ಬೀದರ: ಠಾಣಾ ವ್ಯಾಪ್ತಿಯಲ್ಲಿ ಮರಳು ಸಾಗಾಣಿಕೆ ಲಾರಿಗಳಿಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಪಿಎಸ್ಐ ಹಾಗು ಕಾನಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಣ ಪಡೆಯುವಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮಂಠಾಳ ಠಾಣೆ ಪಿಎಸ್‌ಐ ಶೀಲಾ ನ್ಯಾಮನ್ ಹಾಗೂ ಕಾನಸ್ಟೇಬಲ್ ಪರಶುರಾಮರೆಡ್ಡಿ.
ದೂರುದಾರ ಇರ್ಷಾದ ಪಟೇಲ್‌ನಿಂದ 21 ಸಾವಿರ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಲಾಗಿದ್ದು, ಅನುಮತಿ ಪಡೆದು ಮೂರು ಲಾರಿ ಮುಖಾಂತರ ಮರಳು ಸಾಗಾಣಿಕೆ ನಡೆಸುತ್ತಿದ್ದ ಇರ್ಷಾದ್ ಆದರೆ ಪ್ರತಿ ಲಾರಿಗೆ ಪ್ರತಿ ತಿಂಗಳು 7 ಸಾವಿರ ರೂ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.
ಈ ಸಂಬಂಧ ಮರಳು ಲಾರಿಯ ಮಾಲೀಕ ಇರ್ಷಾದ ಪಟೇಲ್ ಲೋಕಾಯುಕ್ತಕ್ಕೆ ನೀಡಿದ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುವಾಗಲೆ ಪಿಎಸ್ ಐ ಹಾಗೂ ಕಾನ್ಸ್ಟೇಬಲ್ ಒಬ್ಬರನ್ನು ಬಲೆಗೆ ಬೀಳಿಸಿದ್ದಾರೆನ್ನಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ