spot_img
spot_img

ಡಾ.ಪಂ.ಪುಟ್ಟರಾಜ ಸೇವಾ ಸಮಿತಿ (ರಿ) ವತಿಯಿಂದ ಪುಟ್ಟರಾಜರ ಪುಣ್ಯ ಸ್ಮರಣೋತ್ಸವ ಹಾಗೂ ಕವಿಗೋಷ್ಠಿ

Must Read

spot_img

ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ದಿನಾಂಕ ೨೪-೯-೨೨ರ ಶನಿವಾರ ೪-೦೦ ಗಂಟೆಗೆ ಶಿವಯೋಗಿ ಡಾ. ಪಂ.ಪುಟ್ಟರಾಜ ಗವಾಯಿಗಳ ೧೩ ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ಜರುಗಿತು.

ದಿವ್ಯ ಸಾನ್ನಿಧ್ಯವನ್ನು ಶ್ರೀ.ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೇಶ್ವರ ಶಿವಯೋಗಿಗಳು ವಹಿಸಿಕೊಂಡಿದ್ದರು.      ಅಧ್ಯಕ್ಷತೆಯನ್ನು ಶ್ರೀ ವೆ.ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಸಂಸ್ಥಾಪಕರು ಶ್ರೀ ಪುಟ್ಟರಾಜ ಸೇವಾ ಸಮಿತಿ ಗದಗ ಇವರು ವಹಿಸಿಕೊಂಡಿದ್ದರು.

ಶ್ರೀ ಪಂ.ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಖ್ಯಾತ ಮಕ್ಕಳ ಸಾಹಿತಿಗಳಾದ ಡಾ.ನಿಂಗು ಸೊಲಗಿ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ , ಜಗತ್ತಿನಲ್ಲಿ ಗಾನಸುಧೆಯ ಕಂಪು ಇನ್ನೂ ಹರಡುತ್ತಲಿದೆ ಬೆಳೆಯುತ್ತಲಿದೆ ಎಂದರೆ ಅದಕ್ಕೆ ಪರಮಪೂಜ್ಯ ಶ್ರೀ ಪಂ.ಪುಟ್ಟರಾಜ ಅಜ್ಜನವರು ಅಂಧ ಅನಾಥರ ಬಾಳಿಗೆ ಬೆಳಕಾಗಿ ಊರುಗೋಲಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮ ಜಗದ್ವಿಖ್ಯಾತಿ ಹೊಂದಿದೆ ಎಂದರೆ ಪರಮಪೂಜ್ಯರಿಂದ ಕಾರಣ ಇಂದು ಪುಣ್ಯ ಸ್ಮರಣೋತ್ಸವ ಆರಾಧನೆ  ನೇರವೇರಿಸುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದರು.

ಸಾನ್ನಿಧ್ಯ ವಹಿಸಿಕೊಂಡಿದ್ದ ಪರಮಪೂಜ್ಯರು ಆಶೀರ್ವಚನ ನೀಡುತ್ತಾ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯರಾದ ಶ್ರೀ ಪುಟ್ಟರಾಜ ಗವಾಯಿಗಳು ನಾಡಿನ ಉದ್ದಗಲಕ್ಕೂ ಸಂಚರಿಸಿ ತುಲಾಭಾರ ಚಕ್ರವರ್ತಿ ಎನಿಸಿಕೊಂಡು ತುಲಾಭಾರದಿಂದ ಬಂದಂಥ ದವಸ ಧಾನ್ಯ ಕಾಣಿಕೆಗಳನ್ನು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳಿಗೆ ವಿನಿಯೋಗಿಸಿ ಸಾರ್ಥಕತೆ ಮೆರೆದವರು ಎಂದರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ವೇ.ಚೆನ್ನವೀರ ಸ್ವಾಮಿಗಳು ಹಿರೇಮಠ ಕಡಣಿ ಇವರು ಮಾತನಾಡಿ, ಶ್ರೀ ಗುರುಗಳ ಸಾಹಿತ್ಯ ಸಂಗೀತ ಸೇವೆ ಈ ನಾಡಿಗೆ ಅನನ್ಯ ಕಾರಣ ಗುರುಗಳ ಸೇವೆ ನಾಡಿನ ಉದ್ದಗಲಕ್ಕೂ ಪ್ರಸಾರ ಪಡಿಸುವ ಉದ್ದೇಶದಿಂದ ಸೇವಾ ಸಮಿತಿ ಸ್ಥಾಪಿಸಿ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸುತ್ತಿದ್ದೇವೆ ಎಂದರು.

ಕಲೆಗೆ ಕಣ್ಣಿತ್ತ ಪೂಜ್ಯರು ಈ ವಿಷಯದ ಬಗ್ಗೆ ಕವಿಗೋಷ್ಠಿ ಏರ್ಪಡಿಸಿತ್ತು ಈರಮ್ಮ ಕುಂದಗೋಳ ಎನ್ ಎಸ್ ಶಿರನಹಳ್ಳಿ ಶಿವಾನಂದ ಭಜಂತ್ರಿ ಶಿವು ವಾಲಿಕಾರ ಮಂಜುನಾಥ ಕೆ ಹೂವಿನಹಡಗಲಿ ರಾಘವೇಂದ್ರ ಗೆಜ್ಜಿ ಇವರು ಕವನ ವಾಚನ ಮಾಡಿದ ನಂತರ ಶ್ರೀ ಗಳಿಂದ ಅಭಿನಂದನ ಪತ್ರ ಪಡೆದರು.

ನಂತರ ಗದಗ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಮಂಜುನಾಥ ಹಳ್ಳೂರಮಠ,ಜಿಲ್ಲಾ ಕಾರ್ಯದರ್ಶಿಯಾಗಿ ಶ್ರೀ ದೇವು ಹಡಪದ ಲಕ್ಷ್ಮೇಶ್ವರ ತಾಲೂಕು ಸಂಚಾಲಕರಾಗಿ ಗುಡ್ಡಪ್ಪ ಹಡಪದ ಗದಗ ಶಹರ ತಾಲೂಕು ಸಂಚಾಲಕರಾಗಿ ಶಿವಾನಂದ ಭಜಂತ್ರಿ  ರೋಣ ತಾಲೂಕು ಸಂಚಾಲಕರಾಗಿ ಶರಣು ಚಲವಾದಿ ನರಗುಂದ ತಾಲೂಕು ಸಂಚಾಲಕರಾಗಿ ರಾಘವೇಂದ್ರ ಗೆಜ್ಜಿ ಇವರು ಆಯ್ಕೆಗೊಂಡು ಶ್ರೀಗಳಿಂದ ಪ್ರಮಾಣಪತ್ರ ಪಡೆದರು.

 ಈ ಸಂದರ್ಭದಲ್ಲಿ ಡಾ.ನಿಂಗು ಸೋಲಗಿ,ಲೋಕೇಶ್ ದೊಡ್ಡಮನಿ,ಕ.ಸಾ.ಪ ತಾಲೂಕಿನ ಅದ್ಯಕ್ಷರಾದ ಎಂ.ಜಿ.ಗಚ್ಚನ್ನವರ, ದೇವಪ್ಪ ಇಟಗಿ,ಮಂಜುನಾಥ ಇಟಗಿ ರಾಮಣ್ಣ ತಿಪ್ಪಣ್ಣವರ ಉಷಾ ತಳಕಲ್ಲ , ಮಂಜುಳಾ ಇಟಗಿ, ಮಂಜುನಾಥ ಮುಧೋಳ, ಈಶಣ್ಣ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

ಶರಣಯ್ಯ ಹೀರೇಮಠ ಸ್ವಾಗತಿಸಿದರು. ಶಿವು ವಾಲಿಕಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಸೈನಿಕರಂತೆ ಸದಾ ಸೇವೆ ಸಲ್ಲಿಸುವ ಪೊಲೀಸರ ಕಾರ್ಯ ಸ್ತುತ್ಯರ್ಹ- ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಸಾರ್ವಜನಿಕರ ನೆಮ್ಮದಿ ಬದುಕಿಗೆ ಪೊಲೀಸರು ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವುದು ಸ್ತುತ್ಯರ್ಹವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು. ರವಿವಾರದಂದು ತಾಲೂಕಿನ ಕುಲಗೋಡ...
- Advertisement -

More Articles Like This

- Advertisement -
close
error: Content is protected !!