spot_img
spot_img

ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯ ಇದ್ದಂತೆ – ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ -ಒಂದು ಮಂದಿರ ಕಟ್ಟಿಸಿದರೆ ಸಾವಿರಾರು ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಸಾವಿರಾರು ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ. ನಾವು ಕಲಿಯುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ವಿಜ್ಞಾನ ಪರಂಪರೆ, ಭಾಷೆಗಳ ಜ್ಞಾನವನ್ನು ಗ್ರಂಥಾಲಯಗಳು ಒದಗಿಸುತ್ತದೆ ಎಂದು ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಫೆ-24 ರಂದು 2020-21ನೇ ಸಾಲಿನ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಲ್ಲೋಳಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಜನಸಾಮಾನ್ಯರು ದಿನ ನಿತ್ಯದ ಆಗು-ಹೋಗುಗಳು ಮತ್ತು ನಮ್ಮ ಸುತ್ತಲಿನ ಪ್ರಪಂಚದ ಜ್ಞಾನವನ್ನು ತಿಳಿದುಕೊಳ್ಳಲು ಗ್ರಂಥಾಲಯದಲ್ಲಿ ನಮಗೆ ದೊರೆಯುವ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ಪತ್ರಿಕೆಯಲ್ಲಿನ ಹಲವಾರು ವಿಚಾರ ಕುರಿತು ಲೇಖನಗಳು ಓದುಗರಿಗೆ ಒದಗಿಸುವಲ್ಲಿ ಸಹಾಯ ಮಾಡುತ್ತವೆ ಎಂದರು.

- Advertisement -

ಸಮುದಾಯಗಳಲ್ಲಿ ವಿದ್ಯೆ, ಜ್ಞಾನ, ಓದಿನ ಬಗ್ಗೆ ಆಸಕ್ತಿ, ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ಈ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಗ್ರಂಥಾಲಯದಲ್ಲಿರುವ ಒಂದೊಂದು ಒಳ್ಳೆಯ ಪುಸ್ತಕಗಳು ಕೂಡಾ ನೂರು ಸ್ನೇಹಿತರಿಗೆ ಸಮ. ವ್ಯರ್ಥ ಕಾಲ ಕಳೆಯದೇ ಇಂದಿನ ಯುವಜನತೆ ಈ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.

ಪಟ್ಟಣ ಪಂಚಾಯತ ಸದಸ್ಯ ಭಗವಂತ ಪತ್ತಾರ, ಬಸವರಾಜ ಕಡಾಡಿ, ಮಹಾದೇವ ಮದಭಾಂವಿ, ರಾಮನಿಂಗ ಬಿ.ಪಾಟೀಲ, ಶ್ರೀಶೈಲ ತುಪ್ಪದ, ಪರಪ್ಪ ಮಳವಾಡ, ಸೋಮನಿಂಗ ಹಡಗಿನಾಳ, ಗುರುನಾಥ ಮದಭಾಂವಿ, ಅಡಿವೆಪ್ಪ ಕುರಬೇಟ, ಈರಣ್ಣ ಮುನ್ನೋಳಿಮಠ, ಕೃಷ್ಣಾ ಮುಂಡಿಗನಾಳ, ಶಿವಪ್ಪ ಬಿ.ಪಾಟೀಲ. ಅಶೋಕ ಆಡಿನವರ, ಮಂಜುಳಾ ಹಿರೇಮಠ, ಗೂಳಪ್ಪ ವಿಜಯನಗರ, ದಶಗೀರ ಕಮತನೂರ, ಮಹಾಂತೇಶ ಬಿ.ಪಾಟೀಲ. ಕುತುಬು ಪಾನಾರಿ, ಹಣಮಂತ ಬಡಿಗೇರ, ದಶಗೀರ ನದಾಫ್, ಮುಖ್ಯಾಧಿಕಾರಿ ಪಾಂಡು ಬಂಗೆನ್ನವರ, ನಿರ್ಮಿತಿ ಕೇಂದ್ರ ಬೆಳಗಾವಿ ಅಭಿಯಂತರ ರವಿಕಿರಣ ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು..

- Advertisement -
- Advertisement -

Latest News

ಕಾರ್ಯಕರ್ತರೇ, ನಾಯಕರ ದಾಳಗಳಾಗದೆ ಜಾಗೃತರಾಗಿರಿ.

ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಎಚ್ಚರಿಕೆ.ಕಾರ್ಯಕರ್ತರು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ನನ್ನ ಸಲಹೆ. ನಿಮ್ಮನ್ನ ರಾಜ್ಯ ಸರ್ಕಾರ ತಮ್ಮದಿದೆ ಆದ್ದರಿಂದ ನಿಮಗೆ ರಕ್ಷಣೆ ನೀಡುತ್ತದೆ ಏನೂ...
- Advertisement -

More Articles Like This

- Advertisement -
close
error: Content is protected !!
Join WhatsApp Group