ಸವದತ್ತಿ – ಸಾಕು ಪ್ರಾಣಿಗಳಿಂದಲೂ ಮನುಷ್ಯನಿಗೆ ರೋಗಗಳು ಬರಬಹುದು. ಬೆಕ್ಕು, ನಾಯಿ ಇವು ಮನುಷ್ಯನ ಅತಿಯಾದ ಸಂಪರ್ಕದಲ್ಲಿ ಇರುವ ಪ್ರಾಣಿಗಳು. ಆದ್ದರಿಂದ ಅವುಗಳಿಗೂ ಲಸಿಕೆ ಔಷಧ ಉಪಚಾರ ಮಾಡಿಸಬೇಕು. ಸಾಕು ನಾಯಿಗಳಿಗೆ ಎಲ್ಲರೂ ಕಡ್ಡಾಯವಾಗಿ ರೇಬೀಸ್ ಲಸಿಕೆಯನ್ನು ಹಾಕಿಸಬೇಕು. ಇಲ್ಲವಾದರೆ ಯಾವುದಾದರೂ ಹುಚ್ಚು ನಾಯಿ ನಾವು ಸಾಕಿದ ನಾಯಿಗೆ ಕಡಿದರೆ ಅದು ಮನುಷ್ಯರನ್ನು ಕಚ್ಚಿದರೆ ಸಾವು ಸಂಭವಿಸಬಹುದು ಆದ್ದರಿಂದ ಸಾಕು ಪ್ರಾಣಿ ಗಳಾದ ನಾಯಿ ಬೆಕ್ಕುಗಳಿಗೆ ತಪ್ಪದೇ ರೇಬೀಸ್ ಲಸಿಕೆ ಕಡ್ಡಾಯವಾಗಿ ಹಾಕಿಸಬೇಕು ಎಂದು ಹಿರಿಯ ಪಶು ವೈದ್ಯಕೀಯ ಪರಿಕ್ಷಕರಾದ ಡಾ. ಎಮ್. ಎಮ್. ಮುಗಟ ಹೇಳಿದರು.
ಅವರು ಪಟ್ಟಣದ ಸರಕಾರಿ ಪಶು ಆಸ್ಪತ್ರೆಯಲ್ಲಿ ನಾಯಿಗಳಿಗೆ ರೇಬೀಸ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ನಾಯಿಗಳಿಗೆ ಲಸಿಕೆ ಹಾಕಿ ಮಾತನಾಡಿದರು. ‘ರೇಬೀಸ್ ರೋಗ ಹೊಂದಿದ ನಾಯಿ ಬೆಕ್ಕು ಕಚ್ಚಿದರೆ ಮತ್ತು ಮನುಷ್ಯನ ಮೈ ನೆಕ್ಕಿದರೂ ಸಹ ಆ ಮನುಷ್ಯನಿಗೆ ರೇಬೀಸ್ ವೈರಾಣು ಶರೀರಕ್ಕೆ ಹಾನಿ ಮಾಡಬಹುದು. ಅದರಿಂದಲೂ ಮರಣ ಹೊಂದಬಹುದು. ಆದ್ದರಿಂದ ನಾಯಿಗಳನ್ನು ಸಾಕಿದವರು ಬಹು ಮುಖ್ಯವಾಗಿ ಪಶು ಆಸ್ಪತ್ರೆಗೆ ಹೋಗಿ ತಮ್ಮ ತಮ್ಮ ಸಾಕು ನಾಯಿಗಳಿಗೆ ಲಸಿಕೆ ಹಾಕಿಸಬೇಕು’ ಎಂದು ಹೇಳಿದರು
ಈ ಸಂದರ್ಭದಲ್ಲಿ ಪಶು ಇಲಾಖೆಯ ಸಿಬ್ಬಂದಿಗಳಾದ ಕುಮಾರ ಖ್ಯಾತನ್ನವರ.ವಿಜೇಂದ್ರ ದಂಡಗಿ. ಲತಾ ರಾವಳ. ಶೃತಿ ಕುಲಕರ್ಣಿ. ಆನಂದ ಅಲ್ಲಣ್ಣವರ.ಸುನಿಲ ಲಮಾಣಿ. ಉಪಸ್ಥಿತರಿದ್ದರು