spot_img
spot_img

ಬಾಗಲಕೋಟೆಯಲ್ಲಿ ಸೆ.೨೨ಕ್ಕೆ  ರಾಜೇಂದ್ರ ಪರ್ವತೀಕರ ‘ಬದರಿಧಾಮದ ತಪೋನಿಧಿ’ ಕೃತಿ ಬಿಡುಗಡೆ 

Must Read

    ಬಾಗಲಕೋಟೆ: ನಾದಯೋಗಿ ದಿ.ದತ್ತಾತ್ರೇಯ ಪರ್ವತೀಕರ ಅವರು ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆಸಿ ‘ಬದರಿಧಾಮದ ತಪೋನಿಧಿ’ ಎಂಬ ಕೃತಿ ರಚಿಸಲಾಗಿದ್ದು, ಬಾಗಲಕೋಟೆ ನಗರದಲ್ಲೇ ಈ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಲೇಖಕ ರಾಜೇಂದ್ರ ಪರ್ವತೀಕರ ಹೇಳಿದರು.
ನಗರದ ವಿದ್ಯಾಗಿರಿ ವಿಪ್ರ ಅಭಿವೃದ್ಧಿ ಸಂಘದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ‘ಬದರಿಧಾಮದ ತಪೋನಿಧಿ’ ಕೃತಿಯ ಮುಖಪುಟ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀಣಾ ವಾದನದ ಮೂಲಕ ಹಿಂದುಸ್ಥಾನಿ ಶಾಸ್ತಿçÃಯ ಸಂಗೀತಕ್ಕೆ ಅದ್ವಿತೀಯ ಕೊಡುಗೆ ಸಲ್ಲಿಸಿದ ಪರ್ವತೀಕರ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮೂಲದವರು. ಇವರು ನಾದಯೋಗಿ ಎಂದೇ ಹೆಸರಾಗಿ ಬಾಗಲಕೋಟೆಯ ಕೀರ್ತಿಯನ್ನು ಭಾರತದಾದ್ಯಂತ ಬೆಳಗಿದ್ದಾರೆ. ಇಂಥ ಸಂಗೀತ ಸಾಧಕರ ಕುರಿತು ಅಪರೂಪದ ಕೃತಿ ರಚಿಸಲಾಗಿದೆ. ಪರ್ವತೀಕರ ಅವರ ತವರು ಜಿಲ್ಲೆ ಎನಿಸಿದ ಬಾಗಲಕೋಟೆಯಲ್ಲೇ ಸೆ.೨೨ರಂದು ಈ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ಇದರೊಂದಿಗೆ ಸಂಗೀತ ಕಾರ್ಯಕ್ರಮ, ಹಕ್ಕಿಯ ಹೆಗಲೇರಿ ನಾಟಕ ಪ್ರದರ್ಶನ ಕೂಡ ನಡೆಯಲಿದೆ ಎಂದರು.
ಪರ್ವತೀಕರ ಮನೆತನದ ನಿವೃತ್ತ ಉಪನ್ಯಾಸಕ ಸುರೇಶ ಪರ್ವತೀಕರ ಮಾತನಾಡಿ, ಗುಳೇದಗುಡ್ಡದಲ್ಲಿ ಮುವತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರತಿ ವರ್ಷ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಾದಯೋಗಿ ಪರ್ವತೀಕರ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತಿದೆ. ಅವರ ಬಗ್ಗೆ ರಚಿಸಲಾದ ಕೃತಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ. ಈ ಕೃತಿ ಬಿಡುಗಡೆ ಸಮಾರಂಭದ ಯಶಸ್ಸಿಗೆ ಬಾಗಲಕೋಟೆ ಹಿರಿಯರು, ಸಂಗೀತಾಸಕ್ತರು ಕೈಜೋಡಿಸಬೇಕು ಎಂದು ವಿನಂತಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಾಸೂರಕರ್, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ ಮಾತನಾಡಿ, ನಾದಯೋಗಿ ಪರ್ವತೀಕರ ಅವರು ಬಾಗಲಕೋಟೆಯ ಹೆಮ್ಮೆಯ ಸಂಗೀತ ಸಾಧಕರು. ಅವರ ಕೃತಿ ಬಿಡುಗಡೆ ಸಮಾರಂಭಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಉದ್ಯಮಿ ಇಂದ್ರಜೀತ್ ದರ್ಬಾರ, ವಾಸುದೇವ ಢಾಣಕಶಿರೂರ, ವಾಸುದೇವ ವಿನೋದಿನಿ ನಾಟ್ಯ ಸಭೆ ಕಾರ್ಯದರ್ಶಿ ಲಕ್ಷ್ಮಿ ನಾರಾಯಣಾಚಾರ್ ಗುಡಿ ಮಾತನಾಡಿದರು. ವಿ.ಗಿರಿಯಾಚಾರ್, ಪರಿಮಳಾ ಅವಧಾನಿ, ಶ್ರೀ ಹರಿ ಪಾಟೀಲ, ಕೆ.ಬಿ.ದೇಸಾಯಿ, ವಿನಯ ಪರ್ವತೀಕರ, ರಮೇಶ ಚಿಲ್ಲಾಪೂರ, ಶಶಿ ದೇಶಪಾಂಡೆ, ಪವನ ಸೀಮಿಕೇರಿ, ಪ್ರವೀಣ ಮಂಕಣಿ, ಸಂಕಲ್ಪ ದೇಸಾಯಿ, ಕಿರಣ ಕುಲಕರ್ಣಿ ಇತರರಿದ್ದರು. ಸಚಿನ್ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ರಂಗಕರ್ಮಿ ಅನಂತ ಪುರೋಹಿತ ನಿರೂಪಿಸಿದರು.
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group