ವೈದ್ಯರ ಕೊರತೆ ನೀಗಿಸಲು ಆಗ್ರಹಿಸಿ ಪ್ರತಿಭಟನೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಿಂದಗಿ: ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ನೀಗಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗು ದಲಿತ ಸಂಘರ್ಷ ಸಮಿತಿ ಸಮತಾವಾದ ಜಂಟಿಯಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ತಾಲೂಕಿನ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದ ಆಸ್ಪತ್ರೆ ಎಂಬ ಖ್ಯಾತಿ ಪಡೆದು ಕೊಂಡಿದೆ. ಪ್ರತಿ ದಿನ ಅನಾರೋಗ್ಯದಿಂದ ಸಮುದಾಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆಯುವಂಥವರು ಸಿಬ್ಬಂದಿಗಳು ಮಾತ್ರ. ದೇವರಿಲ್ಲದ ದೇವಸ್ಥಾನವಾಗಿರುವ ಆಸ್ಪತ್ರೆಯಲ್ಲಿ ದೇವರ ಮೂರ್ತಿ ಹಾಗೆ ವೈದ್ಯ ದೇವರನ್ನು ಈ ಆಸ್ಪತ್ರೆಯಲ್ಲಿ ಇರುವಂತೆ ಮಾಡಲು ಮನವಿ ಮೂಲಕ ಆಗ್ರಹಿಸಿ, ಬಡವರು ಮಧ್ಯಮ ವರ್ಗದವರು ಗರ್ಭಿಣಿಯರು ಅಪಘಾತ ದಿಂದ ನರಳುವಂತವರಿಗೆ ಸರಕಾರಿ ಆಸ್ಪತ್ರೆ ಸಂಜೀವಿನಿ ಇದ್ದಂತೆ ಎಂದು ಬಂದರೆ ವೈದ್ಯರಿಲ್ಲದೆ ಮುಂದಿನ ಆಸ್ಪತ್ರೆಯತ್ತ ಸಾಗುವ ಮಧ್ಯದಲ್ಲಿ ಜೀವ ಉಳಿಯುವುದು ಕಷ್ಟ ಉತ್ತಮ ಸುಂದರ ಕಟ್ಟಡ ನೀರಿನ ಸೌಲಭ್ಯ ವಿದ್ಯುತ್ ಸೌಲಭ್ಯ ವಿಶಾಲವಾದ ಕಟ್ಟಡ ಇರುವುದು ವೈದ್ಯರ ಕೊರತೆಯಿಂದ ರೋಗಿಗಳು ನರಳುವಂತಾಗಿದೆ. ಇಲ್ಲಿನ ಸ್ಟಾಫ್ ತಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸಿ ಹೆಚ್ಚುವರಿ ಚಿಕಿತ್ಸೆಗಾಗಿ ಕಳುಹಿಸುವುದು ಮಾಮೂಲಿಯಾಗಿ ಬಿಟ್ಟಿದೆ.ದಾರಿ ಮಧ್ಯ ಜೀವ ಹೋದರೆ ಮರಳಿ ರುದ್ರ ಭೂಮಿಗೆ ಬಂದ ಉದಾಹರಣೆಗಳು ಇರುವಂಥವು. ಕರೋನಾ ರಣಕೇಕೆಯ ಅಬ್ಬರದಲ್ಲಿಯೂ ವೈದ್ಯರನ್ನು ನೇಮಕ ಮಾಡದಿರುವುದು ವಿಪರ್ಯಾಸ ತಜ್ಞರ ವರದಿ ಆಧರಿಸಿ ಮೂರನೇ ಅಲೆ ಮಕ್ಕಳನ್ನು ಸೆಳೆಯುವುದಕ್ಕಿಂತ ಪೂರ್ವದಲ್ಲಿ ಮೋರಟಗಿ ಸಮುದಾಯ ಆರೋಗ್ಯ ಕೇಂದ್ರಲ್ಲಿ ವೈದ್ಯರ ನೇಮಕ ಹಾಗು ವಾರದ ಏಳು ದಿನಗಳು ಕೇಂದ್ರ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವಂತಾಗ ಬೇಕು ಎಂದರು.

ಈ ಸಂದರ್ಭದಲ್ಲಿ ಧರ್ಮರಾಜ ಯಂಟಮಾನ, ವಿದ್ಯಾಧರ ಮಳಗಿ, ಗಂಗಾಧರ ವಸ್ತ್ರದ, ಕುಕನೂರ ಅನ್ವರ ಪಟೇಲ ಮುಲ್ಲಾ, ಶ್ರೀಮಂತ ಮರಾಠೆ, ಭಾಗಣ್ಣ ಹೊಸಮನಿ, ಮೈನುದ್ದೀನ ಮಣಿಯಾರ ಬಸವರಾಜ ಅರಕೇರಿ ರೇಣುಕಾ ಸೋನಿ ಪೊಲೀಸ ಸಿಬ್ಬಂದಿ ಎಸ್.ಬಿ.ಉಕ್ಕಲಿ ಇತರರು ಇದ್ದರು.

- Advertisement -

ವರದಿ: ಪಂಡಿತ್ ಯಂಪುರೆ, ಸಿಂದಗಿ

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!