spot_img
spot_img

ಆ.28 ರಂದು ಕಲ್ಲೋಳಿ ಯಲ್ಲಾಲಿಂಗೇಶ್ವರ ಮಠದಲ್ಲಿ ಪುರಾಣ ಮಂಗಲೋತ್ಸವ ಕಾರ್ಯಕ್ರಮ

Must Read

ಸ್ವರ್ಣಪೀಠಾಪುರ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಭಾಗವಹಿಸುವರು.

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಆ.28 ರವಿವಾರದಂದು ಜರುಗಲಿರುವ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ 40ನೇ ವರ್ಷದ ಶ್ರಾವಣ ಮಾಸದ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಆಮಂತ್ರ ಪತ್ರಿಕೆಯನ್ನು ಸಂಘಟಕರು ಮಂಗಳವಾರ ಬಿಡುಗಡೆಗೊಳಿಸಿದರು.

ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪಲಗುದ್ದಿ ಮಾತನಾಡಿ, ಆ.28 ರಂದು ಬೆಳಿಗ್ಗೆ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, 9 ಗಂಟೆಗೆ ಶ್ರೀ ಮಠದಿಂದ ಕುಂಭ ಮೇಳ ಹಾಗೂ ಆರತಿ ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ಕಲ್ಲೋಳಿ ಪಟ್ಟಣದಲ್ಲಿ ಭವ್ಯ ಮೆರವಣಿಗೆ ಜರುಗುವುದು 11 ಗಂಟೆಗೆ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗುವ ಸಮಾರಂಭದ ಸಾನ್ನಿಧ್ಯವನ್ನು ಕೊಪ್ಪ-ಗೌರಿಗದ್ದೆಯ ಸ್ವರ್ಣಪೀಠಾಪುರ ದತ್ತಾಶ್ರಮದ ಪರಮಪೂಜ್ಯ ಅವಧೂತ ಶ್ರೀ ವಿನಯ ಗುರೂಜಿ. ಅಚಲೇರಿ ಜಿಡಗಾಮಠದ ಶ್ರೀ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು, ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು, ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿಗಳು, ಕಲ್ಲೊಳಿ ಶ್ರೀ ಯಲ್ಲಾಲಿಂಗೇಶ್ವರ ಮಠದ ಶಿವಶರಣೆ ಮಾತೋಶ್ರೀ ಅಕ್ಕನಾಗಮತಾಯಿ, ಶಿವಶರಣೆ ಮಾತೋಶ್ರಿ ಅಕ್ಕಮಹಾದೇವಿತಾಯಿ ವಹಿಸುವರು, ಅಸಂಗಿಯ ಶ್ರೀ ಮಲ್ಲಯ್ಯಾ ಶರಣರು ಪುರಾಣ ನೀಡಿವರು, ಅಧ್ಯಕ್ಷತೆಯನ್ನು ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ವಹಿಸುವರು, ಬೆಜೆಪಿ ರಾಜ್ಯ ಉಪಾದ್ಯಕ್ಷ ಬಿ.ವೈ.ವಿಜಯೇಂದ್ರ ಸಮಾರಂಭವನ್ನು ಉದ್ಘಾಟಿಸುವರುವರು, ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಹಾಗು ಬೆಳಗಾವಿ ಕೆ.ಎಂ.ಎಫ್ ಅಧ್ಯಕ್ಷ ವಿವೇಕರಾವ್ ಪಾಟೀಲ, ಬಿಜೆಪಿ ರಾಜ್ಯ ಯುವ ಮೋಚಾ ಪ್ರಧಾನ ಕಾರ್ಯದರ್ಶಿ ಡಾ.ಮಲ್ಲಿಕಾರ್ಜುನ ಬಾಳಿಕಾಯಿ ಭಾಗವಹಿಸುವರು ಎಂದು ತಿಳಿಸಿದರು.

ಸಂದರ್ಭದಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮಠದ ಸದ್ಭಕ್ತರಾದ ಸುಭಾಸ ಕುರಬೇಟ, ವಸಂತ ತಹಶೀಲ್ದಾರ, ಪಂಚನ ಹೆಬ್ಬಾಳ, ಮಹಾದೇವ ಮದಬಾವಿ, ಪ್ರಮೋದ ನುಗ್ಗಾನಟ್ಟಿ, ಸಂಜು ಕಳ್ಳಿಗುದ್ದಿ, ರಮ ಗಾಣಿಗೇರ, ಮಾಳಪ್ಪ ಸನದಿ, ಆನಂದ ಚಿಕ್ಕೋಡಿ ಮತ್ತಿತರರು ಇದ್ದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!