ಬೀದರ – ಕಳೆದ ನಾಲ್ಕು ದಿನಗಳಿಂದ ಬಿಡುವು ಕೊಟ್ಟು ಶಾಂತ ಇದ್ದ ಮಳೆರಾಯ ಮತ್ತೆ ಬೀದರ್ ನಲ್ಲಿ ರುದ್ರಾವತಾರ ತೋರಿದ್ದು ಸತತವಾಗಿ ಹಗಲು ರಾತ್ರಿ ಜಿಟಿ ಜಿಟಿ ಮಳೆ ಆರಂಭವಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ.
ಸತತ ಮಳೆಯಿಂದ ಕಾರಂಜಾ ಜಲಾಶಯಕ್ಕೆ ನೀರು ಹೆಚ್ಚಾಗಿ ಹಿಂದಕ್ಕೆ ಬರುತ್ತದೆ. ಹಿನ್ನೀರಿನಿಂದಾಗಿ ಮುಳುಗಡೆಯ ಭೀತಿ ಎದುರಾಗಿದೆ.
ಬೀದರದಾದ್ಯಂತ ನಿನ್ನೆಯಿಂದ ರಾತ್ರಿ ಹಗಲು ಸತತವಾಗಿ ಸುರಿಯುತ್ತಿರವ ಮಳೆಯಿಂದಾಗಿ ರಸ್ತೆ ಬದಿಯ ಮಣ್ಣು ಕುಸಿದಿದೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಔರಾದ ತಾಲೂಕಿನ ಚೌಧರಿ ಬೆಳಕುಣಿ ಗ್ರಾಮದ ಪ್ರಮುಖ ರಸ್ತೆ ಔರಾದ -ಭಾಲ್ಕಿ ರಸ್ತೆ ಕುಸಿದಿದೆ.
ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ