- Advertisement -
ಮೂಡಲಗಿ: ದೇಶದ ಕಾನೂನು ಜನಸಾಮಾನ್ಯರಿಗೂ ಮತ್ತು ಲೋಕಸಭಾ ಸದಸ್ಯರಿಗೂ ಒಂದೇ ಇದೆ ಎನ್ನುವದು ಈ ಮೂಲಕ ಮತ್ತೊಮ್ಮೆ ದೃಢಪಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮೋದಿ ಹೆಸರಿನ ಕುರಿತ ಹೇಳಿಕೆಯಿಂದಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ೨ ವರ್ಷ ಜೈಲು ಶಿಕ್ಷೆಯ ತೀರ್ಪು ಹಾಗೂ ಅವರ ಅನರ್ಹತೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಅವರು,ರಾಜಕೀಯ ದುರುದ್ದೇಶಗಳಿಗಾಗಿ ಇಂಥ ಹೇಳಿಕೆಗಳನ್ನು ನೀಡುವವರು ಇನ್ನು ಮುಂದಾದರೂ ಗಂಭೀರವಾಗಿ ವರ್ತಿಸಲು ಕೋರ್ಟ ತೀರ್ಪು ಸಹಕಾರಿಯಾಗಲಿದೆ ಎಂದಿದ್ದಾರೆ.