Homeಸುದ್ದಿಗಳುಮಾರ್ಚ.30 ರಿಂದ ಪುಂಡಲೀಕ ಶ್ರೀಗಳ ಪ್ರಥಮ ಪುಣ್ಯಾರಾಧನೆ ಕಾರ್ಯಕ್ರಮ

ಮಾರ್ಚ.30 ರಿಂದ ಪುಂಡಲೀಕ ಶ್ರೀಗಳ ಪ್ರಥಮ ಪುಣ್ಯಾರಾಧನೆ ಕಾರ್ಯಕ್ರಮ

ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ಸುಕ್ಷೇತ್ರ ತೊಂಡಿಕಟ್ಟಿ ಗ್ರಾಮದ ಶ್ರೀ ಅವಧೂತ ಗಾಳೇಶ್ವರ ಮಠದ ಪೀಠಾಧಿಪತಿಗಳಾಗಿದ ಶಾಂತಯೋಗಿ ವಾಕ್ ಸಿದ್ಧಿ ಪುರುಷ ಪ.ಪೂ ಶ್ರೀ ಪುಂಡಲೀಕ ಮಹಾರಾಜರ ಪ್ರಥಮ ಪುಣ್ಯಾರಾಧನೆ ಕಾರ್ಯಕ್ರಮ ಮಾರ್ಚ 30 ರಿಂದ ಎಪ್ರಿಲ್1 ರವರಿಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದ ಅಭಿನವ ಶ್ರೀ ವೆಂಕಟೇಶ ಮಹಾರಾಜರ ಸಾನಿಧ್ಯದಲ್ಲಿ ಜರುಗಲಿದೆ.

ಬುಧವಾರ ಮಾರ್ಚ.30 ರಂದು ಬೆಳಿಗ್ಗೆ 7 ಗಂಟೆಗೆ ಜಪಯಜ್ಞ ಪ್ರಾರಂಭವಾಗುವುದು, ಮಾರ್ಚ 31 ರಂದು ಬೆಳಿಗ್ಗೆ ಶ್ರೀಗಳ ಗದ್ದುಗೆಗೆ ಅಭಿಷೇಕದೊಂದಿಗೆ 12ಗಂಟೆಗೆ ಮಹಾಪ್ರಸಾದ, ಸಂಜೆ 5 ಘಂಟೆಗೆ ಗ್ರಾಮದಲ್ಲಿ ಶ್ರೀಗಳ ಭಾವಚಿತ್ರದ ಉತ್ಸವದ ಮೇರವಣಿಗೆ ವಿವಿಧ ವಾಧ್ಯ ಮೇಳದೊಂದಿಗೆ ಜರುಗುವುದು ನಂತರ ರಾತ್ರಿ ತೊಂಡಿಕಟ್ಟಿ ಮತ್ತು ವಿವಿಧ ಗ್ರಾಮಗಳ ಭಜನಾ ಮೇಳದವರಿಂದ ಭಜನೆಯೊಂದಿಗೆ ಜಾಗರಣೆ ಕಾರ್ಯಕ್ರಮ ಜರುಗಲಿದೆ. ಶುಕ್ರವಾರ ಎಪ್ರಿಲ್ .1 ರಂದು  ಬೆಳಿಗ್ಗೆ ಪ.ಪೂ ಶ್ರೀ ಪುಂಡಲೀಕ ಮಹಾರಾಜರ ಗದ್ದುಗೆಗೆ ಅಭಿಷೇಕ್ಷದೊಂದಿಗೆ ಮಹಾಪ್ರಸಾದ ಜರುಗಲಿದೆ.

RELATED ARTICLES

Most Popular

error: Content is protected !!
Join WhatsApp Group