ಗುರುವಿನ ಕೈಯಲ್ಲಿ ಅರಳಿದ ಶಿಷ್ಯನ ಭಾವಚಿತ್ರ.

Must Read

ಬಾಗಲಕೋಟೆ :ಮನುಷ್ಯ ಜೀವನದ ಉತ್ತಮ ರೂಪ ಸಂಸ್ಕೃತಿ, ಸಂಸ್ಕೃತಿಯ ಉತ್ತಮ ರೂಪ ಕಲೆ, ಚಿತ್ರಕಲೆ ಶಿಲ್ಪಕಲೆ ದ್ರಶ್ಯಕಲೆ ಸೇರಿದಂತೆ ಮುಂತಾದ ಕಲೆಗಳು ಹೆಚ್ಚು ಪ್ರಾಧಾನ್ಯತೆ ಪಡೆದಿವೆ.

ಬುದ್ದಿಜೀವಿಗಳದ್ದು ಆಲೋಚನೆ ಹೃದಯ ಜೀವಿಗಳದ್ದು ರಸಾನುಭವ ಎಂಬಂತೆ ಚಿತ್ರಕಲೆ ಒಂದು ವಿಶ್ವ ಭಾಷೆ, ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೆ ಗೊತ್ತು, ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ ಎನ್ನುವ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಸ್ರಜನಶೀಲ ಚಿತ್ರಕಲಾ ಶಿಕ್ಷಕರಾದ ಎಸ್ ಎಸ್ ಗೌಡರ ರವರು ತಮ್ಮ ಪ್ರೀತಿಯ ಅಚ್ಚು ಮೆಚ್ಚಿನ ಶಿಷ್ಯ ಈ ಸಲದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಕು ಪ್ರಥ್ವಿರಾಜ ವೀರೇಶ ಶಿಂಪಿ ಹಾಗೂ ಶ್ರೀಕಾಂತ ಹೆಸರೋರಮಠ ರವರ ಭಾವಚಿತ್ರವನ್ನು ಪೆನ್ಸಿಲನಿಂದ ಬಿಡಿಸಿ ಕಲೆಯ ಗೌರವವನ್ನು ಎತ್ತಿ ಹಿಡಿದಿದ್ದಾರೆ.

ಯಾವುದೇ ಚಿತ್ರವಿದ್ದರೂ ಅದನ್ನು ತಮ್ಮ ಕೈಯಲ್ಲಿ ಅದರಂತೆ ಬಿಡಿಸುವ ಸಾಮರ್ಥ್ಯ ಹೊಂದಿರುವ ಇವರು ಯಾವುದೇ ಕಾರ್ಯಕ್ರಮ ನಡೆದರೂ ಅದರಲ್ಲಿ ಇವರದೇ ಆದ ಹೊಸ ಆವಿಷ್ಕಾರ ಇರುತ್ತದೆ ಶಾಲೆಯಲ್ಲಿ ನಡೆಯುವ ಧ್ವಜಾರೋಹಣ, ಕ್ರೀಡಾಕೂಟ ಸಾoಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದಕ್ಕೆ ಸಂಬಂಧಿಸಿದ ಹೊಸದೊಂದು ಆವಿಷ್ಕಾರ ಇರುತ್ತದೆ, ಚಿತ್ರಕಲೆಯನ್ನು ವಿನೂತನ ಮಾದರಿಯ ಹೊಸ ವಿನ್ಯಾಸದತ್ತ ಅರುಳಿಸುವದು ಇವರ ಹವ್ಯಾಸ, ಚಿತ್ರಕಲೆಯಿಂದ ಇವರು ಕಂದಗಲ್ಲ ಗ್ರಾಮ ಹಾಗೂ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಸದಾ ಹಸನ್ಮುಖಿಯಾಗಿರುವ ಗೌಡರ ಗುರುಗಳಿಗೆ ಚಿತ್ರಕಲೆ ನೀರು ಕುಡಿದಷ್ಟೇ ಸುಲಭ, ಎಸ್ ಎಸ್ ಗೌಡರ ಗುರುಗಳನ್ನು ಶಾಲಾ ಅಭಿವೃದ್ಧಿ ಸಮಿತಿಯವರು ಎಲ್ಲ ಗುರುಗಳು ಕಂದಗಲ್ಲ ಗ್ರಾಮಸ್ಥರು, ಅಭಿನಂದಿಸಿದ್ದಾರೆ.

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group