ಬೀದರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಭಾರತದ ಬಗ್ಗೆ ತಿಳಿವಳಿಕೆ ಅಭಿಮಾನ ಇಲ್ಲವೇ ಇಲ್ಲ. ಆತ ಇನ್ನೂ ಚಿಕ್ಕ ಮಗುವಿನಂತೆ ಇದ್ದಾನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ವಾಗ್ದಾಳಿ ನಡೆಸಿದರು.
ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ರಾಹುಲ್ ಗಾಂಧಿ ಗೆ ದೇಶದ ಬಗ್ಗೆ ಅಭಿಮಾನ ಇಲ್ಲ, ಫಸ್ಟ್ ರಾಹುಲ್ ಗಾಂಧಿ ಈ ದೇಶದ ಜನರ ಭಾವನೆ ಬಗ್ಗೆ ತಿಳಿವಳಿಕೆ ಇಲ್ಲ. ಏನೇ ಆದರೂ ದೇಶದ ಹೊರಗೆ ಹೋಗಿ ಪ್ರಚಾರ ಗಿಟ್ಟಿಸಿಕೊಳ್ಳಲು ತೊಡಗುತ್ತಾರೆ.
ಬಟ್ಟೆ ಬಿಚ್ಚಿ ಪ್ರಚಾರ ತೆಗೆದುಕೊಳ್ಳುವರು ಇದ್ದಾರೆ. ಅಂಥವರ ಸಾಲಿಗೆ ರಾಹುಲ್ ಸೇರುತ್ತಾರೆ. ನಮ್ಮ ದೇಶದ ಪ್ರಜಾಪ್ರಭುತ್ವ ಬಗ್ಗೆ ಮಾತು ಆಡುವ ರಾಹುಲ್ ಗಾಂಧಿಗೆ ಅಷ್ಟು ಅರಿವು ಇಲ್ಲ.ನಮ್ಮ ದೇಶದ ನಾಗರಿಕನಾಗಿ ದೇಶದ ವಿರುದ್ಧ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಎಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಕಾಂಗ್ರೆಸ್ ಸೋಲು ಆಗುತ್ತದೆ ಎಂದ ಖೂಬಾ, ರಾಹುಲ್ ಗಾಂಧಿ ಇನ್ನೂ ಚಿಕ್ಕ ಹುಡುಗ ಮಾತಾಡಲಿಕ್ಕೆ ಬರೋದಿಲ್ಲ. ರಾಹುಲ್ ಗಾಂಧಿ ಕಾಲು ಇಟ್ಟ ಕಡೆ ಕಾಂಗ್ರೆಸ್ ಗೆ ಸೋಲು ಆಗುತ್ತದೆ ಎಂದರು.
ವರದಿ: ನಂದಕುಮಾರ ಕರಂಜೆ, ಬೀದರ