ಅರ್ಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ – ಸಂತೋಷಕುಮಾರ ಬೀಳಗಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಿಂದಗಿ: ಅರ್ಹ ವಯಸ್ಸಿನ ಎಲ್ಲ ಮಕ್ಕಳನ್ನು ದಾಖಲಿಸಿ ಶಾಲೆಯಲ್ಲಿ ಉಳಿಸಿಕೊಳ್ಳಿ. ಮಕ್ಕಳು ದೇಶದ ಆಸ್ತಿ ಭವ್ಯ ಭಾರತದ ನಿರ್ಮಾಪಕರು ಅರ್ಹ ವಯಸ್ಸಿನ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಶಾಲೆಯಲ್ಲಿ ಮುಂದುವರಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರು, ಪಾಲಕರು, ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಇಲಾಖಾ ಅಧಿಕಾರಿಗಳ  ಕರ್ತವ್ಯವಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ತಾಲೂಕಿನ ಯಂಕಂಚಿ  ಗ್ರಾಮದಲ್ಲಿ  ಬರುವಂತಹ ಕರ್ನಾಟಕ ಪಬ್ಲಿಕ್ ಶಾಲೆಗೆ ಸಂಬಂಧಿಸಿದ ದಾಖಲಾತಿ ಪ್ರಕ್ರಿಯೆಗಳ ಪರಿಶೀಲನೆ ಮಾಡಿ ಸಂಬಂಧಿಸಿದ ಎಸ್ ಡಿಎಂಸಿ ಅಧ್ಯಕ್ಷರು ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರ ಜತೆ ಶಾಲೆಯ ಅಭಿವೃದ್ಧಿ ಮತ್ತು ದಾಖಲಾತಿ ಬಗ್ಗೆ ಚರ್ಚಿಸಿ ಮಾಹಿತಿ ನೀಡಿದರು.  2021-22 ನೇ ಸಾಲಿನಲ್ಲಿ ಇದೇ  ತಿಂಗಳು ಜೂನ ದಿನಾಂಕ 15 ರಂದು ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅರ್ಹ ವಯಸ್ಸಿನ ಎಲ್ಲ ಮಕ್ಕಳು ಶಾಲೆಗೆ ದಾಖಲೆ ಮಾಡಿಕೊಳ್ಳಲು ಅಂಗನವಾಡಿ ಅರ್ಹ ಮಕ್ಕಳು  ಮತ್ತು ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮ ಶಿಕ್ಷಣ ವಹಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಮಾಹಿತಿ ಪಡೆದು ಜನವಸತಿಯ ಎಲ್ಲ ನಾಗರಿಕರಿಗೆ ಶಾಲಾ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾದ ಬಗ್ಗೆ ವ್ಯಾಪಕವಾಗಿ ಮಾಹಿತಿ ನೀಡಿ ದಾಖಲಾತಿ   ಹೆಚ್ಚಿಸಲು ಮತ್ತು ಪೂರ್ಣಗೊಳಿಸಲು ಕ್ರಮ ವಹಿಸುವ ಇಲಾಖೆ ಆದೇಶದಂತೆ ಶಾಲೆಗಳು ಆರಂಭ ಗೊಳ್ಳಲು ಕೈಗೊಳ್ಳಬೇಕಾದ ಪೂರ್ವ ಸಿದ್ಧತಾ ಚಟುವಟಿಕೆಗಳಾದ  ಶಾಲಾ ವೇಳಾಪಟ್ಟಿ ಶಾಲಾ ಕ್ಯಾಲೆಂಡರ್ ಶಿಕ್ಷಕರ ವಾರ್ಷಿಕ ಅಂದಾಜು ಪತ್ರಿಕೆ ಸೇತುಬಂದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ಕ್ರಿಯಾ ಯೋಜನೆಗಳನ್ನು  ಮತ್ತು ಆನ್ ಲೈನ್ ತರಗತಿಗೆ ಅವಶ್ಯಕವಿರುವ ತಂತ್ರಜ್ಞಾನ ಸಾಧನಗಳ ತರಗತಿವಾರು ವಿದ್ಯಾರ್ಥಿವಾರು  ಸಮೀಕ್ಷೆಯನ್ನು ಮಾಡಿ ಅದರಂತೆ ಇಲಾಖೆ ನೀಡಿರುವ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದ್ದು ಸರ್ಕಾರ ಆದೇಶ ಪ್ರಕಾರ ಬುಕ್ಕ ಬ್ಯಾಂಕ ಸೌಲಭ್ಯವನ್ನು ಎಲ್ಲಾ ಮಕ್ಕಳಿಗೆ ದೊರಕಿಸಲು ಈಗಾಗಲೇ ತಾಲ್ಲೂಕು ಕಚೇರಿಯಿಂದ ನೀಡಲಾದ ಆನ್ ಲೈನ್ ತರಬೇತಿ ಸಹಾಯದಿಂದ ತಂತ್ರಜ್ಞಾನ ಬಳಸಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ತಯಾರಿ ಮಾಡುವುದು ಇನ್ನಿತರ ವಿಷಯಗಳ ಕುರಿತು ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಜನರಿಗೆ ದಾಖಲಾತಿ ಪ್ರಾರಂಭವಾದ ಕುರಿತು ಹಾಗೂ ಮಕ್ಕಳನ್ನು ಶಾಲಾ ದಾಖಲಾತಿ ಮಾಡಲು ವಿನಂತಿಸಿದರು.

- Advertisement -

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಬಿ.ಯಡ್ರಾಮಿ ದಾಖಲಾತಿ ಆಂದೋಲನ ನೋಡಲ್ ಅಧಿಕಾರಿ ಎಸ್.ಎಂ.ಪಾಟೀಲ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಬಿ.ಎಸ್.ಟಕ್ಕಳಕಿ, ಗುಲಾಬ್ ನದಾಫ್, ಶಾಲೆಯ ಮುಖ್ಯೋಪಾಧ್ಯಾಯ ಡಿ,ಬಿ,ಗುರಿಕಾರ್,  ಹಳೆಯ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಮಹಾದೇವ ತಳವಾರ, ಸದಸ್ಯ  ಹುಲಕಂಠರಾಯ ಬಿರಾದಾರ್, ಗ್ರಾ.ಪಂ ಸದಸ್ಯ ಬಸವರಾಜ ಅಳ್ಳಗಿ, ಊರಿನ ನಾಗರಿಕ ರಮೇಶ್ ಮುರಡಿ, ಆರ್.ಎ.ಹೊಸಗೌಡರ, ಎನ್ ಎಚ್ ನಾಗಾನಸೂರ ಸೇರಿದಂತೆ ಕೆಜಿಎಸ್  ಮತ್ತು ಎಚ್ ಪಿಎಸ್ ಹಾಗೂ ಯು ಬಿ ಎಚ್ ಪಿ ಎಸ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಜರಿದ್ದರು .

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!