ಸಿಂದಗಿ– ಕನ್ನಡ ಚಿತ್ರರಂಗದ ಮೇರು ವ್ಯಕ್ತಿತ್ವದ ಪುನಿತ್ ರಾಜಕುಮಾರ ಅವರ ನಿಧನ ನಿಜಕ್ಕೂ ಕನ್ನಡ ನಾಡಿಗೆ ಚಿತ್ರರಂಗಕ್ಕೆ ಬಹು ದೊಡ್ಡ ಹೊಡೆತ ಬಿದ್ದಂತಾಗಿದೆ ಎಂದು ಯುವ ಮುಖಂಡ ಮುತ್ತು ಶಾಬಾದಿ ಹೇಳಿದರು.
ಅವರು ಪಟ್ಟಣದ ರಾಗರಂಜನಿ ಸಂಗೀತ ಅಕಾಡೆಮಿ ಶುಕ್ರವಾರ ಹಮ್ಮಿಕೊಂಡಿರುವ ಪುನಿತ್ ರಾಜಕುಮಾರ ಅವರ ನಿಧನದ ಹಿನ್ನಲೆಯಲ್ಲಿ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅವರ ತಂದೆ ಡಾ.ರಾಜಕುಮಾರ ಅವರ ಹಾದಿಯಲ್ಲಿಯೇ ನಡೆದವರು. ಕನ್ನಡ ಚಿತ್ರರಂಗದಲ್ಲಿ ಅನೇಕ ಸಾಧನೆಯನ್ನು ಮಾಡಿದವರು. ಬಣ್ಣದ ಬದುಕಿನೊಂದಿಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿದವರು.
ಕೊರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ರೂ 50 ಲಕ್ಷ ಹಣವನ್ನು ನೀಡಿ ಮಾನವೀಯತೆ ಮೆರೆದವರು. ಜೀವನ ಇರುವಷ್ಟು ದಿನ ಜನರಿಗೆ ಉತ್ತಮ ಕೆಲಸ, ಮಾನವೀಯತೆ, ಬಡವರ ಕಂಬನಿ ಒರೆಸುವ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ವ್ಯಕ್ತಿತ್ವದ ಉದಾಹರಣೆಗೆ ಪುನಿತ್ ಆದರ್ಶವಾಗಿದ್ದಾರೆ.
ಅವರು ಅನೇಕ ಬಡ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಹಾಗೂ ಇತ್ತೀಚೆಗೆ ಅವರ ಕುಟುಂಬ ಆಯ್.ಎ.ಎಸ್ ಮತ್ತು ಕೆ.ಎ.ಎಸ್ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅವರ ನಿಧನ ತುಂಬಾ ನೋವುಂಟು ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಎಸ್.ಬಿ.ಚೌಧರಿ, ಉಪನ್ಯಾಸಕ ಸಿದ್ದಲಿಂಗ ಕಿಣಗಿ, ಸತೀಶ ಹಿರೇಮಠ, ಅಶೋಕ ಬಿರಾದಾರ ಡಾ.ಪ್ರಕಾಶ ಸೇರಿದಂತೆ ಇತರರು ನುಡಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗುರುನಾಥ ಅರಳಗುಂಡಗಿ, ಪ್ರದೀಪ ಕತ್ತಿ, ಮುತ್ತು ಬ್ಯಾಕೋಡ, ಮಾಳು ಹೊಸೂರ, ಪ್ರಶಾಂತ ಪೂಜಾರಿ, ಬಸವರಾಜ ಗುರುಶೆಟ್ಟಿ, ಮಹಾಂತೇಶ ನೂಲಾನವರ, ನವೀನ ಶೆಳ್ಳಗಿ, ರವಿ ಮಣೂರ, ಭಾಗಣ್ಣ ತಮದಡ್ಡಿ, ಕರೆಪ್ಪ ಪೂಜಾರಿ, ಬಾಪುಗೌಡ ಬಿರಾದಾರ ದಯಾನಂದ ಜಾಡರ ಆಕಾಶ ರಾಠೋಡ ಸೇರಿದಂತೆ ಅನೇಕರು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.