ಸಾರ್ವಜನಿಕ ಅರ್ಜಿ ಆಹ್ವಾನ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸವದತ್ತಿ: ಸವದತ್ತಿ ಯಲ್ಲಮ್ಮಾ ಪುರಸಭೆಯ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಸನ್ 2021-22 ನೇ ಸಾಲಿಗೆ ದೀನ್ ದಯಾಳ್ ಅಂತ್ಯೋದಯ (ಡೇ-ನಲ್ಮ್ ಯೋಜನೆ) ಯೋಜನೆಯಲ್ಲಿ

  1. ಸ್ವಯಂ ಉದ್ಯೋಗಕ್ಕೆ (ವೈಯಕ್ತಿಕ ಉದ್ಯಮಶೀಲತೆಗಾಗಿ): ಕಿರು ಉದ್ದಿಮೆ ಕೈಗೊಳ್ಳಲು 2.00 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ
  2. ವೈಯಕ್ತಿಕ ವಿವಿಧ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೋಗದ ಸ್ಥಾಪನೆಗಾಗಿ ಬ್ಯಾಂಕ ಸಾಲದ ಮೇಲೆ ಬಡ್ಡಿದರ ಶೇ 7% ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ದೊರೆಯುತ್ತದೆ ಸದರಿ Interest subsidy ಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವದು.
  3. ಗುಂಪು ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ): ಗುಂಪು ವಿವಿಧ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಗುಂಪು ಉದ್ಯಮಶೀಲತೆ ಪ್ರಾರಂಭಿಸಲು ಪ್ರತಿ ಸದಸ್ಯರಿಗೆ ಗರಿಷ್ಟ ರೂ 2 ಲಕ್ಷಗಳು ಅಥವಾ ರೂ 10.00 ಲಕ್ಷಗೂ ಯಾವುದು ಯೋಜನಾ ವೆಚ್ಚ ಕಡಿಮೆ ಇರುತ್ತದೆಯೋ ಅದನ್ನು ಅನುಮೋದಿಸುವದು).
  4. ಗುಂಪು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೋಗದ ಸ್ಥಾಪನೆಗಾಗಿ ಬ್ಯಾಂಕ ಸಾಲದ ಮೇಲೆ ಬಡ್ಡಿದರ ಶೇ 7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ದೊರೆಯುತ್ತದೆ ಸದರಿ Interest subsidy ಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವದು. ಹಾಗೂ ಕಾಲಕಾಲಕ್ಕೆ ಸಾಲವನ್ನು ಸರಿಯಾಗಿ ಮರುಪಾವತಿಸುವ ಸ್ವ-ಸಹಾಯ ಸಂಘಗಳಿಗೆ ಹೆಚ್ಚುವರಿಯಾಗಿ ಶೇ 3% ರಷ್ಟು ಬಡ್ಡಿ ಸಹಾಯಧನವನ್ನು ಪೈಸ್ ಪೋರ್ಟಲ್ ಮೂಲಕ ಬಿಡುಗಡೆ ಮಾಡಲಾಗುವದು.
  5. ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಪೂರೈಸುವದು: ದುರ್ಬಲ ವರ್ಗದ ಕುಟುಂಬಗಳಿಗ ಭದ್ರತೆಯನ್ನು ನೀಡುವುದರ ಜೊತೆಗೆ ವ್ಯಾಪಾರಸ್ಥರಿಗೆ ಉದ್ಯೋಗ ಮಾಡಲು ಗುರುತಿನ ಚೀಟಿ ನೀಡುವದು.
  6. ವ್ಯಾಪಾರಸ್ಥರಿಗೆ ಉದ್ಯೋಗ ಮಾಡಲು ಗುರುತಿನ ಚೀಟಿ ನೀಡುವದು.
  7. ಗುರುತಿನ ಚೀಟಿ ಪಡೆಯಲು ಸಂಬಂಧಿಸಿದ ದಾಖಲೆಗಳಾದ ಬೀದಿ ವ್ಯಾಪಾರಸ್ಥರ ಹೆಸರು, ಪಾಲಕರ ಹೆಸರು, ಖಾಯಂ ವಿಳಾಸ, ಪ್ರಸ್ತುತ ವಾಸಸ್ಥಳದ ವಿಳಾಸ, ಲಿಂಗ, ವಯಸ್ಸು, ಗುರುತಿನ ಚೀಟಿ, ದೂರವಾಣಿ ಸಂಖ್ಯೆ, ಬೀದಿ ವ್ಯಾಪಾರ ಮಾಡುತ್ತಿರುವ ಸ್ಥಳ, ಬೀದಿ ವ್ಯಾಪಾರದ ರೀತಿ, ಬೀದಿ ವ್ಯಾಪಾರದಲ್ಲಿ ತೊಡಗುವ ಸಮಯ ಹಾಗೂ ಕುಟುಂಬದ ಸದಸ್ಯರ ವಿವರಗಳು, ಆಧಾರ ಕಾರ್ಡ ಮತ್ತು ಚಾಲ್ತಿ ಬ್ಯಾಂಕ ಪಾಸ ಬುಕ್ಕ, 14 ವರ್ಷದ ಮೇಲ್ಪಟ ಮಕ್ಕಳ ಕುಟುಂಬದ ಸದಸ್ಯರು ಭಾವ ಚಿತ್ರ ಮತ್ತು ಉದ್ಯೋಗ ಮಾಡುತ್ತಿರುವ ವ್ಯಕ್ತಿಯ ಭಾವ ಚಿತ್ರ ಮುಂತಾದವುಗಳನ್ನು ಸಲ್ಲಿಸುವದು ಹಾಗೂ
  8. ಸ್ವ-ಸಹಾಯ ಗುಂಪುಗಳ ರಚನೆಗೆ: ಗುಂಪಿನ ಸದಸ್ಯರ ನಡುವೆ ನಿರಂತರ ಉಳಿತಾಯವನ್ನು ಮಾಡುವಂತೆ ಪ್ರೇರೆಪಿಸುವದು, ಗುಂಪಿನಲ್ಲಿ ಸದಸ್ಯತ್ವವನ್ನು ಪಡೆಯುವಾಗ 18 ವರ್ಷ ಮೇಲ್ಪಟ್ಟಿರಬೇಕು, ಒಂದು ಗುಂಪಿನಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸದಸ್ಯತ್ವವನ್ನು ಪಡೆಯುವುದು. ಗುಂಪಿನಲ್ಲಿ ಸದಸ್ಯರ ಸಂಖ್ಯೆಯು 10 ಕ್ಕಿಂತ ಮೇಲೆ 20 ಕ್ಕಿಂತ ಒಳಗಡೆಯಿರಬೇಕು.
  9. ಈ ಯೋಜನೆಗೆ ಸಾರ್ವಜನಿಕ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-08-2021 ರಂದು ನಿಗದಿಪಡಿಸಿದೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಸರಕಾರಿ ರಜೆ ದಿನಗಳಲ್ಲಿ ಹೊರತುಪಡಿಸಿ ಕಾರ್ಯಾಲಯದ ವೇಳೆಯಲ್ಲಿ ಶ್ರೀ ಎಸ್.ವೈ ಹಾದಿಮನಿ ಸಿ.ಎ.ಓ ಯಲ್ಲಮ್ಮಾ ಪುರಸಭೆ ಸವದತ್ತಿ ಇವರನ್ನು ಸಂಪರ್ಕಿಸಬಹುದು, ಹಾಗೂ ಈ ಕಾರ್ಯಾಲಯದ ವೆಬ್‍ಸೈಟ್ ವಿಳಾಸ : www.saundattitown.mrc.gov.in ನೇದ್ದರಲ್ಲಿ ಮಾಹಿತಿ ಪಡೆಯಬಹುದು

- Advertisement -
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!