spot_img
spot_img

ರಾಜಾಜಿ ಕುರಿತ ಕೃತಿ – ನೀವು ಓದಲೇಬೇಕು

Must Read

- Advertisement -

ರಾಷ್ಟ್ರ ಕಂಡ ಅಪೂರ್ವ ನಾಯಕ ಚಕ್ರವರ್ತಿ ರಾಜಗೋಪಾಲಾಚಾರಿ. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಮಿದುಳಾಗಿ ಕೆಲಸಮಾಡಿದವರು ಅವರು. ತಮಗೆ ಅನಾಯಾಸವಾಗಿ ಒದಗಿಬಂದ ಕಾಂಗ್ರೆಸ್ಸಿನ ಅಧ್ಯಕ್ಷಸ್ಥಾನವನ್ನು ನಿರಾಕರಿಸಿದವರು ರಾಜಾಜಿ. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಆಗಿ ಕೆಲಸಮಾಡಿದವರು ಅವರು.

ಕೇಂದ್ರಸರಕಾರದಲ್ಲಿ ಗೃಹಮಂತ್ರಿಯಾಗಿ ಮದರಾಸಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಧೀಮಂತ.

ಕಾಂಗ್ರೆಸ್ಸನ್ನು ಅನೇಕ ಸಂಕಟಗಳಿಂದ ಪಾರುಮಾಡಿದ್ದ ವ್ಯಕ್ತಿ, ಕಾಂಗ್ರೆಸ್ಸನ್ನೇ ತೊರೆದು ಪ್ರತ್ಯೇಕ ಪಕ್ಷ ಕಟ್ಟಿದವರು.

- Advertisement -

“ಕಮ್ಯೂನಿಷ್ಟರೇ ದೇಶದ ಮೊದಲ ಶತ್ರುಗಳು” ಎಂದು ಬಹಿರಂಗವಾಗಿ ಘೋಷಿಸಿದ ಧೈರ್ಯಶಾಲಿ.

ಕೇವಲ ರಾಜಕಾರಣಿಯಾಗಿಯಷ್ಟೆ ಅಲ್ಲ, ಪತ್ರಕರ್ತರಾಗಿಯೂ ಲೇಖಕರಾಗಿಯೂ ಛಾಪು ಮೂಡಿಸಿದ್ದ ವಿಶಿಷ್ಟ ವ್ಯಕ್ತಿತ್ವ ರಾಜಾಜಿಯವರದ್ದು.

“ಅದ್ಭುತ ಅದಮ್ಯ ಚೇತನ ರಾಜಾಜಿ” ಕೃತಿಗೆ ಮುನ್ನುಡಿ ಬರೆದಿರುವ ಎಸ್. ಆರ್. ರಾಮಸ್ವಾಮಿಯವರು,”ಇಪ್ಪತ್ತನೆ ಶತಮಾನದಲ್ಲಿ ರಾಜಕಾರಣಿಗಳಿಗೇನೂ ಕೊರತೆಯಿರಲಿಲ್ಲ. ಆದರೆ ನಿಜಾರ್ಥದಲ್ಲಿ ‘ಮುತ್ಸದ್ದಿ’ (ಸ್ಟೇಟ್ಸ್ ಮನ್) ಆಗಿದ್ದವರೆಂದು ರಾಜಾಜಿಯವರ ಹೊರತು ಬೇರಾರನ್ನೂ ಹೆಸರಿಸುವುದು ದುಸ್ತರ”ಎಂದು ಹೇಳಿರುವುದೇ ರಾಜಾಜಿಯವರ ಸಮಗ್ರ ವ್ಯಕ್ತಿತ್ವವನ್ನು ನಮಗೆ ಪರಿಚಯಿಸುತ್ತದೆ.

- Advertisement -

ಮ. ಸು. ಮನ್ನಾರ್ ಕೃಷ್ಣರಾಯರು ಬರೆದ ಅಪೂರ್ವ ಜೀವನಚರಿತ್ರೆಗಳ ಸಾಲಿನಲ್ಲಿ ಇದೂ ಕೂಡಾ ಅತ್ಯಂತ ಮಹತ್ತ್ವದ್ದು.

ಪ್ರತಿಯೊಬ್ಬರೂ ಓದಲೇಬೇಕಾದ ಜೀವನಚರಿತ್ರೆ ಇದು. ರಾಜಾಜಿಯವರ ಜೀವನದ ವಿವರ ವಿವರವನ್ನೂ ಪರಿಚಯಿಸುವ ಈ ಕೃತಿ ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನೂ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಏಳುಬೀಳುಗಳ ಸೂಕ್ಷ್ಮ ನೋಟವನ್ನೂ ನೋಡುತ್ತದೆ.

ಅದ್ಭುತ_ಅದಮ್ಯ_ಚೇತನ_ರಾಜಾಜಿ (ಮುಖಬೆಲೆ: ರೂ.750.00) ಕೃತಿಯನ್ನು ಖರೀದಿಸಲು WhatsApp ಮಾಡಿ: 7483681708

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group