ದಿ.24 ರಂದು ಬೆಳಗಿನಜಾವ ಆಂಧ್ರದ ಕೊತ್ತಕೊಟ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಪಿಎಸ್ಐ ಅವಿನಾಶ್ ಯಾದವ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ದಾಸರವಾಡಿ ಗ್ರಾಮದಲ್ಲಿ ನೆರವೇರಿತು.
ಘಟನೆಯಲ್ಲಿ ಪಿಎಸ್ಐ ಅವಿನಾಶ್ ಯಾದವ್ ಜೊತೆ ಇದ್ದ ಇಬ್ಬರು ಕಾನ್ಸಟೆಬಲ್ ಗಳು ಕೂಡ ಮೃತಪಟ್ಟಿದ್ದರು.
ಅವಿನಾಶ್ ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಅಂತ್ಯಸಂಸ್ಕಾರ ದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಮತ್ತು ಬಸವಕಲ್ಯಾಣದ ಹಲವು ರಾಜಕೀಯ ಮುಖಂಡರು ಭಾಗವಹಿಸಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ