದೆ ಏರಿಸುತ್ತಿದೆ ! ರಾಜ್ಯ ಸರಕಾರವೂ ಇದಕ್ಕೆ ಹೊಣೆಯಾಗಿದೆ ಹೀಗಾಗಿ, ಜನಸಾಮಾನ್ಯರ ಜೀವನ ದುಸ್ತರವಾಗಿದ್ದು ಬದುಕು ನಡೆಸುವದೇ ಕಷ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷರು, ಬೆಂಗಳೂರ ಇವರ ನಿರ್ದೇಶನದ ಮೇರೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಈ ಜನವಿರೋಧಿ ನೀತಿಯನ್ನು ಖಂಡಿಸಿ ಗುರುವಾರ, ದಿ.7/4/2022 ರಂದು ಮುಂ:10.00 ಘಂಟೆಗೆ ಉದಗಟ್ಟಿ – ತಪಸಿ ಕ್ರಾಸನಲ್ಲಿ ಅರಭಾವಿ ವಿಧಾನಸಭೆ ಮತಕ್ಷೇತ್ರದ ಸಮಸ್ತ ಕಾರ್ಯಕರ್ತರ ಪರವಾಗಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಹೇಳಿದ್ದಾರೆ.
ಇದೊಂದು ವಿನೂತನ ಪ್ರತಿಭಟನೆಯಾಗಿದ್ದು ಅಡುಗೆ ಸಿಲಿಂಡರಗಳು, ಬೈಕ್, ಸ್ಕೂಟರ್, ಪೆಟ್ರೋಲ್/ ಡೀಸೆಲ್ ಕ್ಯಾನಗಳು, ದಿನಸಿ ಸಾಮಗ್ರಿಗಳು/ಅಡುಗೆ ಎಣ್ಣೆ ಪ್ಯಾಕೆಟಗಳಿಗೆ ಹೂವಿನ ಹಾರ ಹಾಕಿ ಶೃದ್ಧಾಂಜಲಿ ಸಲ್ಲಿಸುವ ಮೂಲಕ ಹಾಗು ಬೈಕ್ ಗಳನ್ನು ಎತ್ತಿನ ಗಾಡಿಗೆ ಕಟ್ಟಿ ಎಳೆಯುವ ಮೂಲಕ ಜನರ ಮನ ಮುಟ್ಟುವ ರೀತಿಯಲ್ಲಿ ಪ್ರತಿಭಟಿಸಲಾಗುವದು ಆದ್ದರಿಂದ ಎಲ್ಲ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಮುಖಂಡರು ತಪ್ಪದೇ ಸಮಯಕ್ಕೆ ಸರಿಯಾಗಿ ಆಗಮಿಸಿ ಪ್ರತಿಭಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅರವಿಂದ ದಳವಾಯಿ ಕರೆ ಕೊಟ್ಟಿದ್ದಾರೆ
ದಳವಾಯಿಯವರ ಸಂಪರ್ಕ ಸಂಖ್ಯೆ : 9972735021