spot_img
spot_img

ಅನ್ಯಾಯವನ್ನು ಪ್ರಶ್ನೆ ಮಾಡುವುದೇ ಅಭಿವ್ಯಕ್ತಿ ಸ್ವಾತಂತ್ರ್ಯ: ಹಿರಿಯ ಪತ್ರಕರ್ತ ಈಶ್ವರ ಹೋಟಿ

Must Read

- Advertisement -

ಬೈಲಹೊಂಗಲ: ಉತ್ತಮ ಕಾರ‍್ಯಗಳನ್ನು ಮಾಡಿದಾಗ ಪ್ರೋತ್ಸಾಹ ನೀಡುವ ಸಮಾಜ, ಸಮಾಜದಲ್ಲಾಗುವ ಅನ್ಯಾಯವನ್ನು ಜನರಿಗೆ ತಿಳಿಸಿದಾಗ ಅವುಗಳನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು ಎಂದು ಜಿ.ನಾರಾಯಣ ಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಈಶ್ವರ ಹೋಟಿ ಹೇಳಿದರು.

ಪಟ್ಟಣದ ಮೂರುಸಾವಿರಮಠದ ವತಿಯಿಂದ ಏರ್ಪಡಿಸಿದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ನಾಡಿನಲ್ಲಿ ಅನ್ಯಾಯವಾದಾಗ ಜವಾಬ್ದಾರಿಯುತವಾಗಿ ಅದನ್ನು ಸಮರ್ಥವಾಗಿ ಪ್ರಶ್ನೆ ಮಾಡುವುದೇ ಪತ್ರಕರ್ತನ ಧರ್ಮವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಶಿಕ್ಷಣ ನೀಡಿದರೆ, ಅವರು ಉತ್ತಮ ನಾಗರಿಕರಾಗಿ ಸ್ವಾವಲಂಬನೆಯಿಂದ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿದಂತಾಗುತ್ತದೆ ಎಂದರು.

ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಪ್ರಾಮಾಣಕವಾಗಿ ಸೇವೆ ಮಾಡಿದರೆ ಯಶಸ್ಸು, ಪುರಸ್ಕಾರ ಲಭಿಸುತ್ತವೆ, ಜೀವನದಲ್ಲಿ ಸಾರ್ಥಕತೆ ಸಿಗುತ್ತದೆ ಎಂದರು.

- Advertisement -

ಚಿತ್ರನಟ ಶಿವರಂಜನ ಬೋಳಣ್ಣವರ ಮಾತನಾಡಿ, ಕಳೆದ ೩೦ ವರ್ಷಗಳಿಂದ ದಿಟ್ಟತನದ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಈಶ್ವರ ಹೋಟಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ. ಅವರ ನಿಷ್ಠಾವಂತಿಕೆಗೆ ರಾಜ್ಯ ಮಟ್ಟದ ಜಿ.ನಾರಾಯಣ ಸ್ವಾಮಿ ಪ್ರಶಸ್ತಿ ಸಂದಿರುವುದು ನಮ್ಮೆಲ್ಲರಿಗೆ ಸಂತಸ ತರಿಸಿದೆ.

ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಪಾಟೀಲ ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಹಲವಾರು ಕಾರ್ಯಗಳ ಮೂಲಕ ಜನಪರ ಚಿಂತನೆ ಮಾಡುತ್ತಿರುವ ಈಶ್ವರ ಹೋಟಿ ಅವರ ಕಾರ್ಯ ಶ್ಲಾಘನೀಯ.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಈಶ್ವರ ಹೋಟಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾ ಯುವ ಘಟಕದ ನೂತನ ಅಧ್ಯಕ್ಷರಾದ ಡಾ.ಸಂಗಮೇಶ ಸವದತ್ತಿಮಠ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಉಪಾಧ್ಯಕ್ಷರಾದ ಶರಣಕುಮಾರ ಅಂಗಡಿ, ವೀರು ದೊಡ್ಡವೀರಪ್ಪನವರ ಹಾಗೂ ರಾಜು ವಿವೇಕಿ ಪ್ರಧಾನ ಕಾರ್ಯದರ್ಶಿ ಪ್ರವೀಣ ಬಟ್ಟಿ, ಕಾರ್ಯದರ್ಶಿಗಳಾದ ಗುರುಸ್ವಾಮಿ ಹಿರೇಮಠ, ಹರ್ಷ ಪೂಜಾರ, ಖಜಾಂಚಿ ಸಂತೋಷ ಹಿರೇಮಠ ಅವರನ್ನು ಸತ್ಕರಿಸಲಾಯಿತು.

- Advertisement -

ಮಹಾಂತೇಶ ಅಕ್ಕಿ, ಶ್ರೀಶೈಲ ಯಡಳ್ಳಿ, ಸೋಮನಾಥ ಸೊಪ್ಪಿಮಠ, ಮಹಾಂತೇಶ ತುರಮರಿ, ಶಿವಾನಂದ ಬಡ್ಡಿಮನಿ, ಸುಭಾಸ ತುರಮರಿ, ಪುರಸಭೆ ಸದಸ್ಯ ಸಾಗರ ಭಾವಿಮನಿ, ಸಂತೋಷ ಕೊಳವಿ, ಗೌತಮ ಇಂಚಲ, ಲಕ್ಷ್ಮೀ ಮುಗಡ್ಲಿಮಠ, ರತ್ನಾ ಬಿಳ್ಳೂರ, ಸೋಮವ್ವ ಮುರಗೋಡ ಪಾಲ್ಗೊಂಡಿದ್ದರು. ವೇ.ಮೂ.ವಿಶ್ವನಾಥ ಹಿರೇಮಠ (ಬಾಳೇಕುಂದರಗಿ) ಸ್ವಾಗತಿಸಿದರು. ಶೋಭಾ ಛಬ್ಬಿ ನಿರೂಪಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group