ದಿನಾಂಕ 24/07/2022 ರಂದು ಕರ್ನಾಟಕ ರಾಜ್ಯ ಪ್ರತಿಭಾ ಪರಿಷತ್ ಮೈಸೂರು ಇವರು ಸಿದ್ದಗಂಗಾ ಮಠ ತುಮಕೂರಿನಲ್ಲಿ ನಡೆದಂತಹ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಗುರುತಿಸಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.15 ಶಾಲೆಯ ಗುರುಮಾತೆ ಶ್ರೀಮತಿ ಸುಶೀಲಾ. ಲ. ಗುರವ ಇವರಿಗೆ ಡಾ. ಎಸ್. ರಾಧಾಕೃಷ್ಣನ್ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದರು.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತುಮಕೂರಿನ ಪೂಜ್ಯ ಗುರುಗಳು ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಘಟಕದ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.