spot_img
spot_img

ಡಾ. ಪಂ. ಪುಟ್ಟರಾಜ ಕವಿ, ಗವಾಯಿಗಳವರ ವಚನ ಸಾಹಿತ್ಯ ಸೇವಾ ಸರಣೆ

Must Read

ಜೂನ್ ೨೬ ರಂದು ಹಾವೇರಿಯಲ್ಲಿ ‘ಗುರು ವಚನ ಪ್ರಭ’ ಜಿಲ್ಲಾ ಮಟ್ಟದ ಭಕ್ತಿಗೀತೆ ಮತ್ತು ವಚನ ಗೋಷ್ಠಿ

ಹಾವೇರಿ: ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು, ಡಾ. ಪಂ. ಪುಟ್ಟರಾಜ ಕವಿ, ಗವಾಯಿಗಳವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುವ ಉದ್ದೇಶದಿಂದ ೨೬ ಜೂನ್ ೨೦೨೨ ರವಿವಾರ ಮುಂಜಾನೆ ೧೦-೩೦ ಗಂಟೆಗೆ ಹಾವೇರಿಯ ಶಿವಬಸವ ನಗರದಲ್ಲಿರುವ ಸಿಂದಗಿ ಮಠದಲ್ಲಿ ‘ಗುರು ವಚನ ಪ್ರಭ’ ಜಿಲ್ಲಾ ಮಟ್ಟದ ಭಕ್ತಿಗೀತೆ ಮತ್ತು ವಚನ ಗೋಷ್ಠಿ ಮತ್ತು ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ನೇತೃತ್ವವನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕರಾದ ಪೂಜ್ಯಶ್ರೀ ಚನ್ನವೀರ ಸ್ವಾಮಿಗಳು ಹಿರೇಮಠ ಸಂಸ್ಥಾನ (ಕಡಣಿ) ಗದಗ ಇವರು ವಹಿಸಿಕೊಳ್ಳುವರು. ಪ್ರೊ. ಮಾರುತಿ ಶಿಡ್ಲಾಪೂರ ಸಾಹಿತಿಗಳು ಹಾನಗಲ್, ಜಿಲ್ಲಾ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಹಾವೇರಿ ಇವರು ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

ಮುಖ್ಯಅತಿಥಿಗಳಾಗಿ ಎಂ. ಎಸ್. ಕೋರಿಶೆಟ್ಟರ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ, ಹಾವೇರಿ, ಅಮೃತಮ್ಮ ಎಂ. ಶೀಲವಂತರ ಜಿಲ್ಲಾ ಅಧ್ಯಕ್ಷರು: ಕದಳಿ ವೇದಿಕೆ, ಹಾವೇರಿ. ಚಂಪಾ ಎಂ. ಹುಣಸಿಕಟ್ಟಿ ಅಧ್ಯಕ್ಷರು, ಹುಕ್ಕೇರಿಮಠ ಅಕ್ಕನಬಳಗ, ಹಾವೇರಿ ಮತ್ತು ಶಿವಬಸಯ್ಯ ಚರಂತಿಮಠ, ಕಾಡಶಟ್ಟಿಹಳ್ಳಿ ಜಿಲ್ಲಾ ಸಂಚಾಲಕರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ದಾವಣಗೆರೆ ಇವರು ಆಗಮಿಸಲಿದ್ದಾರೆ.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಕಾರ್ಯದರ್ಶಿಗಳಾದ ಬೆಳಗಾವಿಯ ಪ್ರೊ. ಮಂಜುಶ್ರೀ ಬ. ಹಾವಣ್ಣವರ ವಚನ ಸಾಹಿತ್ಯ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ಶಿವಬಸಯ್ಯ ಆರಾಧ್ಯಮಠ ವ್ಯೆವಸ್ಥಾಪಕರು, ಸಿಂದಗಿಮಠ, ಹಾವೇರಿ, ಶ್ರೀ ಶಿವರಾಜ ಉಜ್ಜನಿ, ಕದರಮಂಡಲಗಿ ಜಿಲ್ಲಾ ಸಂಚಾಲಕರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ಪ್ರದೀಪ ನಂದಿಕೇಶ್ವರಮಠ, ಕದರಮಂಡಲಗಿ ಜಿಲ್ಲಾ ಕೊಶ್ಯಾಧ್ಯಕ್ಷರರು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ. ಉಪಸ್ಥಿತರಿರುವರು. ಆಕಾಶವಾಣಿ ಖ್ಯಾತ ಸಂಗೀತ ಕಲಾವಿದರಾದ ಡಾ. ಸುಮಾ ಬ. ಹಡಪದ, ಹಳಿಯಾಳ ರಾಜ್ಯ ಕಾರ್ಯಕಾರಿಣಿ ಸದಸ್ಯರು: ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಇವರಿಂದ ವಚನ ಗಾಯನ ನಡೆಯಲಿದೆ. ಕುಮಾರಿ ಐಶ್ವರ್ಯ ಬಿ. ಹಡಪದ. ಹಾಗೂ ಸ್ಥಳಿಯ ಪ್ರತಿಭೆಗಳಿಂದ ವಚನ ನೃತ್ಯ ಜರುಗಲಿವೆ. ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ನಗರ ಸಮಿತಿ ಸಂಚಾಲಕರಾದ ಫಕ್ಕೀರಶೆಟ್ರು ಶಿವಪ್ಪ. ಅಂಗಡಿ ಇವರು ಈ ಕಾರ್ಯಕ್ರಮದ ನಿರ್ವಾಹಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಹಾವೇರಿ ಜಿಲ್ಲೆಯ ಎ. ಎಂ. ಹರವಿ, ಹಾವೇರಿ, ಸಂತೋಷ ವಿ. ಪಿಶೆ, ಹಾವೇರಿ. ರಾಜೇಶ್ವರಿ ಆರ್. ಸಾರಂಗಮಠ, ಹಾವೇರಿ. ಪವನ ಗುತ್ತಲ, ಹಾವೇರಿ.ಸಿ. ಜಿ. ಮಲ್ಲೂರ, ಹಾವೇರಿ. ಪ್ರಶಾಂತ್ ಆರ್ ದೈವಜ್ಞ, ಕರೇಕ್ಯಾತನಹಳ್ಳಿ. ವೀರನಗೌಡ ಪಾಟೀಲ, ಸೋಮನಕಟ್ಟಿ. ಮಹದೇವ ಎಫ್ ಕರಿಯಣ್ಣವರ, ಹಾವೇರಿಮಂಗಳಾ ಕೆಂಡದಮಠ, ಬ್ಯಾಡಗಿ ಸುಭಾಷ್ ಹೇ. ಚವ್ಹಾಣ, ಯಲವಗಿನೀಲಕಂಠಯ್ಯ ಪಂ. ಓದಿಸೋಮಠ, ಗುತ್ತಲ.ಚನ್ನಬಸಪ್ಪ ಜಿ ನಾಡರ, ಹನುಮಾಪುರ. ವಿಜಯಲಕ್ಷ್ಮಿ ಎನ್. ಸಾರಂಗಮಠ, ಶಿಗ್ಗಾಂವ. ಕುಮಾರ ಮಡಿವಾಳರ, ಆಲದಗೇರಿ. ರೇವಣಸಿದ್ದಯ್ಯ ಗ. ಹಿರೇಮಠ, ಶಿಗ್ಗಾಂವ. ಲತಾ ಶಂ. ಮಡ್ಲೂರಮಠ, ಹೊಂಬರಡಿ. ಶ್ರದ್ಧಾ ರು. ಹಿರೇಮಠ, ಮುಳಕೇರಿ. ತೇಜಸ್ವಿನಿ ನಾ. ಸಾರಂಗಮಠ, ಹಾವೇರಿ. ಚಂದ್ರಶೇಖರಯ್ಯ ಶಾಸ್ತ್ರೀ ಉಪ್ಪುಣಸೆ. ಕೃಷ್ಣವೇಣಿ ವಿ. ಹಾವೇರಿ. ಸುಮಾ ಎಂ. ಕನವಳ್ಳಿಮಠ, ಸವಣೂರು. ಡಾ. ಡಿ. ಪ್ರಾನ್ಸಿಸ್ ಕ್ಸೇವಿಯರ್, ಹರಿಹರ. ವಂದನಾ ಆರ್. ಕರಾಳೆ, ಹುಬ್ಬಳ್ಳಿ. ಸುಧಾ ಹೊಸಮನಿ, ಹಾನಗಲ್. ಸುಭಾಷ ಹೊಸಮನಿ, ಹಾನಗಲ್. ಸ್ವರಚಿತ ಭಕ್ತಿಗೀತೆ ಮತ್ತು ವಚನಗಳನ್ನು ವಾಚನ ಮಾಡಲಿದ್ದಾರೆ.

ವಚನ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿರುವ ಉದಯೋನ್ಮುಖ ವಚನಕಾರರಿಗೆ ವೇದಿಕೆಯಾಗಿರುವ ಸೇವಾ ಸಮಿತಿಯ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಕವಿ, ವಚನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಹಾವೇರಿ ಜಿಲ್ಲಾ ಸಂಚಾಲಕರಾದ ಶಿವರಾಜ ಉಜ್ಜನಿ ಮತ್ತು ಹಾವೇರಿ ತಾಲೂಕಾ ಸಮಿತಿ ಸಂಚಾಲಕರಾದ ಫಕ್ಕೀರಶೆಟ್ರು ಶಿವಪ್ಪ. ಅಂಗಡಿ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!