spot_img
spot_img

ಕನ್ನಡ ನಾಡು ನುಡಿ ಸೇವೆ ಆರ್.ಬಿ.ಪುಟ್ಟೇಗೌಡರು

Must Read

spot_img
- Advertisement -

ಹೊಳೆನರಸೀಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆರ್.ಬಿ.ಪುಟ್ಟೇಗೌಡರು ಇವರು ನನಗೆ ಬಹಳ ದಿನಗಳ ಪರಿಚಿತರು. ಇವರ ಕನ್ನಡ ನಾಡು ನುಡಿ ಸೇವೆಗೆ ಹಾಸನ ಜಿಲ್ಲಾಡಳಿತ 69 ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಮಾಡಿದೆ. ಅಭಿನಂದನೆಗಳು.

ಆಡು ಮಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಇವರ ಸೇವಾ ಕ್ಷೇತ್ರ ಹಲವು ಬಗೆ. ಕಲೆ,ಸಂಗೀತ,ಸಾಹಿತ್ಯ, ರಂಗಭೂಮಿ, ಶಿಕ್ಷಣ, ಪತ್ರಿಕೋದ್ಯಮ, ಆರೋಗ್ಯ, ಸಮಾಜ ಸೇವೆ, ಪರಿಸರ ಹೀಗೆ.

ಚನ್ನರಾಯಪಟ್ಟಣ ತಾ. ರಾಜಾಪುರ ಗ್ರಾಮದ ಜಾನಕಮ್ಮ ಬೋರೇಗೌಡ ದಂಪತಿಗಳ ಸುಪುತ್ರರಾಗಿ ಜನಿಸಿದ ಆರ್.ಬಿ.ಪುಟ್ಟೇಗೌಡರು ತಮ್ಮ ವಿಧ್ಯಾರ್ಥಿ ಜೀವನದಲ್ಲೇ ಸುಗಮ ಸಂಗೀತ, ಕೊಳಲುವಾದನ, ರಂಗಭೂಮಿಯ ಸೆಳೆತಕ್ಕೆ ಒಳಗಾದವರು. ಹಿರಿಯ ಪುರುಷ ಆರೋಗ್ಯ ನಿರೀಕ್ಷಕರಾಗಿ ಹೊಳೆನರಸೀಪುರ ಪುರಸಭೆಯಲ್ಲಿ ಸೇವೆ ಸಲ್ಲಿಸಿ ಸಮುದಾಯದ ವಿಶ್ವಾಸ ಗಳಿಸಿದ್ದರು, ಸರ್ಕಾರಿ ಸೇವೆ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡವರು.
ಚನ್ನರಾಯಪಟ್ಟಣ ಸುಪ್ರಭಾತ ಕಲಾ ವೃಂದದ ಉಪಾಧ್ಯಕ್ಷರು ಗಾಯಕರಾಗಿ, ಕೊಳಲು ವಾದಕರಾಗಿ, ಕಲಾವೃಂದದ ಗಾಯಕರೊಂದಿಗೆ, ಮೂಡಬಿದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಹಾಸನದ ಹೊಯ್ಸಳ ಉತ್ಸವ, ಹಾಸನ ಆಕಾಶವಾಣಿ, ಸಂಗೀತ ಸಮ್ಮೇಳನ, ಗೀತೋತ್ಸವದಲ್ಲಿ, ಮಡಿಕೇರಿ ದಸರಾ ಉತ್ಸವ, ಶ್ರವಣಬೆಳಗೊಳ, ಚಿಕ್ಕಮಗಳೂರು, ಬೆಂಗಳೂರು ದೂರದರ್ಶನಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

- Advertisement -

2007 ಹೊಳೆನರಸೀಪುರ ಅಭಿಮಾನ ಕೂಟದಿಂದ ಪ್ರತಿಭಾ ಪುರಸ್ಕಾರ, ಸರ್ಕಾರಿ ಸೇವೆ ಗುರುತಿಸಿ 2007 ರಲ್ಲಿ ಹೊಳೆನರಸೀಪುರ ತಾ. ಆಡಳಿತದಿಂದ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಚ್ಚತೆ ಗಿಡ ನೆಡುವ ಶ್ರಮದಾನ ಶಿಬಿರಗಳಲ್ಲಿ ಭಾಗವಹಿಸಿದ್ದಕ್ಕಾಗಿ 2009 ರಲ್ಲಿ ಅಂದಿನ ತಹಸೀಲ್ದಾರ್ ಹೆಚ್.ಎಲ್. ನಾಗರಾಜರಿಂದ ಪ್ರಶಂಸನಾ ಪತ್ರ, 2012 ರಲ್ಲಿ ಹೊಳೆನರಸೀಪುರ 3ನೇ ತಾ. ಕನ್ನಡ ಸಾಹಿತ್ಯ ಸಮ್ಮೇಳನ, ಬಾಗಿವಾಳು ಗ್ರಾಮದಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪುರಸ್ಕಾರ, 2013 ರಲ್ಲಿ ತಾಲ್ಲೂಕು ವಚನ ಸಾಹಿತ್ಯ ಅಕಾಡೆಮಿಯಿಂದ ಕಲಾಸೇವೆಗಾಗಿ ಸನ್ಮಾನ. ಹಾಸನ ರೋಟರಿ ಕ್ವಾಂಟ ನಡೆಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬಹುಮಾನ ಗಳಿಕೆ, 2008 ಹೊಳೆನರಸೀಪುರ ತಾ. ರೋಟರಿ ಕ್ಲಬ್ ನ ಕಾರ್ಯದರ್ಶಿ, 2014 ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3180 ವತಿಯಿಂದ ಶಿವಮೊಗ್ಗದಲ್ಲಿ ನಾಲ್ಕು ಅವಾರ್ಡ್ ಪಡೆದಿರುವರು.

ಹಳೇ ಕೋಟೆ ಶಾಲಾ ಮಕ್ಕಳಿಗೆ ಉಚಿತ ರಕ್ತ ಗುಂಪು ತಪಾಸಣೆ ವಿಮೆ ಮಾಡಿಸಿ, ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ, ಶುಧ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ನೀಡಿದ ಸೇವೆ, 81 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಮಾನಾಂತರ ವೇದಿಕೆ ನಿರ್ವಹಣೆ ಸಮಿತಿ ಸಂಚಾಲಕರಾಗಿ ಕಾರ್ಯ ನಿರ್ವಹಣೆ 2016 ಮಂತ್ರಾಲಯದಲ್ಲಿ ನಡೆದ ಅಖಿಲ ಭಾರತ ಮಕ್ಕಳ ಸಾಂಸ್ಕೃತಿಕ ಸಮ್ಮೇಳನದಲ್ಲಿ ಶ್ರೀ ರಾಘವೇಂದ್ರ ಸದ್ಭಾವನ ಪ್ರಶಸ್ತಿ, 2016 ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಕೊಳಲು ವಾದನದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, 2017 ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕೊಳಲುವಾದನದಲ್ಲಿ ತೃತೀಯ ಸ್ಥಾನ. 2019 ತಾ. ಸರ್ಕಾರಿ ನೌಕರರ ಸಂಘಕ್ಕೆ ಅವಿರೋಧ ಆಯ್ಕೆ. ಕಲಾವಿದರಾಗಿ ಸಾಮಾಜಿಕ ನಾಟಕಗಳು ಪಂಚಭೂತ, ಆಚಾರಿಯ ಅದೃಷ್ಟ, ತ್ರಿಬ್ಬಲ್ ತಾಳಿ,ಎಲ್ಲರೂ ನಮ್ಮವರೆ, ಧರ್ಮ ಸಾಮರಸ್ಯ, ಅಳಿಯ ದೇವರು, ಪೌರಾಣಿಕ ನಾಟಕಗಳು ರತಿ ಕಲ್ಯಾಣ, ರುಕ್ಮಿಣಿ ಸ್ವಯಂವರ, ರಾಮಾಯಣ, ಭಕ್ತಮಹಾಂದಾತ, ಶನಿ ಮಹಾತ್ಮೆ, ತ್ರಿಜನ್ಮ ,ಮೋಕ್ಷ, ನಾಟಕಗಳಲ್ಲಿ ಅಭಿನಯ
2022 ರಲ್ಲಿ ಒಮನ್ ದೇಶದ ಮಸ್ಕತ್ ನಲ್ಲಿ ಮಂಗಳೂರಿನ ಹೃದಯವಾಹಿನಿಯ ಮಂಜುನಾಥ್ ಸಾಗರ್ ಹಾಗೂ ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಪ್ರಸಾದ್ ಇವರುಗಳ ಆಶ್ರಯದಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿ ಕೊಳಲು ವಾದನ ನುಡಿಸಿದರು.
ಬಸವ ಜಯಂತಿ ಪ್ರಯುಕ್ತ, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಆರ್.ಬಿ.ಪುಟ್ಟೇಗೌಡರ ಹೆಸರು ಸೇರ್ಪಡೆ.

ಗೊರೂರು ಅನಂತರಾಜು
ಹಾಸನ
9449462879

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group